ಹೈದರಾಬಾದ್(ಡಿ.07): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪ್ರತಿ ಪಂದ್ಯ ಕೂಡ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತದೆ.  ವೆಸ್ಟ್ ಇಂಡೀಸ್ ಕ್ರಿಕೆಟಿಗರ ಸಂಭ್ರಮಾಚರಣೆ ವಿಶೇಷ. ಇದೀಗ ಹೈದರಾಬಾದ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವಿಂಡೀಸ್ ಕ್ರಿಕೆಟಿಗನ ಸಂಭ್ರಮಾಚರಣೆ ನಕಲು ಮಾಡೋ ಮೂಲಕ ನಾಯಕ ವಿರಾಟ್ ಕೊಹ್ಲಿ ಹಳೇ ಸೇಡನ್ನು ತೀರಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಹುಲ್, ಕೊಹ್ಲಿ ಅರ್ಧಶತಕ; ವಿಂಡೀಸ್ ವಿರುದ್ಧ ಗೆದ್ದು ಬೀಗಿದ ಭಾರತ!

208 ರನ್ ಟಾರ್ಗೆಟ್ ಚೇಸಿಂಗ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 16ನೇ ಓವರ್‌ನಲ್ಲಿ ಕೊಹ್ಲಿ, ವಿಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ ಎಸೆತವನ್ನು ಸಿಕ್ಸರ್ ಅಟ್ಟಿದರು. ಬಳಿಕ ಕೊಹ್ಲಿ, ಇದೇ ವಿಲಿಯಮ್ಸ್ ಅವರ ಖ್ಯಾತ ನೋಟ್ ಬುಕ್ ಸೆಲೆಬ್ರೇಷನ್ ಮೂಲಕ ಹಳೇ ಸೇಡನ್ನು ತೀರಿಸಿಕೊಂಡರು. 

 

ಇದನ್ನೂ ಓದಿ: ಅರ್ಧಶತಕ ಸಿಡಿಸಿ ರೋಹಿತ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

ವಿರಾಟ್ ಕೊಹ್ಲಿ 50 ಎಸೆತದಲ್ಲಿ ಅಜೇಯ 94 ರನ್ ಸಿಡಿಸೋ ಮೂಲಕ ಟೀಂ ಇಂಡಿಯಾಗೆ 6 ವಿಕೆಟ್ ಗೆಲುವು ತಂದುಕೊಟ್ಟಿದ್ದರು. ಗೆಲುವಿನ ಜೊತೆಗೆ ಕೊಹ್ಲಿ ನೋಟ್‌ಬುಕ್ ಸೆಲೆಬ್ರೇಷನ್ ವೈರಲ್ ಆಗಿತ್ತು. ಇತ್ತೀಚೆಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ ವಿಲಿಯಮ್ಸ್, ಎಂದಿನಂತೆ ತಮ್ಮ ನೋಟ್‌ಬುಕ್ ಸಂಭ್ರಮಾಚರಣೆ ಮಾಡಿದ್ದರು. 

 

ಇದನ್ನೂ ಓದಿ: ಥ್ಯಾಂಕ್ಯೂ 'ಬಿಗ್ ಬಾಸ್' ಎಂದ ವಿರಾಟ್ ಕೊಹ್ಲಿ..!

ಇದೀಗ ವಿಲಿಯಮ್ಸನ್ ಎಸೆತಕ್ಕೆ ಸಿಕ್ಸರ್ ಸಿಡಿಸೋ ಮೂಲಕ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು ನೀಡಿದ್ದಾರೆ. ಕೊಹ್ಲಿ ತಿರುಗೇಟಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ವಿಂಡೀಸ್ ನಾಡಿನಲ್ಲಿ ನನಗೂ ನೋಟ್‌ಬುಕ್ ಸೆಲೆಬ್ರೇಷನ್ ಅನುಭವ ಆಗಿತ್ತು. ಇದೀಗ ತಿರುಗೇಟು ನೀಡಿದ್ದಾರೆ. ಹೋರಾಟದಲ್ಲಿ ಇವೆಲ್ಲ ಸಹಜ. ಪಂದ್ಯ ಮುಗಿದ ಬಳಿಕ ಹಸ್ತಲಾಘವ ಮಾಡಿ ಎದುರಾಳಿಯನ್ನು ಗೌರವಿಸುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.