ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಬಾಲಕನನ್ನೇ ಕೊಂದ ಕಿರಾತಕ!
ಸೆ.30 ರಂದು ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮದಲ್ಲಿ ನಡೆದಿದ್ದ ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಬಾಲಕ ನರೇಂದ್ರನ ಅನುಮಾನಸ್ಪದ ಸಾವು ತನಿಖೆಯಲ್ಲಿ ಇದು ಕಂಡುಬಂದಿದೆ. ಕೊಲೆ ಆರೋಪಿ ಅಬ್ದುಲ್ ನಬಿ ಹಾಗೂ ಗೋವಿಂದಮ್ಮಳ ಪ್ರೇಮದಾಟಕ್ಕೆ ಗೋವಿಂದಮ್ಮಳ ಪುತ್ರ ನರೇಂದ್ರ ಬಲಿಯಾಗಿದ್ದಾನೆ.
ಗುರುಮಠಕಲ್(ಅ.11): ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹಾಗೂ ತನ್ನೊಂದಿಗೆ ಓಡಿ ಹೋಗಲು ಬಾಲಕನ ತಾಯಿಯು ಹಿಂಜರಿಯುತ್ತಿದ್ದಾಳೆ ಎಂದು ಕೋಪಗೊಂಡು, ಬಾಲಕನ ತಾಯಿಯ ಪ್ರಿಯಕರನೊಬ್ಬ 11 ವರ್ಷದ ಮಗುವನ್ನೇ ಕೊಲೆ ಮಾಡಿ ಈಗ ಜೈಲು ಸೇರಿದ್ದಾನೆ. ಮಗುವಿಗಾಗಿ ಪ್ರೇಯಸಿ ಮದುವೆ ನಿರಾಕರಿಸಿದ್ದರಿಂದ ಈ ಕಿರಾತಕ ಪ್ರೇಯಸಿಯ ಮಗನನ್ನೆ ಕೊಲೆ ಮಾಡಿದ್ದಾನೆ.
ಸೆ.30 ರಂದು ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮದಲ್ಲಿ ನಡೆದಿದ್ದ ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಬಾಲಕ ನರೇಂದ್ರನ (11) ಅನುಮಾನಸ್ಪದ ಸಾವು ತನಿಖೆಯಲ್ಲಿ ಇದು ಕಂಡುಬಂದಿದೆ. ಕೊಲೆ ಆರೋಪಿ ಅಬ್ದುಲ್ ನಬಿ ಹಾಗೂ ಗೋವಿಂದಮ್ಮಳ ಪ್ರೇಮದಾಟಕ್ಕೆ ಗೋವಿಂದಮ್ಮಳ ಪುತ್ರ ನರೇಂದ್ರ ಬಲಿಯಾಗಿದ್ದಾನೆ.
ಪತ್ನಿಯ ಸ್ನೇಹಿತೆಯೊಂದಿಗೆ ಏಕಾಂತದಲ್ಲಿರುವಾಗಲೇ ಸಿಕ್ಕಿಬಿದ್ದ ಗಂಡ!
ಅನುಮಾನಸ್ಪದ ಸಾವು ಘಟನೆ ಬಗ್ಗೆ ತಾಯಿ ಗೋವಿಂದಮ್ಮ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ, ಗುರುಮಠಕಲ್ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ದೂರು ನೀಡಿರುವ ಗೋವಿಂದಮ್ಮಳ ಪ್ರಿಯತಮನೇ ಹಂತಕನಾಗಿದ್ದು, ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಕಾಕಲವಾರ ಗ್ರಾಮದ ಗೋವಿಂದಮ್ಮ ಹಾಗೂ ಅಬ್ದುಲ್ ನಬಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅನೈತಿಕ ಸಂಬಂಧ ಹೊಂದಿದ್ದರು.
ಕೊಲೆ ಪ್ರಕರಣ ವಿವರ:
ಗೋವಿಂದಮ್ಮಳಿಗೆ 11 ವರ್ಷದ ಪುತ್ರ ನರೇಂದ್ರ ಇದ್ದನು. ಗೋವಿಂದಮ್ಮಳ ಪತಿರಾಯ ಮಹಾಲಿಂಗಪ್ಪ 2017 ರಲ್ಲಿ ನಿಧನ ಹೊಂದಿದ್ದನು. ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಗೋವಿಂದಮ್ಮ ಅಬ್ದುಲ್ ನಬಿ ಜೊತೆ ಸಂಬಂಧ ಹೊಂದಿ, ಅಬ್ದುಲ್ ಮದುವೆಗೆ ಮುಂದಾಗಿದ್ದನು. ಆದರೆ, ಗೋವಿಂದಮ್ಮ ಮಗನಿದ್ದು ಮದುವೆ ಬೇಡ ಎಂದು ನಿರಾಕರಿಸಿದ್ದಳು ಎನ್ನಲಾಗಿದೆ. ಇದಕ್ಕೆ ಆಕೆಯ ಪುತ್ರ ನರೇಂದ್ರ ಅಡ್ಡಿ ಆಗುತ್ತಿರುವುದಕ್ಕೆ ಚಾಕೋಲೇಟ್ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.
ಅಬ್ದುಲ್ ನಬಿ ಗೋವಿಂದಮ್ಮಳಿಗೆ ಮದುವೆ ಆಗೋಣ, ಹೈದ್ರಾಬಾದ್‌ಗೆ ಹೊಗೋಣ ಎಂದು ಹೇಳಿದ್ದನಂತೆ. ಇದಕ್ಕೆ ಗೋವಿಂದಮ್ಮ ಮದುವೆ ಬೇಡ, ಮಗನಿದ್ದು, ಇಲ್ಲಿಯೇ ಇರುತ್ತೇನೆಂದು ಮದುವೆಗೆ ನಿರಾಕರಣೆ ಮಾಡಿದಳು. ಹೀಗಾಗಿ, ಸೆ.30ರಂದು ಪ್ರೇಯಸಿಯ ಮಗನನ್ನು ಕೊಲೆ ಸಂಚು ಹಾಕುತ್ತಾನೆ. ಬಾಲಕ ನರೇಂದ್ರನಿಗೆ ಕಿರಾಣಿ ಅಂಗಡಿಗೆ ಕರೆದುಕೊಂಡು ಹೋಗಿ, ಚಾಕೋಲೇಟ್ ಕೊಡಿಸುತ್ತಾನೆ. ಕಿರಾಣಿ ಅಂಗಡಿಗೆ ನರೇಂದ್ರನಿಗೆ ಕರೆದುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ಚಾಕೋಲೇಟ್ ಕೊಡಿಸಿ ನಂತರ, ಕಿರಾಣಿ ಅಂಗಡಿಯ ಪಕ್ಕದ ದನದ ಕೊಟ್ಟಿಗೆಗೆ ಬಾಲಕನನ್ನು ಕರೆದುಕೊಂಡು ಹೋಗಿ ಉಸಿರುಗಟ್ಟಿ ಕೊಲೆ ಮಾಡಿದ್ದಾನೆ.
ದಾವಣಗೆರೆ: ಬಾರ್‌ನಲ್ಲಿ ವ್ಯಕ್ತಿ ಕೊಲೆಗೆ ಅನೈತಿಕ ಸಂಬಂಧ ಕಾರಣ
ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಿಂದ ಹಂತಕನ ನಿಜಬಣ್ಣ ಬೆಳಕಿಗೆ ಬಂದಿದೆ. ಗುರುಮಠಕಲ್ ಪೊಲೀಸರು 9 ದಿನಗಳ ನಂತರ ತನಿಖೆ ನಡೆಸಿ, ಕೊಲೆ ಘಟನೆ ಬೇಧಿಸಿದ್ದಾರೆ. ಅಬ್ದುಲ್ ನಬಿ ಅವರನ್ನು ಗುರುಮಠಕಲ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಗುರುಮಠಕಲ್ ಪೊಲೀಸರು ಹಂತಕ ಅಬ್ದುಲ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಜಿ. ಸಂಗೀತಾ ಹಾಗೂ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮಗುವಿನ ಸಾವಿನ ಹಿಂದೆ ಅನುಮಾನ ಹುಟ್ಟಿದ್ದು ಅದನ್ನ ಬೇಧಿಸಲು ತಂಡ ರಚನೆ ಮಾಡಿದ್ದು ಮಗುವಿನ ಸಾವಿಗೆ ತಾಯಿಯ ಅನೈತಿಕ ಸಂಬಂಧವೇ ಬಲವಾದ ಕಾರಣ ಎಂಬ ಖಚಿತ ಮಾಹಿತಿ ಮೇರೆಗೆ ವ್ಯಕ್ತಿಯನ್ನು ವಿಚಾರಿಸಿದಾಗ ಸತ್ಯಾಂಶ ಬಯಲಾಗಿದೆ. ಇದರಲ್ಲಿ ತಾಯಿಯ ಪ್ರಿಯಕರ ಮಾತ್ರ ಭಾಗಿಯಾಗಿರುವುದು ಸಾಬಿತಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ತಿಳಿಸಿದ್ದಾರೆ.