Honour Killing: ಪ್ರೀತಿ ಮಾಡಿದ್ದೇ ತಪ್ಪಾಯ್ತಾ..? ಯುವತಿಗೆ ಕುಟುಂಬಸ್ಥರಿಂದ ತೀವ್ರ ಚಿತ್ರಹಿಂಸೆ, ಸಜೀವ ದಹನ
ಮಹಿಳೆ ತನ್ನಿಷ್ಟದ ಪುರುಷನನ್ನು ಮದುವೆಯಾಗಲು ಬಯಸಿದ್ದಳು. ಈ ಹಿನ್ನೆಲೆ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಲಾಹೋರ್ (ಮೇ 29, 2023): ಭೀಕರ ಘಟನೆಯೊಂದರಲ್ಲಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 20 ವರ್ಷದ ಯುವತಿಯನ್ನು 'ಗೌರವ'ದ ಹೆಸರಿನಲ್ಲಿ ಸಜೀವ ದಹನ ಮಾಡಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಲಾಹೋರ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಜಾಂಗ್ ಜಿಲ್ಲೆಯ ಗರ್ ಮಹಾರಾಜದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಯುವತಿಗೆ ಕುಟುಂಬಸ್ಥರು ತೀವ್ರವಾಗಿ ಚಿತ್ರಹಿಂಸೆ ನೀಡಿದ್ದು, ಅಲ್ಲದೆ, ರಜಬ್ ಅಲಿ ಹಾಗೂ ಆತನ ಮಕ್ಕಳಾದ ಜಬ್ಬಾರ್ ಮತ್ತು ಅಮೀರ್ ಹಾಗೂ ಇತರ ಕೆಲವು ಕುಟುಂಬ ಸದಸ್ಯರು ಮೇ 26 ರಂದು ತಮ್ಮ ಚಿಕ್ಕ ಮಗಳನ್ನು ತಮ್ಮ ಮನೆಯಲ್ಲಿ ಸುಟ್ಟು ಹಾಕಿದ್ದಾರೆ ಎಂದು ತನಿಖಾ ಅಧಿಕಾರಿ ಮುಹಮ್ಮದ್ ಅಜಮ್ ಭಾನುವಾರ ಪಿಟಿಐಗೆ ತಿಳಿಸಿದ್ದಾರೆ.
ಇದನ್ನು ಓದಿ: ಮಗಳ ಕತ್ತು ಹಿಸುಕಿ ಬಾಯಿಗೆ ಟಾಯ್ಲೆಟ್ ಕ್ಲೀನರ್ ಸುರಿದ ಪಾಪಿ ತಂದೆ: ಸಾವು ಬದುಕಿನ ನಡುವೆ ಹೋರಾಟ!
ಮಹಿಳೆ ತನ್ನಿಷ್ಟದ ಪುರುಷನನ್ನು ಮದುವೆಯಾಗಲು ಬಯಸಿದ್ದಳು. ಈ ಹಿನ್ನೆಲೆ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. "ಒಂದು ದಿನದ ಹಿಂದೆ, ಅವಳು ಮನೆಯಿಂದ ಹೊರಟು ಹೋಗಿದ್ದಳು ಮತ್ತು ಹಿಂದಿರುಗುವ ಮೊದಲು ಅವನೊಂದಿಗೆ ಸ್ವಲ್ಪ ಸಮಯ ಕಳೆದಿದ್ದಳು" ಎಂದೂ ಅವರು ಹೇಳಿದರು. ಬಳಿಕ ಮನೆಗೆ ಹಿಂದಿರುಗಿದ ನಂತರ, ಆಕೆಯ ತಂದೆ, ಇಬ್ಬರು ಸಹೋದರ ಮತ್ತು ಕೆಲವು ಕುಟುಂಬದ ಮಹಿಳೆಯರು ಅವಳನ್ನು ಹಗ್ಗದಿಂದ ಕಟ್ಟಿ ಬೆಂಕಿ ಹಚ್ಚುವ ಮೊದಲು ಆಕೆಯನ್ನು ತೀವ್ರವಾಗಿ ಹಿಂಸಿಸಿದರು ಎಂದೂ ಅಜಮ್ ಹೇಳಿದರು.
ಸಂತ್ರಸ್ತೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವಳು ಸುಟ್ಟಗಾಯಗಳಿಂದ ಮೃತಪಟ್ಟಳು.. "ಅವಳ ಸಾವಿನ ಮೊದಲು, ಅವಳು ಬೆಂಕಿ ಹಚ್ಚಿದವರ ಬಗ್ಗೆ ಪೊಲೀಸರಿಗೆ ಹೇಳಿದ್ದಳು" ಎಂದೂ ಅವರು ಹೇಳಿದರು.
ಇದನ್ನೂ ಓದಿ: ಮತ್ತೊಂದು ಮರ್ಯಾದಾ ಹತ್ಯೆ: ಹೆತ್ತ ತಾಯಿ, ಮಗನನ್ನೇ ಕೊಚ್ಚಿ ಕೊಲೆ ಮಾಡಿದ ಪಾಪಿ ತಂದೆ!
ಈ ಸಂಬಂಧ ಸಂತ್ರಸ್ತೆಯ ತಂದೆ, ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಶಂಕಿತರು ತಮ್ಮ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ಪಡುವುದಿಲ್ಲ ಎಂದು ಹೇಳಿದ್ದು, ಬಾಲಕಿ ಕುಟುಂಬದ ಗೌರವಕ್ಕೆ ಧಕ್ಕೆ ತಂದಿದ್ದಾಳೆ ಮತ್ತು ಈ ಸ್ಥಿತಿಗೆ ಅರ್ಹಳು ಎಂದು ಹೇಳಿದ್ದಾಗಿಯೂ ಅಧಿಕಾರಿ ಹೇಳಿದರು.
ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಪ್ರತಿ ವರ್ಷ ನೂರಾರು ಮಹಿಳೆಯರನ್ನು ಮರ್ಯಾದೆಯ ಹೆಸರಿನಲ್ಲಿ ಕೊಲ್ಲಲಾಗುತ್ತದೆ. ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (HRCP) ಕಳೆದ ಒಂದು ದಶಕದಲ್ಲಿ ವಾರ್ಷಿಕ ಸರಾಸರಿ 650 ಮರ್ಯಾದಾ ಹತ್ಯೆಗಳನ್ನು ವರದಿ ಮಾಡಿದೆ. ಆದರೆ ಹೆಚ್ಚಿನವು ವರದಿಯಾಗದ ಕಾರಣ, ನೈಜ ಸಂಖ್ಯೆಯು ಬಹುಪಾಲು ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: UP Honour Killing: ಹಿಂದುಳಿದ ಜಾತಿಯ ಯುವಕನೊಂದಿಗೆ ಪ್ರೇಮ; ಮಗಳನ್ನು ಕೊಂದು ಬೆಂಕಿಯಿಟ್ಟ ಅಪ್ಪ