ಖ್ಯಾತ ಡ್ರಮ್ಮರ್, ಕನ್ನಡ ಶಿವಮಣಿ ಎಂದೇ ಖ್ಯಾತಿಗೊಂಡಿರುವ ಡ್ರಮ್ಮರ್ ದೇವ ಅಗಲಿಗೆ ಆರ್‌ಸಿಬಿ ಭಾವುಕ ವಿದಾಯ ಹೇಳಿದೆ. ಚಿನ್ನಸ್ವಾಮಿಯಲ್ಲಿ ದೇವ ಬೀಟ್ಸ್ , ತಾಳ ಸದಾ ಕೇಳಿಸುತ್ತೆ. ದೇವ ಆರ್‌ಸಿಬಿ ಅಭಿಮಾನಿಗಳ ಹೃದಯದಲ್ಲಿ ಸದಾ ಇರುತ್ತೀರಿ ಎಂದು ಭಾವುಕ ಸಂದೇಶ ನೀಡಿದೆ.
ಬೆಂಗಳೂರು (ಸೆ.27) ಕನ್ನಡ ಸಿನಿಮಾ, ಸಾಂಸ್ಕೃತಿ ಕಾರ್ಯಕ್ರಮ, ಐಪಿಎಲ್ ಸೇರಿದಂತೆ ಕ್ರಿಕೆಟ್ ಸರಣಿಗಳಲ್ಲಿ ಡ್ರಮ್ಮರ್ ದೇವ ಬೀಟ್ಸ್ ಇದ್ದೇ ಇರುತ್ತೆ. ಸಂಗೀತ ಲೋಕದಲ್ಲಿ ಡ್ರಮ್ಮರ್ ದೇವ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಕಳೆದೆರಡು ವರ್ಷದಿಂದ ಅನಾರೋಗ್ಯದಿಂದ ಬಳಲಿದ ದೇವ್ ನಿಧನ ಕನ್ನಡ ಸಿನಿಮಾ ಹಾಗೂ ಸಂಗೀತ ಲೋಕಕ್ಕೆ ಅಘಾತ ನೀಡಿದೆ. ಗಣ್ಯರು, ಸಿನಿಮಾ ದಿಗ್ಗಜರು ಕಂಬನಿ ಮಿಡಿದಿದ್ದಾರೆ, ಸಂತಾಪ ಸೂಚಿಸಿದ್ದಾರೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡ್ರಮ್ಮರ್ ದೇವಾ ನಿಧನಕ್ಕೆ ಕಂಬನಿ ಮಿಡಿದಿದೆ. ಇದೇ ವೇಳೆ ಅಭಿಮಾನಿಗಳ ಪರವಾಗಿ ಭಾವುಕ ವಿದಾಯ ಹೇಳಿದೆ.
ಆರ್‌ಸಿಬಿ ಕುಟುಂಬದ ಅಗಲಿದ ಸದಸ್ಯನಿಗೆ ಶ್ರದ್ಧಾಂಜಲಿ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯದ ವೇಳೆ ಡ್ರಮ್ಮರ್ ದೇವ್ ಬೀಟ್ಸ್ ಅಭಿಮಾನಿಗಳನ್ನು ಕುಣಿಸುತ್ತದೆ. ತಂಡದ ಹೋರಾಟ, ದೇವ್ ಅವರ ಬೀಟ್ಸ್ ಆರ್‌ಸಿಬಿ ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಇರುತ್ತೆ. ಮೊದಲ ಐಪಿಎಲ್ ಪಂದ್ಯದಿಂದ ಹಿಡಿದು ಅನೇಕ ಪಂದ್ಯಗಳಲ್ಲಿ ದೇವ್ ಬೀಟ್ಸ್ ಅಭಿಮಾನಿಗಳ ಮನತಣಿಸಿದೆ. ಈ ಕುರಿತು ಆರ್‌ಸಿಬಿ ಎಕ್ಸ್ ಮೂಲಕ ಭಾವುಕ ಸಂದೇಶ ಪೋಸ್ಟ್ ಮಾಡಿದೆ.
ಚಿನ್ನಸ್ವಾಮಿಯಲ್ಲಿ ದೇವ್ ಬೀಟ್ಸ್ ಸದಾ ಕೇಳಿಸುತ್ತೆ
ದೇವ್ ಅವರ ಬೀಟ್ಸ್ ಆರ್‌ಸಿಬಿ ಪಂದ್ಯದ ಭಾಗವಾಗಿತ್ತು. ಮೊದಲ ಐಪಿಎಲ್ ಪಂದ್ಯದಿಂದ ಹಿಡಿದು ಪ್ರತಿ ಆರ್‌ಸಿಬಿ ಪಂದ್ಯದಲ್ಲಿ ದೇವ್ ಬೀಟ್ಸ್ ಅಭಿಮಾನಿಗಳ ಮನದಲ್ಲಿ ಅಚ್ಚೊತ್ತಿದೆ. ಆರೋಗ್ಯ ಸಮಸ್ಯೆಯಿಂದ ದೇವ್ ತಮ್ಮ 64ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಕನ್ನಡ ಶಿವಮಣಿ ಎಂದೇ ಗುರುತಿಸಿಕೊಂಡಿದ್ದ ದೇವ್ ಅಗಲಿಕೆ ನೋವುಂಟು ಮಾಡಿದೆ. ದೇವ್ ಅವರ ಬೀಟ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸದಾ ಕೇಳಿಸುತ್ತದೆ. ಅವರ ಪ್ರೀತಿ,ಬೀಟ್ಸ್ ಅಭಿಮಾನಿನಗಳ ಮನದಲ್ಲಿ ಸದಾ ಇರುತ್ತದೆ. ವರ್ಷಗಳ ಕಾಲ ಮನರಂಜನೆ ನೀಡಿದ ದೇವ್ ಅವರಿಗೆ ಧನ್ಯವಾದಗಳು, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆರ್‌ಸಿಬಿ ಪೋಸ್ಟ್ ಮಾಡಿದೆ.
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲಿದ ದೇವ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲಿದ ದೇವ್ ಅಗಲಿಕೆಗೆ ಸಂಗೀತ ಪ್ರಿಯರು ಕಂಬನಿ ಮಡಿದಿದ್ದಾರೆ. ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರ ಜೊತೆ ದೇವ್ ಕೆಲಸ ಮಾಡಿದ್ದಾರೆ. 5 ಈಡಿಯೆಟ್ಸ್, ಪ್ರೀತಿ ನೀ ಹಿಂಗ್ಯಾಕೆ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಲೆವೆಡೆ ಸಂಗೀತ ರಸ ಸಂಜೆ, ಡ್ರಮ್ಮರ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.



