ಅಕ್ಕನ ಚುಡಾಯಿಸಿದ ಪುಂಡರ ಪ್ರಶ್ನಿಸಿದ 15 ಬಾಲಕನ ಮೇಲೆ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಘಟನೆ ನಡೆದಿದೆ. ಟ್ಯೂಶನ್‌ಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಇದೀಗ ಆರೋಪಿಗಳಿಗಾಗಿ ಹುಡುಕಾಟ ನಡೆಲಾಗುತ್ತಿದೆ.

ಗುಂಟೂರು(ಜೂ.16): ಅಕ್ಕನ ಹಿಂದೆ ಕಾಮುಕರ ಗ್ಯಾಂಗ್ ಕೆಲ ದಿನಗಳಿಂದ ಸುತ್ತಾಡುತ್ತಿತ್ತು. ಚುಡಾಯಿಸುವುದು, ಪ್ರೀತಿಸಲು ಬಲವಂತ ಮಾಡುತ್ತಿದ್ದ ಈ ಪುಂಡರನ್ನು 10ನೇ ತರಗತಿಯಲ್ಲಿ ಓದುತ್ತಿದ್ದ ತಮ್ಮ ಪ್ರಶ್ನಿಸಿದ್ದಾನೆ. ಇಷ್ಟೆ ನೋಡಿ, ಕಾಮುಕರ ಗ್ಯಾಂಗ್ ಈ 15 ವರ್ಷದ ಬಾಲಕನನ್ನು ಅಡ್ಡ ಹಾಕಿ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಈ ಭೀಕರ ಘಟನೆಗೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.ಮೃತ ಬಾಲಕನನ್ನು ಅಮರನಾಥ್ ಎಂದು ಗುರುತಿಸಲಾಗಿದೆ.

ಅಮರನಾಥ್ ಅಕ್ಕ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈಕೆಯನ್ನು ಪುಂಡ ಪೋಕರಿಗಳ ಗ್ಯಾಂಗ್ ಪ್ರತಿ ದಿನ ಫಾಲೋ ಮಾಡುವುದು, ಚುಡಾಯಿಸುವುದು ಮಾಡಿದ್ದಾರೆ. ಪ್ರೀತಿಸುವಂತೆ ಒತ್ತಾಯಿಸುವುದು. ಆಕೆಯನ್ನು ಅಡ್ಡಗಟ್ಟಿ, ಸಾರ್ವಜನಿಕವಾಗಿ ಐ ಲವ್ ಯೂ ಹೇಳುವಂತೆ ಪೀಡಿಸುತ್ತಿದ್ದ ಗ್ಯಾಂಗ್ ವಿರುದ್ಧ ತಮ್ಮ, 15 ವರ್ಷದ ಬಾಲಕ ಗರಂ ಆಗಿದ್ದಾನೆ. ಅಕ್ಕನ ಚುಡಾಯಿಸುತ್ತಿದ್ದ ಪುಂಡರನ್ನು ಪ್ರಶ್ನಿಸಿದ್ದಾನೆ. ಮತ್ತೊಮ್ಮೆ ಅಕ್ಕನಿಗೆ ಸಮಸ್ಯೆ ಮಾಡಿದರೆ ದೂರು ನೀಡುವುದಾಗಿ ಅಮರನಾಥ್ ಬೆದರಿಸಿದ್ದಾನೆ.

ಮದುವೆ ಮುಗಿಸಿ ಹಿಂದಿರುಗುತ್ತಿದ್ದ ನವ ದಂಪತಿ ಕಾರು ಅಪಘಾತ, ನಾಲ್ವರು ಸಜೀವ ದಹನ!

ಈತನ ಬೆದರಿಕೆಗೆ ಪುಂಡ ಪೋಕರಿಗಳ ಗ್ಯಾಂಗ್ ಉರಿದು ಹೋಗಿದೆ. ಪೊಲೀಸರಿಗೆ ದೂರು ನೀಡುವ ಮೊದಲೇ ಈತನ ಕತೆ ಮುಗಿಸಲು ಈ ಗ್ಯಾಂಗ್ ಸ್ಕೆಚ್ ಹಾಕಿದೆ. ಅಮರನಾಥ್ ಪ್ರತಿ ದಿನ ಟ್ಯೂಶನ್ ತೆರಳುತ್ತಾನೆ. ಹೀಗೆ ಸಂಜೆ 6 ಗಂಟೆ ಹೊತ್ತಿಗೆ ಸೈಕಲ್ ಏರಿ ಟ್ಯೂಶನ್‌ಗೆ ಹೊರಟಿದ್ದಾನೆ. ಮನೆಯಿಂದ ಕೆಲ ದೂರ ತೆರಳುತ್ತಿದ್ದಂತೆ ನಿರ್ಜನ ಪ್ರದೇಶದಲ್ಲಿ ಈತನ ಇದೇ ಪೋಕರಿಗಳ ಗ್ಯಾಂಗ್ ಅಡ್ಡಗಟ್ಟಿದೆ.

ಪೊಲೀಸರಿಗೆ ದೂರು ನೀಡುತ್ತಿಯಾ? ನಿನ್ನ ಅಕ್ಕನ ಮತ್ತೆ ಚುಡಾಯಿಸುತ್ತೇವೆ ಏನು ಮಾಡುತ್ತೀಯಾ ಎಂದು ಪುಂಡ ಪೋಕರಿಗಳ ಗ್ಯಾಂಗ್ ಅಮರನಾಥನಿಗೆ ಸವಾಲು ಹಾಕಿದ್ದಾರೆ. ಆದರೆ ಏನು ಮಾತನಾಡದೆ ಮುಂದೆ ಸಾಗಲು ಮುಂದಾದ ಅಮರನಾಥನನ್ನು ನಿಲ್ಲಿಸಿ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಒಂದೇ ಸಮನೆ ಹೊತ್ತಿಕೊಂಡಿದೆ. ಇತ್ತ ಬಾಲಕ ಅಮರನಾಥ ಕಿರುಚಾಡಲು ಶುರುಮಾಡಿದ್ದಾನೆ. ಇದೇ ವೇಳೆ ಈ ಪೋಕರಿಗಳ ಗ್ಯಾಂಗ್ ಪರಾರಿಯಾಗಿದೆ. ಬಾಲಕನ ಚೀರಾಟ ಕೇಳಿದ ಕೆಲವರು ಓಡೋಡಿ ಬಂದಿದ್ದಾರೆ.

Honour Killing: ಪ್ರೀತಿ ಮಾಡಿದ್ದೇ ತಪ್ಪಾಯ್ತಾ..? ಯುವತಿಗೆ ಕುಟುಂಬಸ್ಥರಿಂದ ತೀವ್ರ ಚಿತ್ರಹಿಂಸೆ, ಸಜೀವ ದಹನ

ಹೆಚ್ಚಿನ ಪೆಟ್ರೋಲ್ ಸುರಿದ ಕಾರಣ ಬೆಂಕಿ ಜ್ವಾಲೆಯಲ್ಲಿ ಅಮರನಾಥ ಬಹುತೇಕ ಬೆಂದು ಹೋಗಿದ್ದಾನೆ. ತಕ್ಷಣವೇ ಬೆಂಕಿ ನಂದಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಸುಟ್ಟ ಗಾಯಗಳಾಗಿರುವ ಕಾರಣ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆ್ಯಂಬುಲೆನ್ಸ್ ಮೂಲಕ ಸಾಗುವ ವೇಳೆ ಪೊಲೀಸರಿಗೆ ಕೆಲ ಹೆಸರುಗಳನ್ನು ಹೇಳಿದ್ದಾನೆ. ಅಕ್ಕನ ಚುಡಾಯಿಸಿದ ಗ್ಯಾಂಗ್ ಕುರಿತು ಮಾಹಿತಿ ನೀಡಿದ್ದಾರೆ. ವೆಂಕಿ ಅನ್ನೋ ಹೆಸರು ಬಾಯ್ಬಿಬಿಟ್ಟಿದ್ದಾನೆ. ಹೆಟ್ಟಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಬಾಲಕ ಮೃತಪಟ್ಟಿದ್ದಾನೆ ಎಂದು ಬಾಲನಕ ಅಜ್ಜ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಈ ಕಾಮುಕರ ಗ್ಯಾಂಗ್‌ಗಾಗಿ ಪೊಲೀಸರು ಹುಡುಕಾಟ ಶುರುವಮಾಡಿದ್ದಾರೆ.