ಕನ್ನಡತಿ, ಭಾರತ ಮಹಿಳಾ ತಂಡದ ಪ್ರಮುಖ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಸೇರಿದಂತೆ ಪ್ರಮುಖ ಪ್ರತಿಭಾನ್ವಿತ ಆಟಗಾರ್ತಿಯರನ್ನು ಯುಪಿ ವಾರಿಯರ್ಸ್ ಖರೀದಿಸಿದೆ. ಆರ್‌ಸಿಬಿ, ಮುಂಬೈ ಇಂಡಿಯನ್ಸ್ ನಾಚುವಂತೆ ಯುಪಿ ವಾರಿಯರ್ಸ್ ಆಟಗಾರ್ತಿಯರ ಖರೀದಿಸಿದೆ. ಹರಾಜಿನ ಬಳಿಕ ಯುಪಿ ವಾರಿಯರ್ಸ್ ತಂಡದ ಫುಲ್ ಲಿಸ್ಟ್ ಇಲ್ಲಿದೆ.
ಬೆಂಗಳೂರು(ಫೆ.13) ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಚೊಚ್ಚಲ ಹರಾಜು ಪ್ರಕ್ರಿಯೆ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಯುಪಿ ವಾರಿಯರ್ಸ್ ಇದೇ ಮೊದಲ ಬಾರಿಗೆ ಐಪಿಎಲ್ ಆಖಾಡಕ್ಕೆ ಇಳಿದಿದೆ. ಇಷ್ಟೇ ಅಲ್ಲ ಹರಾಜಿನಲ್ಲಿ ಹೆಚ್ಚಿನ ಅನುಭವ ಹೊಂದಿಲ್ಲ. ಆದರೆ ಯುಪಿ ವಾರಿಯರ್ಸ್ ಆಯ್ಕೆಗೆ ಅನುಭವಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ತಂಡಗಳೇ ಶಾಕ್ ಆಗಿವೆ. ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ತಂಡ ಆಯ್ಕೆ ಮಾಡಿದೆ. ಭಾರತ ಮಹಿಳಾ ತಂಡದ ಮ್ಯಾಚ್ ವಿನ್ನರ್ ದೀಪ್ತಿ ಶರ್ಮಾ ಇದೇ ಯುಪಿ ವಾರಿಯರ್ಸ್ ಪಾಲಾಗಿದ್ದಾರೆ. 2.6 ಕೋಟಿ ರೂಪಾಯಿ ನೀಡಿ ದೀಪ್ತಿ ಶರ್ಮಾರನ್ನು ಯುಪಿ ವಾರಿಯರ್ಸ್ ಖರೀದಿಸಿದೆ.ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಕೂಡ ಯುಪಿ ವಾರಿಯರ್ಸ್ ಪಾಲಾಗಿದ್ದಾರೆ.
ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಸ್ಮೃತಿ ಮಂಧಾನಾ 3.4 ಕೋಟಿ ರೂಪಾಯಿ ಬಿಕರಿಯಾಗುವ ಮೂಲಕ ಗರಿಷ್ಠ ಮೊತ್ತದ ದಾಖಲೆ ಬರೆದಿದ್ದಾರೆ. ಇತ್ತ ಯುಪಿ ವಾರಿಯರ್ಸ್ ತಂಡದಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ಆಟಗಾರ್ತಿ ಅನ್ನೋ ಹೆಗ್ಗಳಿಕೆಗೆ ದೀಪ್ತಿ ಶರ್ಮಾ ಪಾತ್ರರಾಗಿದ್ದಾರೆ. ಯುಪಿ ವಾರಿಯರ್ಸ್ ಪ್ರತಿ ಆಟಗಾರ್ತಿಯರ ಆಯ್ಕೆ ವೇಳೆ ಆತುರ ಮಾಡಿಲ್ಲ. ಸೂಕ್ತ ಆಟಗಾರ್ತಿಯರನ್ನು ಆಯ್ಕೆ ಮಾಡಿ ಬಲಿಷ್ಠ ತಂಡ ಕಟ್ಟಿದೆ.
WPL Auction ಗುಜರಾತ್ ಜೈಂಟ್ಸ್ ತಂಡ ಸೇರಿದ ಸ್ನೇಹಾ ರಾಣಾ, ಗಾರ್ಡ್ನರ್, ಇಲ್ಲಿದೆ ಸಂಪೂರ್ಣ ತಂಡದ ವಿವರ!
ಇಂಗ್ಲೆಂಡ್ ಆಟಗಾರ್ತಿ ಸೋಫಿ ಎಕ್ಲೆಸ್ಟೋನ್ 1.8 ಕೋಟಿ ರೂಪಾಯಿಗೆ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ. ಆಸ್ಟ್ರೇಲಿಯಾದ ತಹ್ಲಿಯಾ ಮೆಗ್ರಾಥ್ 1.4 ಕೋಟಿ ರೂಪಾಯಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಇನ್ನು ಸೌತ್ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ 1 ಕೋಟಿ ರೂಪಾಯಿ ಮೊತ್ತ ನೀಡಿ ಯುಪಿ ವಾರಿಯರ್ಸ್ ಖರೀದಿಸಿದೆ. ಆಸ್ಟ್ರೇಲಿಯಾದ ಅಲಿಸಾ ಹೀಲೆ 70 ಲಕ್ಷ ರೂಪಾಯಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಭಾರತ ತಂಡದ ಪ್ರಮುಖ ಆಟಗಾರ್ತಿ ದೇವಿಕಾ ವೈದ್ಯೆ 1.4 ಕೋಟಿ ರೂಪಾಯಿ ಮೊತ್ತಕ್ಕೆ ಯುಪಿ ವಾರಿಯರ್ಸ್ ತಂಡ ಸೇರಿಕೊಂಡಿದ್ದಾರ.
ಕರ್ನಾಟ ಮೂಲದ ಭಾರತ ಮಹಿಳಾ ತಂಡದ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್‌ಗೆ 40 ಲಕ್ಷ ರೂಪಾಯಿ ನೀಡಿ ಯುಪಿ ವಾರಿಯರ್ಸ್ ಖರೀದಿಸಿತು. ಅಂಜಲಿ ಸರ್ವಾನಿ 55 ಲಕ್ಷ ರೂಪಾಯಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಶ್ವೇತಾ ಶೆರವಾತ್ 40 ಲಕ್ಷ ರೂಪಾಯಿ ಮೊತ್ತಕ್ಕೆ ಹರಾಜಾಗಿದ್ದಾರೆ. ಪಾರ್ಶ್ವಿ ಚೋಪ್ರಾ ಮೂಲ ಬೆಲೆ 10 ಲಕ್ಷ ರೂಪಾಯಿಗೆ ಯುಪಿ ವಾರಿಯರ್ಸ್ ತಂಡ ಸೇರಿಕೊಂಡಿದ್ದಾರೆ. ಎಸ್ ಯಶಸ್ರಿ 10 ಲಕ್ಷ ರೂಪಾಯಿ, ಕಿರನ್ ನಾವ್ಗಿರೆ 10 ಲಕ್ಷ ರೂಪಾಯಿ, ಗ್ರೇಸ್ ಹ್ಯಾರಿಸ್ 75 ಕ್ಷ ರೂಪಾಯಿಗೆ ಸೇಲ್ ಆಗಿದ್ದಾರೆ. ಲೌರೆಲ್ ಬೆಲ್ 30 ಲಕ್ಷ ರೂಪಾಯಿ, ಲಕ್ಷ್ಮಿ ಯಾದವ್ 10 ಲಕ್ಷ ರೂಪಾಯಿ, ಸಿಮ್ರಾನ್ ಶೇಕ್ 10 ಲಕ್ಷ ರೂಪಾಯಿ ಮೊತ್ತಕ್ಕೆ ಸೇಲ್ ಆಗಿದ್ದಾರೆ.
WPL Auction ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಬೆನ್ನಲ್ಲೇ ಕನ್ನಡದಲ್ಲಿ ಸ್ಮೃತಿ ಮಂಧಾನ ಸಂದೇಶ!
ಹರಾಜಿನ ಬಳಿಕ ಯುಪಿ ವಾರಿಯರ್ಸ್ ತಂಡ ಪಟ್ಟಿ
ಸೋಫಿ ಎಕ್ಲೆಸ್ಟೋನ್: 1.8 ಕೋಟಿ ರೂಪಾಯಿ
ದೀಪ್ತಿ ಶರ್ಮಾ : 2.6 ಕೋಟಿ ರೂಪಾಯಿ
ತಹಿಲಾ ಮೆಕ್‌ಗ್ರಾಥ್ : 1.4 ಕೋಟಿ ರೂಪಾಯಿ
ಶಬ್ನಿಮ್ ಇಸ್ಮಾಯಿಲ್ : 1 ಕೋಟಿ ರೂಪಾಯಿ
ಅಲಿಸಾ ಹೀಲೆ : 70 ಲಕ್ಷ ರೂಪಾಯಿ
ಅಂಜಲಿ ಸರ್ವಾನಿ : 55 ಲಕ್ಷ ರೂಪಾಯಿ
ರಾಜೇಶ್ವರಿ ಗಾಯಕ್ವಾಡ್ :40 ಲಕ್ಷ ರೂಪಾಯಿ
ಶ್ವೇತಾ ಶೆರವಾತ್ : 40 ಲಕ್ಷ ರೂಪಾಯಿ
ಪಾರ್ಶವಿ ಚೋಪ್ರಾ : 10 ಲಕ್ಷ ರೂಪಾಯಿ
ಎಸ್ ಯಶಸ್ರಿ : 10 ಲಕ್ಷ ರೂಪಾಯಿ
ಕಿರಣ್ ನಾವ್ಗಿರೆ : 30 ಲಕ್ಷ ರೂಪಾಯಿ
ಗ್ರೇಸ್ ಹ್ಯಾರಿಸ್ : 75 ಲಕ್ಷ ರೂಪಾಯಿ
ದೇವಿಕಾ ವೈದ್ಯ : 1.4 ಕೋಟಿ ರೂಪಾಯಿ
ಲೌರೆನ್ ಬೆಲ್ : 30 ಲಕ್ಷ ರೂಪಾಯಿ
ಲಕ್ಷ್ಮಿ ಯಾದವ್ : 10 ಲಕ್ಷ ರೂಪಾಯಿ
ಸಿಮ್ರಾನ್ ಶೇಕ್ : 10 ಲಕ್ಷ ರೂಪಾಯಿ
