ಹೈದರಾಬಾದ್(ಡಿ.07): ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡೋ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಬರೋಬ್ಬರಿ 208 ರನ್ ಟಾರ್ಗೆಟ್ ಬೆನ್ನಟ್ಟಿದ ಕೊಹ್ಲಿ ಸೈನ್ಯಕ್ಕೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಆದರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅಸಮಧಾನ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ರಾಹುಲ್, ಕೊಹ್ಲಿ ಅರ್ಧಶತಕ; ವಿಂಡೀಸ್ ವಿರುದ್ಧ ಗೆದ್ದು ಬೀಗಿದ ಭಾರತ!

ವಿರಾಟ್ ಕೊಹ್ಲಿ ಅಜೇಯ 94 ರನ್ ನೆರವಿನಿಂದ ಟೀಂ ಇಂಡಿಯಾ ಇನ್ನು 8 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿದೆ. ಕೊಹ್ಲಿ ಹಾಗೂ ಟೀಂ ಇಂಡಿಯಾ ಪ್ರದರ್ಶನವನ್ನು ಎಲ್ಲರೂ ಕೊಂಡಾಡಿದ್ದಾರೆ. ಆದರೆ ಯುವಿ, ಟೀಂ ಇಂಡಿಯಾಗೆ ಚಾಟಿ ಬೀಸಿದ್ದಾರೆ. ಹೈದರಾಬಾದ್ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕಲಪೆ ಫೀಲ್ಡಿಂಗ್ ಪ್ರದರ್ಶನ ನೀಡಿದೆ. ಇದು ಸತತ ಕ್ರಿಕೆಟ್ ಪರಿಣಾಮವೇ? ಎಂದು ಪ್ರಶ್ನಿಸಿದ್ದಾರೆ.

 

ಇದನ್ನೂ ಓದಿ: ವಿಲಿಯಮ್ಸ್ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು; ಕೊಹ್ಲಿಗೆ ಭೇಷ್ ಎಂದ ಫ್ಯಾನ್ಸ್!

ಭಾರತೀಯ ಫೀಲ್ಡರ್ ಪ್ರದರ್ಶನ ನೀರಸವಾಗಿತ್ತು ಎಂದು ಯುವಿ ಪ್ರತಿಕ್ರಿಯಿಸಿದ್ದಾರೆ.  ಫೀಲ್ಡಿಂಗ್ ವೇಳೆ ಟೀಂ ಇಂಡಿಯಾ ಕೆಲ ತಪ್ಪುಗಳನ್ನು ಮಾಡಿತ್ತು. ಕ್ಯಾಚ್ ಕೈಚೆಲ್ಲಿದ ಜೊತೆಗೆ ಚುರುಕಿನ ಫೀಲ್ಡಿಂಗ್ ಮಾಡುವಲ್ಲಿ ವಿಫಲವಾಗಿತ್ತು.