ದಾವಣಗೆರೆ ನಗರದ ಕೆಟಿಜೆ ನಗರದ ನಿಟುವಳ್ಳಿ ಮುಖ್ಯರಸ್ತೆಯ ಪ್ರಕಾಶ ಬಾರ್‌ನಲ್ಲಿ ಸೆ.21ರಂದು ಹನುಮಂತ ಅಲಿಯಾಸ್ ಕುಮಾರಎಂಬಾತ ಸ್ನೇಹಿತರೊಂದಿಗೆ ಕುಳಿತಿದ್ದ. ಈ ವೇಳೆ ಹಿಂದಿನಿಂದ ಬಂದ ಗೌತಮ್ ಪವಾರ್‌  ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದಾವಣಗೆರೆ(ಸೆ.25): ಬಾರ್‌ವೊಂದರಲ್ಲಿ ಕುಳಿತು ಮಧ್ಯ ಸೇವಿಸುತ್ತಿದ್ದ ವ್ಯಕ್ತಿಯನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದ ಘಟನೆಗೆ ಅನೈತಿಕ ಸಂಬಂಧ ಹಾಗೂ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದುದೇ ಕಾರಣ ಎಂಬ ಸಂಗತಿ ಪೊಲೀಸ್ ತನಿಖೆಯಲ್ಲಿ ಹೊರಬಿದ್ದಿದೆ.

ನಗರದ ಕೆಟಿಜೆ ನಗರದ ನಿಟುವಳ್ಳಿ ಮುಖ್ಯರಸ್ತೆಯ ಪ್ರಕಾಶ ಬಾರ್‌ನಲ್ಲಿ ಸೆ.21ರಂದು ಹನುಮಂತ ಅಲಿಯಾಸ್ ಕುಮಾರ (30) ಎಂಬಾತ ಸ್ನೇಹಿತರೊಂದಿಗೆ ಕುಳಿತಿದ್ದ. ಈ ವೇಳೆ ಹಿಂದಿನಿಂದ ಬಂದ ಗೌತಮ್ ಪವಾರ್‌ (36) ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಯುವಕನ ಜತೆ ವಿವಾಹಿತ ಮಹಿಳೆಯ ಲವ್ವಿ ಡವ್ವಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ್ಲು ಅಂತ ತಾಯಿಯನ್ನೇ ಕೊಂದ ಮಗಳು..!

ಕೊಲೆ ಪ್ರಕರಣ ಬೇಧಿಸಲು ಪೊಲೀಸರು ತನಿಖೆ ಕೈಗೊಂಡಿದ್ದರು. ಹನುಮಂತ ಅಲಿಯಾಸ್‌ ಕುಮಾರ ಮಹಿಳೆಯೊಬ್ಬಳ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ. ಈ ಸುಳಿವಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಕೊಲೆಯಾದ ಹನುಮಂತ (ಕುಮಾರ)ನ ಸ್ನೇಹಿತ ಗೌತಮ್‌ನನ್ನು ವಿಚಾರಣೆಗೆ ಒಳಪಡಿಸಲಾಯಿತು. ಆಗ ಕೊಲೆಗೆ ಆರೋಪಿಯ ಸಹೋದರಿ ಜತೆ ಹೊಂದಿದ್ದ ಅನೈತಿಕ ಸಂಬಂಧ, ಕೆಲ ಖಾಸಗಿ ಫೋಟೋಗಳ ವೈರಲ್‌ ಮಾಡುವ ಬೆದರಿಕೆ ಹಾಕಿದ್ದೇ ಕಾರಣವೆಂಬ ವಿಚಾರ ಬಯಲಾಗಿದೆ.

ಖಾಸಗಿ ಫೋಟೋಗಳನ್ನು ವೈರಲ್ ಮಾಡದಂತೆ ಆರೋಪಿ ಗೌತಮ್ ಸಾಕಷ್ಟು ಸಲ ಮನವಿ ಮಾಡಿದ್ದ. ಆದರೂ ಹನುಮಂತ ಕಿವಿಗೊಟ್ಟಿರಲಿಲ್ಲ. ಹಾಗಾಗಿ ಹನುಮಂತನನ್ನು ಚಾಕುವಿನಿಂದ ಇರಿದು ಕೊಂದಿದ್ದಾಗಿ ಆರೋಪಿ ಗೌತಮ್‌ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇನ್ನಷ್ಟು ತನಿಖೆ ಮುಂದುವರಿದಿದೆ.