ಬಿಹಾರದ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನ ಮಂಗಮಾಯ ಗುತ್ತಿಗೆ ಕೆಲಸಗಾರನಿಂದ ಕೃತ್ಯ

ಸಹರ್ಸಾ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದ ಲಾಕರ್‌ನಲ್ಲಿ ಇಟ್ಟಿದ್ದ 2.80 ಕಿಲೋಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಗುತ್ತಿಗೆ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಬೈಜನಾಥಪುರ (Baijnathpur) ಶಾಖೆಯಲ್ಲಿ ಈ ಕಳವು ಪ್ರಕರಣ ನಡೆದಿದೆ. ಬೈಜನಾಥಪುರ ಶಾಖೆಯಲ್ಲಿ 1.25 ಕೋಟಿ ರೂ. ಮೌಲ್ಯದ ಬಂಗಾರ ಏಪ್ರಿಲ್ 23 ರಂದೇ ಕಳವಾಗಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬ್ಯಾಂಕ್ ಉದ್ಯೋಗಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. 

ಹಿಂದೂಸ್ತಾನ್‌ ಟೈಮ್ಸ್ ವರದಿ ಪ್ರಕಾರ ಘಟನೆಗೆ ಸಂಬಂಧಿಸಿದ ಉಮೇಶ್ ಮಲ್ಲಿಕ್ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ (Santosh Kumar) ಹೇಳಿದ್ದಾರೆ. ಬ್ಯಾಂಕಿನಿಂದ ಕದ್ದ ಚಿನ್ನದ ಒಂದು ಭಾಗವನ್ನು ನೇಪಾಳದಲ್ಲಿ ಮಾರಾಟ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಹರ್ಸಾ ಪೊಲೀಸರು(Saharsa police) ನೇಪಾಳದ (nepal) ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಲಾಕರ್‌ನ ಕೀಗಳನ್ನು ಗುತ್ತಿಗೆ ನೌಕರರಿಗೆ ಹೇಗೆ ಹಸ್ತಾಂತರಿಸಲಾಯಿತು ಎಂಬುದು ತಿಳಿದು ಬಂದಿಲ್ಲ. ಇಬ್ಬರು ಬ್ಯಾಂಕ್ ಉದ್ಯೋಗಿಗಳು, ಕ್ಯಾಷಿಯರ್ ಮತ್ತು ಅಕೌಂಟೆಂಟ್, ಕೀಲಿಗಳನ್ನು ಇಟ್ಟುಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದರು, ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಹೇಳಿದರು.

ಕಾರಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಎಗರಿಸಿದ ಕಳ್ಳರು!

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉದ್ಯೋಗಿಗಳಾದ ಕ್ಯಾಷಿಯರ್ ಪ್ರತ್ಯುಷ್ ಕುಮಾರ್ (Pratyush Kumar) ಮತ್ತು ಅಕೌಂಟೆಂಟ್ ಅಶೋಕ್ ಓರಾನ್ (Ashok Oraon) ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಮತ್ತು ವಿಷಯ ಬೆಳಕಿಗೆ ಬಂದ ತಕ್ಷಣ ಅವರ ವಿರುದ್ಧ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ. 

ವಿಚಿತ್ರ ಎಂದರೆ ಬ್ಯಾಂಕಿನಲ್ಲಿಟ್ಟ ಬಂಗಾರವೂ ಏಪ್ರಿಲ್ 23 ರಂದು ಕಾಣೆಯಾಗಿದೆ. ಆದರೆ ಮೇ 9 ರಂದು ಈ ಕಳವು ಪ್ರಕರಣ ಬಯಲಾಗಿದೆ. ನಂತರ ಶಾಖೆಯ ಮ್ಯಾನೇಜರ್ ಲಲಿತ್ ಕುಮಾರ್ ಸಿನ್ಹಾ (Lalit Kumar Sinha) ಮೇ 10 ರಂದು ಬೈಜನಾಥಪುರ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಕದ್ದ ಚಿನ್ನವನ್ನು ಆರೋಪಿಗಳು ಚಿನ್ನದ ಸಾಲ ಯೋಜನೆಯಡಿಯಲ್ಲಿ ಅಡಮಾನವಿಟ್ಟಿದ್ದರು. ಕಳ್ಳತನ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಏಪ್ರಿಲ್ 23ರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ಆರೋಪಿ ಮಲಿಕ್ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್ ದರೋಡೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

ಘಟನೆಗೆ ಸಂಬಂಧಿಸಿದಂತೆ ಎಸ್‌ಬಿಐನ ಪ್ರಾದೇಶಿಕ ವ್ಯವಸ್ಥಾಪಕ ಬಿ.ಕೆ. ಸಿಂಗ್(B K Singh) ಮಾತನಾಡಿ, ಗ್ರಾಹಕರು ನಷ್ಟವನ್ನು ಅನುಭವಿಸಬೇಕಾಗಿಲ್ಲ. ಕದ್ದ ಚಿನ್ನವನ್ನು ಮರಳಿ ಪಡೆಯದಿದ್ದರೆ ನಾವು ಅವರ ಚಿನ್ನದ ಮೇಲೆ ಸಂಪೂರ್ಣ ಪಾವತಿ ಮಾಡುತ್ತೇವೆ. ಈ ಪ್ರದೇಶದ ಕೆಲವು ಆಭರಣ ವ್ಯಾಪಾರಿಗಳನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಡಿಪಿಒ ತಿಳಿಸಿದ್ದಾರೆ. 


ಕಳೆದ ಎಪ್ರಿಲ್‌ನಲ್ಲಿ ರೈಲ್ವೆ ಸಿಗ್ನಲ್‌ಗೆ ಬಟ್ಟೆ ಕಟ್ಟಿ ರೈಲು ನಿಲ್ಲಿಸಿದ ದರೋಡೆಕೋರರು ಬಳಿಕ ರೈಲು ಹತ್ತಿ ರೈಲಿನಲ್ಲಿದ್ದ ಪ್ರಯಾಣಿಕರನ್ನು ಬೆದರಿಸಿ ದರೋಡೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಔರಂಗಾಬಾದ್‌​ನ ಪೋತುಲ್ ರೈಲ್ವೆ ನಿಲ್ದಾಣದ ಬಳಿ 9 ರಿಂದ 10 ಜನರ ಗುಂಪೊಂದು ರೈಲಿನ ಮೇಲೆ ಕಲ್ಲೆಸೆದಿದ್ದಾರೆ. ಇದರ ಬೆನ್ನಲ್ಲೇ ಪ್ರಯಾಣಿಕರ ಮೊಬೈಲ್, ಪರ್ಸ್​​ ಸೇರಿದಂತೆ ಕೆಲ ಮಹಿಳೆಯರ ಚಿನ್ನಾಭರಣ ದೋಚಿದ್ದರು. ದೌಲತಾಬಾದ್ ಮತ್ತು ಪೊತುಲ್ ನಿಲ್ದಾಣದ ನಡುವೆ ಈ ಘಟನೆ ನಡೆದಿತ್ತು. ದರೋಡೆಕೋರರು ಸಿಗ್ನಲ್ ಗೆ ಬಟ್ಟೆ ಕಟ್ಟಿ ರೈಲನ್ನು ನಿಲ್ಲಿಸಿ ನಂತರ ರೈಲಿಗೆ ನುಗ್ಗಿ ಲೂಟಿ ಮಾಡಿದ್ದರು.