ಉದ್ಯಮಿ ಮನೆ ದರೋಡೆಗೆ ಬಂದೋರು ಕಳ್ಳತನದ ಜತೆಗೆ ಮನೆಯೊಡತಿಯ ಸಾಮೂಹಿಕ ಅತ್ಯಾಚಾರ ಮಾಡಿದ್ರು!
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಉದ್ಯಮಿಯ ಮನೆಯಲ್ಲಿ ದರೋಡೆ ನಡೆದಿದ್ದು, ಅವರು ತಮ್ಮ ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ವೈದ್ಯರನ್ನು ಭೇಟಿ ಮಾಡಲು ಹೋಗಿದ್ದರು. ಈ ವೇಳೆ, ಐವರು ಮನೆಗೆ ನುಗ್ಗಿ, ಮನೆಯಲ್ಲಿ ಒಬ್ಬರೇ ಇದ್ದ ಉದ್ಯಮಿಯ ಪತ್ನಿಯನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಬಿಜ್ನೋರ್ (ನವೆಂಬರ್ 17): ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಉದ್ಯಮಿಯೊಬ್ಬರನ್ನು ದರೋಡೆ ಮಾಡಲಾಗಿದ್ದು, ಜತೆಗೆ ಅವರ ಪತ್ನಿಯ ಮೇಲೆ ಗುಂಪೊಂದು ಸಾಮೂಹಿಕ ಅತ್ಯಾಚಾರವೆಸಗಿದ್ದು, ಹಾಗೂ ಸಿಗರೇಟ್ ತುಂಡಿನಿಂದ ಆಕೆಯ ಮೈ ಮೇಲೆ ಸುಟ್ಟಿರುವ ಭೀಕರ ಘಟನೆ ನಡೆದಿದೆ.
ಬಿಜ್ನೋರ್ ಜಿಲ್ಲೆಯ ಉದ್ಯಮಿಯ ಮನೆಯಲ್ಲಿ ದರೋಡೆ ನಡೆದಿದ್ದು, ಅವರು ತಮ್ಮ ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ವೈದ್ಯರನ್ನು ಭೇಟಿ ಮಾಡಲು ಹೋಗಿದ್ದರು. ಈ ವೇಳೆ, ಐವರು ಮನೆಗೆ ನುಗ್ಗಿ, ಮನೆಯಲ್ಲಿ ಒಬ್ಬರೇ ಇದ್ದ ಉದ್ಯಮಿಯ ಪತ್ನಿಯನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಕೆನಡಾ, ಇಸ್ರೇಲ್‌ನಿಂದ ನಿಮಗೂ ಕಾಲ್ ಬರ್ತಿದ್ಯಾ? ಲಕ್ಷಾಂತರ ರೂ. ಹಣ ಕಳ್ಕೋಬೋದು ಹುಷಾರ್!
ಮದ್ಯ ಸೇವಿಸಿ ಪತ್ನಿಯನ್ನು ಸಿಗರೇಟ್ ತುಂಡುಗಳಿಂದ ಸುಟ್ಟು ಹಾಕಿದ ಕಳ್ಳರು
ಇನ್ನು, ದರೋಡೆಕೋರರು ಮದ್ಯ ಸೇವಿಸಿ ತನ್ನ ಹೆಂಡತಿಯನ್ನು ಸಿಗರೇಟ್ ತುಂಡುಗಳಿಂದ ಸುಟ್ಟು ಹಾಕಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದಾರೆ. ಜತೆಗೆ ಮನೆಯಲ್ಲಿ ಅಳವಡಿಸಿದ್ದ ಚಿನ್ನಾಭರಣ, 2 ಕೆಜಿ ಬೆಳ್ಳಿ ವಸ್ತುಗಳು, 1.5 ಲಕ್ಷ ನಗದು, ಸ್ಕೂಟರ್ ಹಾಗೂ ಎಲ್‌ಇಡಿ ಟಿವಿಯನ್ನು ಕದ್ದೊಯ್ದಿದ್ದಾರೆ ಎಂದೂ ತಿಳಿದುಬಂದಿದೆ.
ದರೋಡೆಕೋರರು ಬೆಲೆಬಾಳುವ ವಸ್ತುಗಳನ್ನು ಇಡಲಾಗಿದ್ದ ಅಲ್ಮೇರಾಗಳು ಮತ್ತು ಕೊಠಡಿಗಳ ಬೀಗಗಳನ್ನು ಕತ್ತರಿಸಿ ಕಳ್ಳತನ ಮಾಡಿದ್ದಲ್ಲದೆ ಮಹಿಳೆಗೆ ಮದ್ಯಪಾನ ಮಾಡಿಸಿದ್ದಾರೆ. ಪೊಲೀಸರು ಮೊದಲು ವಿಷಯವನ್ನು ಹತ್ತಿಕ್ಕಲು ಪ್ರಯತ್ನಿಸಿದರು, ಆದರೆ ಪ್ರಕರಣವು ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ ದೂರು ದಾಖಲಿಸಿದರು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಪಕ್ಕದ ಮನೆ ಯುವಕನ ಜತೆ ಜಗಳ: ವ್ಯಕ್ತಿಯ ಜನನಾಂಗವನ್ನೇ ಕತ್ತರಿಸಿದ ಮಹಿಳೆ!
ಅಕ್ಟೋಬರ್ 19 ರಂದು ಸಹ ದರೋಡೆ ಮಾಡಲಾಗಿತ್ತು
ಇದಲ್ಲದೆ, ಅಕ್ಟೋಬರ್ 19 ರಂದು ತನ್ನನ್ನು ದರೋಡೆ ಮಾಡಲಾಗಿದೆ ಎಂದೂ ಉದ್ಯಮಿ ಹೇಳಿಕೊಂಡಿದ್ದಾರೆ. ಆಗ ದರೋಡೆಕೋರರು ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡು 80,000 ರೂ. ಕದ್ದಿದ್ದರು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ದರೋಡೆಕೋರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದೂ ಹೇಳಿದ್ದರು.
ಈ ಮಧ್ಯೆ, ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಜಾದೌನ್ ಅವರು ಅಕ್ಟೋಬರ್ 19 ರ ಪ್ರಕರಣದಲ್ಲಿ ದೂರು ದಾಖಲಿಸುವ ಬದಲು ಉದ್ಯಮಿಗೆ ಭರವಸೆ ನೀಡಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಠಾಣೆಯ ಪ್ರಭಾರಿ ವಿಕಾಸ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಉತ್ತರ ಪ್ರದೇಶ ಪೊಲೀಸರು ಸಾಮೂಹಿಕ ಅತ್ಯಾಚಾರ ಮತ್ತು ದರೋಡೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದುಬಾರಿ ಐಫೋನ್ 15 ಪ್ರೋ ಮ್ಯಾಕ್ಸ್ ಆರ್ಡರ್ ಮಾಡಿದ ವ್ಯಕ್ತಿಗೆ ನಕಲಿ ಆಂಡ್ರಾಯ್ಡ್ ಫೋನ್ ನೀಡಿದ ಆ್ಯಪಲ್ ಸಂಸ್ಥೆ!