Asianet Suvarna News Asianet Suvarna News

ವನಿತಾ ಐಪಿ​ಎ​ಲ್‌ ಹರಾಜಿಗೆ ಡೇಟ್ ಫಿಕ್ಸ್‌; 409 ಆಟಗಾರ್ತಿಯರು ಹರಾಜಿನಲ್ಲಿ ಭಾಗಿ..!

ಮಹಿಳಾ ಐಪಿಎಲ್ ಟೂರ್ನಿಯ ಹರಾಜಿಗೆ ಕ್ಷಣಗಣನೆ
ಫೆಬ್ರವರಿ 13ರ ಮಧ್ಯಾಹ್ನ 2 ಗಂಟೆಯಿಂದ ಹರಾಜು ಆರಂಭ
ಕರ್ನಾಟಕದಿಂದ 21 ಆಟಗಾರ್ತಿಯರು ಹರಾಜಿನಲ್ಲಿ ಭಾಗಿ

WPL auction 409 players including 246 Indians to go under the hammer kvn
Author
First Published Feb 8, 2023, 8:54 AM IST

ಮುಂಬೈ(ಫೆ.08): ಮುಂಬರು ಫೆಬ್ರವರಿ 13ರಂದು ನಡೆ​ಯ​ಲಿ​ರುವ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಮ​ಹಿಳಾ ಐಪಿ​ಎ​ಲ್‌​)ನ ಹರಾ​ಜು ಪ್ರಕ್ರಿ​ಯೆಗೆ 246 ಭಾರ​ತೀ​ಯರು ಸೇರಿ​ದಂತೆ ಒಟ್ಟು 409 ಆಟ​ಗಾ​ರ್ತಿಯರ ಅಂತಿಮ ಪಟ್ಟಿ​ಯನ್ನು ಬಿಸಿ​ಸಿಐ ಮಂಗ​ಳ​ವಾರ ಪ್ರಕ​ಟಿ​ಸಿದೆ. ಪಟ್ಟಿ​ಯಲ್ಲಿ 163 ವಿದೇಶಿ ಆಟ​ಗಾರ್ತಿಯರ ಜೊತೆ​ಗೆ, 199 ಅಂತಾ​ರಾ​ಷ್ಟ್ರೀಯ ಪಂದ್ಯ​ವಾ​ಡ​ದ​ ಆಟ​ಗಾ​ರ್ತಿಯರೂ ಇದ್ದಾರೆ. 

ಗರಿಷ್ಠ 90 ಆಟ​ಗಾ​ರ್ತಿಯರು ಹರಾ​ಜಾ​ಗ​ಲಿದ್ದು, 30 ಸ್ಥಾನ​ಗಳು ವಿದೇ​ಶಿ​ಗ​ರಿಗೆ ಮೀಸ​ಲಾ​ಗಿದೆ. ಸ್ಮೃತಿ ಮಂಧನಾ, ಹರ್ಮ​ನ್‌​ಪ್ರೀತ್‌, ಶಫಾಲಿ, ಜೆಮಿಮಾ, ದೀಪ್ತಿ, ಅಲೀಸಾ ಹೀಲಿ, ಎಲೈಸಿ ಪೆರ್ರಿ, ಸೋಫಿ ಎಕ್ಲೆ​ಸ್ಟೋನ್‌ ಸೇರಿ​ದಂತೆ 24 ಆಟ​ಗಾ​ರ್ತಿ​ಯರು ಅತಿಹೆಚ್ಚು ಅಂದರೆ 50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿ​ದ್ದಾ​ರೆ. 30 ಅಟ​ಗಾ​ರ್ತಿ​ಯರು 40 ಲಕ್ಷ ರು. ಮೂಲ​ಬೆ​ಲೆಯ ಪಟ್ಟಿ​ಯ​ಲ್ಲಿ​ದ್ದಾರೆ. ಪ್ರತೀ ತಂಡಕ್ಕೆ 15ರಿಂದ 18 ಆಟಗಾರ್ತಿಯರನ್ನು ಖರೀ​ದಿ​ಸಲು ಅವ​ಕಾ​ಶ​ವಿದ್ದು, ಗರಿಷ್ಠ 12 ಕೋಟಿ ರುಪಾಯಿ ಬಳ​ಸ​ಬ​ಹು​ದಾ​ಗಿ​ದೆ. ಟೂರ್ನಿ​ಯ​ಲ್ಲಿ 5 ತಂಡ​ಗಳು ಕಣ​ಕ್ಕಿ​ಳಿ​ಯ​ಲಿ​ವೆ.

ರಾಜ್ಯದ 21 ಮಂದಿ: ಹರಾಜು ಪಟ್ಟಿ​ಯಲ್ಲಿ ಕರ್ನಾ​ಟಕದ 21 ಆಟ​ಗಾ​ರ್ತಿ​ಯರು ಸ್ಥಾನ ಪಡೆ​ದಿ​ದ್ದಾರೆ. ಬಿಸಿಸಿಐನಿಂದ ಮಾನ್ಯತೆ ಪಡೆದ ದೇಶದ ರಾಜ್ಯ ಸಂಸ್ಥೆಗಳ ಪೈಕಿ ಕರ್ನಾಟಕದವರೇ ಅತಿಹೆಚ್ಚು ಮಂದಿ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಲವೂ ಕರ್ನಾ​ಟಕ ರನ್ನ​ರ್‌-ಅಪ್‌

ರಾಂಚಿ: ರಾಷ್ಟ್ರೀಯ ಮಹಿಳಾ ಏಕ​ದಿನ ಕ್ರಿಕೆಟ್‌ ಟೂರ್ನಿ​ಯಲ್ಲಿ ಕರ್ನಾ​ಟಕ ಸತತ 2ನೇ ಬಾರಿ ರನ್ನ​ರ್‌-ಅಪ್‌ ಸ್ಥಾನಕ್ಕೆ ತೃಪ್ತಿ​ಪ​ಟ್ಟಿದೆ. ಮಂಗ​ಳ​ವಾರ ನಡೆದ ಫೈನ​ಲ್‌​ನಲ್ಲಿ ರಾಜ್ಯ ತಂಡ ರೈಲ್ವೇಸ್‌ ವಿರುದ್ಧ 4 ವಿಕೆಟ್‌ ಸೋಲ​ನು​ಭ​ವಿ​ಸಿತು. ಇದ​ರೊಂದಿಗೆ ರೈಲ್ವೇಸ್‌ 16 ಆವೃ​ತ್ತಿ​ಗ​ಳಲ್ಲಿ 14ನೇ ಬಾರಿ ಚಾಂಪಿ​ಯನ್‌ ಪಟ್ಟಅಲಂಕ​ರಿ​ಸಿತು. ರಾಜ್ಯ ತಂಡದ ಚೊಚ್ಚಲ ಪ್ರಶಸ್ತಿ ಕನಸು ಮತ್ತೊಮ್ಮೆ ಭಗ್ನ​ಗೊಂಡಿತು. ಕಳೆದ ಆವೃ​ತ್ತಿ​ಯಲ್ಲೂ ರಾಜ್ಯ ತಂಡ ರೈಲ್ವೇಸ್‌ ವಿರು​ದ್ಧವೇ ಫೈನ​ಲ್‌​ನಲ್ಲಿ ಪರಾ​ಭ​ವ​ಗೊಂಡಿತ್ತು.

ಹೊಸ ಪೋನ್ ಕಳೆದುಕೊಂಡ ವಿರಾಟ್ ಕೊಹ್ಲಿ..! ಮಾಜಿ ನಾಯಕನ ಕಾಲೆಳೆದ ನೆಟ್ಟಿಗರು..!

ಮೊದಲು ಬ್ಯಾಟ್‌ ಮಾಡಿದ ಕರ್ನಾ​ಟಕ 49.4 ಓವ​ರ್‌​ಗ​ಳಲ್ಲಿ 163 ರನ್‌ಗೆ ಸರ್ವ​ಪ​ತನ ಕಂಡಿತು. ರಾಜ್ಯದ ಪರ ಟೂರ್ನಿಯ ಗರಿಷ್ಠ ಸ್ಕೋರರ್‌ ಎನಿ​ಸಿ​ಕೊಂಡಿದ್ದ ವೃಂದಾ 7 ರನ್‌ ಗಳಿಸಿ ನಿರ್ಗ​ಮಿ​ಸಿ​ದರು. ನಾಯಕಿ ವೇದಾ ಕೃಷ್ಣ​ಮೂ​ರ್ತಿ​(10), ಶಿಶಿರಾ ಗೌಡ​(13) ಕೂಡ ಮಿಂಚ​ಲಿಲ್ಲ. ಆದರೆ ದಿವ್ಯಾ 69 ರನ್‌ ಗಳಿಸಿ ತಂಡದ ಮೊತ್ತ 150ರ ಗಡಿ​ ದಾ​ಟಿ​ಸಿದರು. ಕಡಿಮೆ ರನ್‌ ಬೆನ್ನ​ತ್ತಿ​ದರೂ ರೈಲ್ವೇ​ಸ್‌ಗೆ ಸುಲ​ಭ​ದಲ್ಲಿ ಗೆಲುವು ಸಿಗ​ಲಿಲ್ಲ. 65 ರನ್‌ಗೆ 4 ವಿಕೆಟ್‌ ಕಬ​ಳಿ​ಸಿದ ರಾಜ್ಯದ ಬೌಲ​ರ್‌​ಗಳು ಪಂದ್ಯದ ಮೇಲೆ ಹಿಡಿತ ಸಾಧಿ​ಸಿ​ದರು. ಆದರೆ ಹೇಮ​ಲ​ತಾ​(ಔಟಾ​ಗದೆ 38), ತನು​ಜಾ​(31) ಹೋರಾಡಿ ರೈಲ್ವೇ​ಸ್‌ಗೆ 47.3 ಓವ​ರ್‌​ಗ​ಳಲ್ಲಿ ಗೆಲುವು ತಂದು​ಕೊ​ಟ್ಟ​ರು.

ಸ್ಕೋರ್‌: 
ಕರ್ನಾ​ಟಕ 49.4 ಓವ​ರಲ್ಲಿ 163/10 (ದಿವ್ಯಾ 69, ಪ್ರತ್ಯೂಷಾ 21, ತನುಜಾ 3-26) 
ರೈಲ್ವೇಸ್‌ 47.3 ಓವ​ರಲ್ಲಿ 169/6 (ಹೇ​ಮ​ಲತಾ 38*, ತನುಜಾ 31, ಶ್ರೇಯಾಂಕ 3-45)

Follow Us:
Download App:
  • android
  • ios