ಕಾಮುಕ ಪ್ರಿನ್ಸಿಪಾಲ್ ಕಿರುಕುಳ: ಸರ್ಕಾರಿ ಶಾಲೆಯ 142 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ!
ಹರಿಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ 6 ವರ್ಷಗಳಲ್ಲಿ 142 ಅಪ್ರಾಪ್ತ ಬಾಲಕಿಯರು ಲೈಂಗಿಕ ದೌರ್ಜನ್ಯ, ಕಿರುಕುಳ ಅನುಭವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಿಂದ್ (ನವೆಂಬರ್ 23, 2023): ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರಿಂದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳವನ್ನು ಆರೋಪಿಸಿದ ಅಪ್ರಾಪ್ತ ಬಾಲಕಿಯರ ಸಂಖ್ಯೆ ಈಗ 142 ಕ್ಕೆ ಏರಿದೆ. 6 ವರ್ಷಗಳ ಅವಧಿಯಲ್ಲಿ ಹರಿಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಇಷ್ಟು ಬಾಲಕಿಯರು ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಅನುಭವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ನೇತೃತ್ವದ ಸಮಿತಿಯು 390 ಬಾಲಕಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಈ ಪೈಕಿ ನಾವು 142 ಸಂತ್ರಸ್ತ ಬಾಲಕಿಯರ ವಿವರಗಳನ್ನು ಪ್ರಕರಣದ ಮುಂದಿನ ಕ್ರಮಕ್ಕಾಗಿ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಳಿಸಿದ್ದೇವೆ. 142 ಬಾಲಕಿಯರ ಪೈಕಿ ಈಗ ಜೈಲಿನಲ್ಲಿರುವ ಆರೋಪಿ ಪ್ರಾಂಶುಪಾಲರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಜಿಂದ್ ಉಪ ಆಯುಕ್ತ ಮೊಹಮ್ಮದ್ ಇಮ್ರಾನ್ ರಾಜಾ ಗುರುವಾರ ಹೇಳಿದ್ದಾರೆ.
ಇದನ್ನು ಓದಿ: ಮದುವೆಯಲ್ಲಿ ರಸಗುಲ್ಲಾಕ್ಕಾಗಿ ಹೊಡೆದಾಟ: 6 ಜನ ಆಸ್ಪತ್ರೆ ಪಾಲು; ಎಫ್‌ಐಆರ್ ದಾಖಲು
ಆರಂಭದಲ್ಲಿ, 15 ಬಾಲಕಿಯರು ತಮ್ಮ ಶೋಷಣೆಯ ಬಗ್ಗೆ ಗಮನ ಸೆಳೆಯಲು ಆಗಸ್ಟ್ 31, 2023 ರಂದು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ, ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮಹಿಳಾ ಆಯೋಗ ಮತ್ತು ಇತರರಿಗೆ ಪತ್ರ ಕಳುಹಿಸಿದ್ದರು ಎಂದೂ ತಿಳಿದುಬಂದಿದೆ. ಬಳಿಕ, ಈ ಪ್ರಕರಣ ದೇಶದ ಗಮನ ಸೆಳೆದಿದ್ದು, ನಂತರ ಆ ಪ್ರಾಂಶುಪಾಲರನ್ನು ಶಾಲೆಯಿಂದ ಅಮಾನತುಗೊಳಿಸಿ ಅವರನ್ನು ಬಂಧಿಸಲಾಗಿತ್ತು.
ಇನ್ನು, 2 ತಿಂಗಳ ಹಿಂದೆ ಸಂಭವಿಸಿದ 60 ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ತನಿಖೆಗಾಗಿ ಹರ್ಯಾಣ ಸರ್ಕಾರವು ಹೊಸ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಹಾಗೂ, ಮಹಿಳಾ ಐಪಿಎಸ್ ಅಧಿಕಾರಿ ನೇತೃತ್ವದ ಎಸ್‌ಐಟಿ ಸಂತ್ರಸ್ತರಿಗೆ ಕೌನ್ಸೆಲಿಂಗ್ ಸೆಷನ್‌ಗಳನ್ನು ನಡೆಸಿ 10 ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದೆ. ದುರ್ವರ್ತನೆ ಆರೋಪದ ಹಿನ್ನೆಲೆಯಲ್ಲಿ ಉಚ್ಚನ ಕಲಾನ್ ಎಸ್‌ಎಚ್‌ಒ ಅವರನ್ನು ತಂಡದಿಂದ ತೆಗೆದುಹಾಕಲಾಗಿದೆ.
ಇದನ್ನೂ ಓದಿ: ಹುಲ್ಲಿನ ಬಣವೆಯಲ್ಲಿ ಪ್ರಿಯಕರನ ಜತೆ ಪತ್ನಿ ರಾಸಲೀಲೆ: ಬಣವೆಗೆ ಬೆಂಕಿ ಹಚ್ಚಿ ಪತ್ನಿ ಜೀವಂತವಾಗಿ ಸುಟ್ಟು ಹಾಕಿದ ಪತಿ
ಈ ತನಿಖೆಯು ಆಕ್ರಮಣ, ತಪ್ಪು ಸಂಯಮ, ಅಕ್ರಮ ಬಂಧನ ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ಆರೋಪಗಳನ್ನು ಒಳಗೊಂಡಿರುತ್ತದೆ. ನ್ಯಾಯಯುತ ತನಿಖೆಗೆ ಧನಾತ್ಮಕ ಹೆಜ್ಜೆಯಾಗಿ ಎಸ್‌ಐಟಿ ರಚನೆಯನ್ನು ಕಾರ್ಯಕರ್ತರು ಸ್ವಾಗತಿಸಿದ್ದಾರೆ.
ಇದನ್ನೂ ಓದಿ: ಉದ್ಯಮಿ ಮನೆ ದರೋಡೆಗೆ ಬಂದೋರು ಕಳ್ಳತನದ ಜತೆಗೆ ಮನೆಯೊಡತಿಯ ಸಾಮೂಹಿಕ ಅತ್ಯಾಚಾರ ಮಾಡಿದ್ರು!