ತ್ಯಾಗರಾಜ್ ಎಂಬ ಯುವಕ ಪ್ರೀತಿಸು ಅಂತ ಯುವತಿಗೆ ಕಾಟ ಕೊಡುತ್ತಿದ್ದನಂತೆ. ಯುವಕನ ಪ್ರೀತಿ ನಿರಾಕರಿಸಿದ ಅಪ್ರಾಪ್ತ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಶಿವಮೊಗ್ಗ(ಫೆ.25): ಪ್ರೀತಿಯ ಕಾಟಕ್ಕೆ ಬೇಸತ್ತು ಅಪ್ರಾಪ್ತ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ತಾಲೂಕಿನ ಗೊಂದಿಚಟ್ನಹಳ್ಳಿಯಲ್ಲಿ ಇಂದು(ಭಾನುವಾರ) ನಡೆದಿದೆ. ನೇಹಾ(14)(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತ್ಯಾಗರಾಜ್(23) ಎಂಬ ಯುವಕ ಪ್ರೀತಿಸು ಅಂತ ಯುವತಿಗೆ ಕಾಟ ಕೊಡುತ್ತಿದ್ದನಂತೆ. ಯುವಕನ ಪ್ರೀತಿ ನಿರಾಕರಿಸಿದ ಅಪ್ರಾಪ್ತ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವಕ ತ್ಯಾಗರಾಜ್ ಸುಮಾರು ದಿನಗಳಿಂದ ಪ್ರೀತಿಸುವಂತೆ ಯುವತಿಗೆ ಟಾರ್ಚರ್ ಕೊಡುತ್ತಿದ್ದ. 

ಬೇರೆ ಹುಡುಗಿ ಜೊತೆ ಗಂಡನ ಮದುವೆ, ಮನನೊಂದು ಮಹಿಳೆ ಆತ್ಮಹತ್ಯೆ: ನ್ಯಾಯಕ್ಕಾಗಿ ಕುಟುಂಬಸ್ಥರ ಹೋರಾಟ

ಯುವತಿ ಕುಟುಂಬಸ್ಥರು ಕಳೆದ ಎರಡು ತಿಂಗಳ ಹಿಂದೆ ತ್ಯಾಗರಾಜ್‌ನಿಗೆ ವಾರ್ನಿಂಗ್ ಮಾಡಿದ್ದರು. ಆ ಸಮಯದಲ್ಲಿ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಯುವಕ ಹೇಳಿದ್ದನಂತೆ. ಮತ್ತೆ ಯುವಕನ ಕಾಟ ಹೆಚ್ಚಾದ ಕಾರಣ ನಿನ್ನೆ ರಾತ್ರಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೃತ ಯುವತಿಯ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.