Snake Revenge : ಸೇಡು ತೀರಿಸಕೊಂಡ ಹಾವು! ಉತ್ತರ ಪ್ರದೇಶದಲ್ಲಿ ಅಚ್ಚರಿ ಘಟನೆ ನಡೆದಿದೆ. ಬೆಳಿಗ್ಗೆ ನಡೆದ ಘಟನೆಗೆ ರಾತ್ರಿ ಹಾವು ಸೇಡು ತೀರಿಸಿಕೊಂಡಿದ್ದು, ಹಾವಿನ ಕೋಪಕ್ಕೆ ಬಾಲಕ ಬಲಿಯಾಗಿದ್ದಾನೆ.
ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರೆ. ಆದ್ರೆ ಉತ್ತರ ಪ್ರದೇಶದ ಬಾಗ್ಪತ್ ನಲ್ಲಿ ಹಾವೊಂದು ಬೆಳಿಗ್ಗೆ ನಡೆದ ಘಟನೆಗೆ ರಾತ್ರಿಯೇ ಸೇಡು ತೀರಿಸಿಕೊಂಡಿದೆ. ಇನ್ನೊಂದು ಅಚ್ಚರಿ ಅಂದ್ರೆ, ಎರಡು ವರ್ಷಗಳ ಹಿಂದೆ ಬಾಲಕನ ಅಪ್ಪ ಕೂಡ ಹಾವು ಕಚ್ಚಿ ಸಾವನ್ನಪ್ಪಿದ. ಈಗ ಮಗ ಕೂಡ ಬಾಲಕ ಕಚ್ಚಿ ಸತ್ತಿದ್ದಾನೆ. ವಿಚಿತ್ರ ಅಂದ್ರೆ ಇಬ್ಬರ ಸಾವು ಗುರುವಾರ ರಾತ್ರಿಯೇ ನಡೆದಿದೆ.
ಹಾವಿನ ಮರಿ ಕೊಂದಿದ್ದ ಬಾಲಕ
ಮಲ್ಕಾಪುರ ರಸ್ತೆಯ ಕಾನ್ಶಿರಾಮ್ ಕಾಲೋನಿಯಲ್ಲಿ, 12 ವರ್ಷದ ಬಾಲಕ ಅಯಾನ್ ಗುರುವಾರ ಬೆಳಿಗ್ಗೆ ಆಟವಾಡ್ತಾ ಹಾವಿನ ಮರಿಯನ್ನು ಕೊಂದಿದ್ದ. ಕೋಲಿನಿಂದ ಹೊಡೆದು ಹಾವಿನ ಮರಿಯನ್ನು ಕಬ್ಬಿನ ಗದ್ದೆಗೆ ಎಸೆದಿದ್ದ. ನಂತ್ರ ಆರಾಮವಾಗಿ ಮನೆಗೆ ಬಂದಿದ್ದಾನೆ.
ಬೆಂಗಳೂರಲ್ಲಿ ರಕ್ತಪಾತ: ಬಾರ್‌ನಲ್ಲಿ ಗುರಾಯಿಸಿದ್ದೇ ತಪ್ಪಾಯ್ತು, ಯುವಕನ ಎದೆಗೆ
ರಾತ್ರಿ ನಡೀತು ದುರಂತ
ರಾತ್ರಿ ಮನೆಯಲ್ಲಿ ಮಲಗಿದ್ದಾಗ ನಾಗ ಅಯಾನ್ ಮೇಲೆ ದಾಳಿ ಮಾಡಿದೆ. ಹಾವು ಕಚ್ಚಿದ ನೋವಿನಲ್ಲಿ ಬಾಲಕ ಕೂಗಿದ್ದಾನೆ. ಅಮ್ಮ ಲೈಟ್ ಹಾಕಿ ನೋಡಿದಾಗ ಬೆಡ್ ಬಳಿ ಹಾವು ಕಂಡಿದೆ. ಸುಮಾರು ಐದರಿಂದ ಆರು ಅಡಿ ಉದ್ದವಿದ್ದ ಹಾವನ್ನು ಅಯಾನ್ ಅಮ್ಮ ನಸ್ರೀನ್ ಕೋಲಿನಿಂದ ಹೊಡೆದು ಸಾಯಿಸಿದ್ದಾಳೆ. ಆದ್ರೆ ಆಗ್ಲೇ ಅಯಾನ್ ಗೆ ಹಾವು ಕಚ್ಚಿತ್ತು. ಅಯಾನ್ ಅಜ್ಜ, ಬಾಯಿಂದ ವಿಷ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಹಾವಿನ ವಿಷ ರಕ್ತ ಸೇರಬಾರದೆಂದು ಬಿಗಿಯಾಗಿ ಬಟ್ಟೆ ಕಟ್ಟಿದ್ದಾರೆ. ನಂತ್ರ ಅಯಾನ್ ನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಆದ್ರೆ ಅಯಾನ್ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ.
Bengaluru ಸ್ಯಾಂಕಿ ಕೆರೆಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ, ಪ್ರಿಯಕರನಿಗೆ ಮೆಸೇಜ್ ಕಳುಹಿಸಿ ಆತ್ಮ*ತ್ಯೆಗೆ ಶರಣು!
ವಿಚಿತ್ರ ಘಟನೆ
ಎರಡು ವರ್ಷಗಳ ಹಿಂದೆ ಅಯಾನ್ ತಂದೆ ಕೂಡ ಹಾವು ಕಚ್ಚಿ ಸಾವನ್ನಪ್ಪಿದ್ದ. ಅದು ಗುರುವಾರ ರಾತ್ರಿಯೇ ಅಯಾನ್ ತಂದೆ ಮೇಲೆ ಹಾವು ದಾಳಿ ನಡೆಸಿತ್ತು. ಈಗ ಮಗ ಅಯಾನ್ ಮೇಲೆಯೂ ಗುರುವಾರವೇ ದಾಳಿ ನಡೆಸಿದೆ. ಇದು ಕುಟುಂಬಸ್ಥರನ್ನು ಆತಂಕಕ್ಕೆ ನೂಕಿದೆ. ಇಬ್ಬರನ್ನು ಕಳೆದುಕೊಂಡ ನಸ್ರೀನ್ ನೋವಿನಲ್ಲಿದ್ದಾಳೆ.


