ಮದುವೆಯಲ್ಲಿ ರಸಗುಲ್ಲಾಕ್ಕಾಗಿ ಹೊಡೆದಾಟ: 6 ಜನ ಆಸ್ಪತ್ರೆ ಪಾಲು; ಎಫ್‌ಐಆರ್ ದಾಖಲು
ಮದುವೆ ಊಟದಲ್ಲಿ ರಸಗುಲ್ಲಾಗಳನ್ನು ಪಡೆಯಲು ಯತ್ನಿಸುತ್ತಿದ್ದ ಅತಿಥಿಗಳ ನಡುವೆ ವಾಗ್ವಾದ ನಡೆದಿದೆ. ಈ ಜಗಳಕ್ಕಾಗಿ ಪ್ಲೇಟ್ ಮತ್ತು ಚಮಚಗಳನ್ನೇ ಊಟ ಮಾಡುವವರು ಆಯುಧಗಳಾಗಿ ಬಳಸಿದ್ದಾರೆ.
ಆಗ್ರಾ (ನವೆಂಬರ್ 21, 2023): ಮದುವೆಗೆ ಬಹುತೇಕರು ವಧು - ವರರಿಗೆ ಆಶೀರ್ವಾದ ಮಾಡಲು ಹೋದ್ರೆ, ಕೆಲವರಂತೂ ಊಟ ಮಾಡೋಕಂತಾನೇ ಹೋಗ್ತಾರೆ. ಮದುವೆಯಲ್ಲಿ ಪರಿಚಯದವರು ಯಾರೂ ಇಲ್ಲದಿದ್ದರೂ ಮದ್ವೆ ಊಟಕ್ಕೆ ಹೋಗೋರ ಸಂಖ್ಯೆಯೂ ಇದೆ. ಇದೇ ರೀತಿ, ಉತ್ತರ ಪ್ರದೇಶದಲ್ಲಿ ವಿವಾಹ ಸಮಾರಂಭದಲ್ಲಿ ಮದುವೆಯಲ್ಲಿ ಊಟದ ವಿಚಾರಕ್ಕೆ, ಅದ್ರಲ್ಲೂ ರಸಗುಲ್ಲಾಗಾಗಿ ಜಗಳ ನಡೆದು 6 ಜನ ಆಸ್ಪತ್ರೆ ಪಾಲಾಗಿದ್ದಾರೆ.
ಹೌದು, ಮದುವೆ ಊಟದಲ್ಲಿ ರಸಗುಲ್ಲಾಗಳನ್ನು ಪಡೆಯಲು ಯತ್ನಿಸುತ್ತಿದ್ದ ಅತಿಥಿಗಳ ನಡುವೆ ವಾಗ್ವಾದ ನಡೆದಿದೆ. ಈ ಜಗಳಕ್ಕಾಗಿ ಪ್ಲೇಟ್ ಮತ್ತು ಚಮಚಗಳನ್ನೇ ಊಟ ಮಾಡುವವರು ಆಯುಧಗಳಾಗಿ ಬಳಸಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: ಹುಲ್ಲಿನ ಬಣವೆಯಲ್ಲಿ ಪ್ರಿಯಕರನ ಜತೆ ಪತ್ನಿ ರಾಸಲೀಲೆ: ಬಣವೆಗೆ ಬೆಂಕಿ ಹಚ್ಚಿ ಪತ್ನಿ ಜೀವಂತವಾಗಿ ಸುಟ್ಟು ಹಾಕಿದ ಪತಿ
ಈ ಗಲಾಟೆಯಲ್ಲಿ ಮಹಿಳೆ ಸೇರಿದಂತೆ 6 ಜನ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಶಂಶಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಪ್ರದೇಶದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅನಿಲ್ ಶರ್ಮಾ, ಶಿಬ್ಲು ಕುಶ್ವಾಹಾ ಅವರ ಮನೆಯಲ್ಲಿ ಮದುವೆ ಇತ್ತು. ಈ ವೇಳೆ 2 ಗುಂಪುಗಳು ರಸಗುಲ್ಲಾಗಳಿಗಾಗಿ ಜಗಳವಾಡಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು.
ಇದನ್ನೂ ಓದಿ: ಉದ್ಯಮಿ ಮನೆ ದರೋಡೆಗೆ ಬಂದೋರು ಕಳ್ಳತನದ ಜತೆಗೆ ಮನೆಯೊಡತಿಯ ಸಾಮೂಹಿಕ ಅತ್ಯಾಚಾರ ಮಾಡಿದ್ರು!
ಅಲ್ಲದೆ, ತಟ್ಟೆ, ಚಮಚ, ಅದೂ ಸಾಕಾಗದೆ ಕೋಲುಗಳಿಂದಲೂ ಈ ಎರಡು ಗುಂಪುಗಳ ಜನ ಪರಸ್ಪರ ಹಲ್ಲೆ ನಡೆಸಿದ್ದಾರೆ. ನಂತರ ಪೊಲೀಸರು ಹೋಗಿ ಜಗಳ ನಿಲ್ಲಿಸಿದ್ದಾರೆ. ಅಲ್ಲದೆ, ಭಗವಾನ್ ದೇವಿ, ಯೋಗೇಶ್, ಮನೋಜ್, ಕೈಲಾಶ್, ಧರ್ಮೇಂದ್ರ ಮತ್ತು ಪವನ್ ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಈ ಜಗಳದಲ್ಲಿ ನಾಲ್ವರು ಕುಟುಂಬ ಸದಸ್ಯರು ಗಾಯಗೊಂಡಿದ್ದಾರೆಂದು ಗೌರಿಶಂಕರ್ ಶರ್ಮಾ ಅವರು ನೀಡಿದ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.
ಇದನ್ನು ಓದಿ: ಕೆನಡಾ, ಇಸ್ರೇಲ್‌ನಿಂದ ನಿಮಗೂ ಕಾಲ್ ಬರ್ತಿದ್ಯಾ? ಲಕ್ಷಾಂತರ ರೂ. ಹಣ ಕಳ್ಕೋಬೋದು ಹುಷಾರ್!
ಇನ್ನೊಂದೆಡೆ, ಗಾಯಗೊಂಡಿರುವವರು ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಫತೇಹಾಬಾದ್ ಎಸಿಪಿ ಆನಂದ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಹ ಆಗ್ರಾ ಜಿಲ್ಲೆಯಲ್ಲಿ ರಸಗುಲ್ಲಾ ಕಡಿಮೆ ಇತ್ತು ಅಂತ ಮದುವೆ ಸಮಾರಂಭದಲ್ಲಿ ಜಗಳ ಸಂಭವಿಸಿತ್ತು. ಈ ವೇಳೆ 22 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದರು.