Asianet Suvarna News Asianet Suvarna News

ಕಾರಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಎಗರಿಸಿದ ಕಳ್ಳರು!

ಕಾಲೇಜು ಬಳಿ ಕಾರಿನ ಕಿಟಕಿ ಗಾಜು ಒಡೆದು ಐದು ಲಕ್ಷರೂಗಳನ್ನ ದರೋಡೆ ಮಾಡಿ ಹೋದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ವೃತ್ತದಲ್ಲಿ ನಡೆದಿದೆ.

money robbery from car at Anekal near Chandapura gow
Author
Bengaluru, First Published May 14, 2022, 9:43 AM IST

ಆನೇಕಲ್ (ಮೇ.14): ಇತ್ತೀಚಿನ ದಿನಗಳಲ್ಲಿ ಕಳ್ಳತನಗಳನ್ನು ಮಾಡಲು ಯಾವುದೆಲ್ಲ ಮಾರ್ಗಗಳು ಸಾಧ್ಯವೋ ಅವೆಲ್ಲವನ್ನು ಕಳ್ಳರು ಅನುಸರಿಸುತ್ತಿದ್ದಾರೆ, ಬ್ಯಾಂಕ್ ಗಳ ಬಳಿ ಬರುವ ವಾಹನಗಳನ್ನ ಪಾಲೋ ಮಾಡುವುದು, ಗ್ರಾಹಕರು ಬಳಸುವ ವಸ್ತುಗಳ‌ ಮೇಲೆ ನಿಗಾ‌ ಇದ್ದೇ ಇರುತ್ತೇ, ಇದೀಗ ಕಾಲೇಜುಗಳ ಬಳಿ ಬರುವ ವಾಹನಗಳ ಮೇಲೂ ಕಳ್ಳರು ಗಮನ ಹರಿಸುತ್ತಿದ್ದಾರೆ, ಇಂದು  ಅಂತಹದೇ ಒಂದು ಘಟನೆ. ಕಾಲೇಜು ಬಳಿ ಕಾರಿನ ಕಿಟಕಿ ಗಾಜು ಒಡೆದು ಐದು ಲಕ್ಷರೂಗಳನ್ನ ದರೋಡೆ ಮಾಡಿ ಹೋದ ಘಟನೆ ನಡೆದಿದೆ.

ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಚಂದಾಪುರ (Chandapura) ವೃತ್ತದಲ್ಲಿರುವ ಸ್ವಾಮಿ‌ ವಿವೇಕಾನಂದ ಕಾಲೇಜಿಗೆ ಮಗಳನ್ನು ದಾಖಲಾತಿ ಮಾಡಲು ಆನೇಕಲ್ ಪಟ್ಟಣಕ್ಕೆ‌ ಸಮೀಪದ  ದೊಡ್ಡಹಾಗಡೆ ನಿವಾಸಿ ಮಂಜುನಾಥ್ ಎಂಬುವವರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಬ್ಯಾಂಕ್ ಗೆ ಪಾವತಿಸಲು ಐದು ಲಕ್ಷ ರೂಗಳನ್ನು ಬ್ಯಾಗ್ ನಲ್ಲಿರಿಸಿ ಕಾರಿನ ಹಿಂಬದಿ‌ ಸೀಟ್ ಮೇಲಿಟ್ಟಿದ್ದರು, ಮಂಜುನಾಥ್ ‌ಕಾರಿನಿಂದ ಹೋಗಿ ಕಾಲೇಜಿನಲ್ಲಿ ದಾಖಲಾತಿ‌ ಬಗ್ಗೆ ವಿವರಣೆಗಳನ್ನ ಪಡೆದು ಬರುವಷ್ಟರಲ್ಲಿ  ಕಾರಿನ ಗ್ಲಾಸ್ ಒಡೆದು ಹಣವಿದ್ದ ಬ್ಯಾಗ್ ಅನ್ನು ಕದ್ದೊಯ್ದಿದ್ದರು ಇದರಿಂದ ಮಾಲೀಕ ಶಾಕ್ ಆಗಿದ್ದಾನೆ.

CRIS RECRUITMENT 2022: ರೈಲ್ವೆ ಮಾಹಿತಿ ಕೇಂದ್ರದಲ್ಲಿ ಇಂಜಿನಿಯರ್ ಉದ್ಯೋಗ

ಇದೇ ಶಾಲೆಗೆ ಸಮೀಪ ಕೆನರಾ ಬ್ಯಾಂಕ್ ನಲ್ಲಿ ಹಣ ಪಾವತಿಸಲು ಬಂದಿದ್ದ ಮಂಜುನಾಥ್  ಹಣ ಹೋಗಿರುವುದಕ್ಕೂ ಮೊದಲು,  ಕಳೆದ ಆರು ತಿಂಗಳುಗಳಲ್ಲಿ ಇದು ಮೂರನೇ ಘಟನೆಯಾಗಿದೆ. ಸಮೀಪವಿರುವ ಸೂರ್ಯಸಿಟಿ ಪೊಲೀಸರು ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸದೇ ಇರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ.

 ಕಳೆದೊಂದು ತಿಂಗಳಲ್ಲಿ ಅತಿ ಹೆಚ್ಚು ಬೈಕ್ ಕಳ್ಳತನ ಪ್ರಕರಣಗಳು  ನಡೆದಿದ್ದರೂ ಸೂರ್ಯಸಿಟಿ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದಿರುವುದರಿಂದ ಕಳ್ಳರಿಗೆ ಆರಾಮಾಗಿದೆಯೆನ್ನುತ್ತಿದ್ದಾರೆ ಸ್ಥಳೀಯರು. ಈ ಪ್ರಕರಣವನ್ನಾದರೂ ಗಂಭೀರವಾಗಿ ಪರಿಗಣಿಸಿ ಕಳ್ಳರನ್ನ ಹಿಡಿಯುತ್ತಾರೆಂಬುದು ಸಾರ್ವಜನಿಕರ ನಂಬಿಕೆಯಾಗಿದೆ.

MRPL Recruitment 2022: ಎಂಜಿನಿಯರ್ ಓದಿರುವವರಿಗೆ ಸುವರ್ಣಾವಕಾಶ 

ದಾಖಲೆ ಇಲ್ಲದ 58 ಲಕ್ಷ ರೂ. ಹಣ ಪತ್ತೆ: ಹಾವೇರಿ(Haveri) ನಗರದ ಶಿವಶಕ್ತಿ ಪ್ಯಾಲೆಸ್ ಲಾಡ್ಜ್‌ನಲ್ಲಿ ದಾಖಲೆ ಇಲ್ಲದ 58 ಲಕ್ಷ ರೂ ಹಣ ಪತ್ತೆಯಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಪೊಲೀಸರು(Police) ದಾಖಲೆ ಇಲ್ಲದ ಹಣ ಇಟ್ಟುಕೊಂಡಿದ್ದ ನಾಲ್ವರನ್ನು ವಶಕ್ಕೆ ಪಡೆದು ತನಿಖೆಯನ್ನ ಆರಂಭಿಸಿದ್ದಾರೆ. 

ಯಾವುದೋ ಅಕ್ರಮ ಎಸಗುವ ಉದ್ದೇಶದಿಂದ ಆರೋಪಿಗಳು(Accused) ಸೂಕ್ತ ದಾಖಲೆಗಳಿಲ್ಲದ ಹಣ ಇಟ್ಟುಕೊಂಡಿದ್ರು ಅಂತ  ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ(Arrest) ಅರೋಪಿಗಳನ್ನ ರವಿ, ಗಣಪತಿ, ಅನಿಲ್, ಚನ್ನಪ್ಪ ಅಂತ ಗುರುತಿಸಲಾಗಿದೆ.

ಮೂವರು ಆರೋಪಿಗಳು ಬೆಳಗಾವಿ ಮೂಲದವರು, ಒಬ್ಬ ಬೆಂಗಳೂರಿನ ಕೆಂಗೇರಿಯವನು ಅಂತ ತಿಳಿದು ಬಂದಿದೆ. 58 ಲಕ್ಷ ರೂ. ಹಣ, ಹಣ ಎಣಿಸುವ ಎಲೆಕ್ಟ್ರಾನಿಕ್ ಯಂತ್ರ ವಶಕ್ಕೆ ಪಡೆದಿರೋ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರೋ ಪೊಲೀಸರು ಈ ಕುರಿತು ಆದಾಯ ತೆರಿಗೆ ಇಲಾಖೆ (Department of Income Tax) ಅಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದಾರೆ. 

ಗೋವಾದಲ್ಲಿ ರಷ್ಯನ್‌ ಬಾಲಕಿ ಮೇಲೆ ರೇಪ್‌: ಗದಗ ವ್ಯಕ್ತಿ ಬಂಧನ: ಉತ್ತರ ಗೋವಾದಲ್ಲಿರುವ(Goa) ಅರಂಬೋಳ್‌ ರೆಸಾರ್ಟ್‌ನಲ್ಲಿ ರಷ್ಯಾ(Russia) ಮೂಲದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ(Rape) ಎಸಗಿದ್ದ ಆರೋಪಿಯನ್ನು ಕರ್ನಾಟಕದ(Karnataka) ಗದಗ ಜಿಲ್ಲೆ ಮಜ್ಜೂರ ತಾಂಡಾದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ.

ಮೇ. 6ರಂದು ಈ ಲೈಂಗಿಕ ದೌರ್ಜನ್ಯ ಪ್ರಕರಣ(Sexual Harassment Case) ನಡೆದಿದ್ದು, ಸಂತ್ರಸ್ತೆಯ(Victim) ತಾಯಿ ಮೇ. 9ರಂದ ದೂರು ನೀಡಿದ್ದರು. ಮೇ 10ರಂದು ಪೆರ್ನೇಮ್‌ ಪೊಲೀಸರು ಆರೋಪಿ ರವಿ ಲಮಾಣಿ(28)ಯನ್ನು ಗದಗ(Gadag) ಜಿಲ್ಲೆಯ ಶಿರಹಟ್ಟಿ ತಾಲೂಕಿನ ಆತನ ಹುಟ್ಟೂರು ಮಜ್ಜೂರ ತಾಂಡಾದಲ್ಲಿ ಬಂಧಿಸಿದ್ದಾರೆ

‘ರೆಸಾರ್ಟ್‌ನಲ್ಲಿ ರೂಮ್‌ ಅಟೆಂಡರ್‌ ಆಗಿದ್ದ ಆರೋಪಿ ರವಿ, ಸಂತ್ರಸ್ತೆಯ ತಾಯಿ ಮನೆಗೆ ಅಗತ್ಯ ವಸ್ತುಗಳನ್ನು ತರಲು ಹತ್ತಿರದ ಅರಂಬೋಳ್‌ ಮಾರುಕಟ್ಟೆಗೆ ಹೋಗಿದ್ದಾಗ ರೂಮ್‌ಗೆ ನುಗ್ಗಿದ್ದ. ಈ ವೇಳೆ, ರೆಸಾರ್ಟ್‌ನ ಈಜುಕೊಳ ಮತ್ತು ಕೊಠಡಿಯ ಒಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ನಂತರ ಆರೋಪಿ ತವರೂರಿಗೆ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

Follow Us:
Download App:
  • android
  • ios