ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಚೊಚ್ಚಲ ಹರಾಜು ಪ್ರಕ್ರಿಯೆ ಅಂತ್ಯಗೊಂಡಿದೆ. ಸ್ಮೃತಿ ಮಂಧನಾ ಗರಿಷ್ಠ ಮೊತ್ತಕ್ಕೆ ಸೇಲಾದರೆ ಹಲವರು ಮಾರಾಟವಾಗದೆ ಉಳಿದುಕೊಂಡರು. ಇದೇ ಮೊದಲ ಬಾರಿಗೆ ಮಹಿಳಾ ಐಪಿಎಲ್ ಟೂರ್ನಿ ಅಖಾಡಕ್ಕಿಳಿದಿರುವ ಗುಜರಾತ್ ಜೈಂಟ್ಸ್ ಅಳೆದು ತೂಗಿ ಆಟಗಾರ್ತಿಯರ ಖರೀದಿಸಿದೆ. ಹರಾಜಿನ ಬಳಿಕ ಗುಜರಾತ್ ಜೈಂಟ್ಸ್ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು(ಫೆ.13): ಐಪಿಎಲ್ ಅಭಿಮಾನಿಗಳಿಗೆ ಢಬಲ್ ಧಮಾಕ. ಇದೇ ಮೊದಲ ಬಾರಿಗೆ ಪುರಷರ ಐಪಿಎಲ್ ಟೂರ್ನಿ ರೀತಿಯಲ್ಲೇ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡ ಹರಾಜಿನಲ್ಲಿ ಪಾಲ್ಗೊಂಡಿತ್ತು. ಪುರುಷರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಹಾಲಿ ಚಾಂಪಿಯನ್. ಇದೀಗ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಜೈಂಟ್ಸ್ ಚೊಚ್ಚಲ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟು ಆಟಗಾರ್ತಿಯರ ಖರೀದಿ ಮಾಡಿದೆ. ಆಸ್ಟ್ರೇಲಿಯ ಪ್ರಮುಖ ಆಟಗಾರ್ತಿ ಆಶ್ಲೇಹ್ ಗಾರ್ಡ್ನರ್‌ಗೆ ಬರೋಬ್ಬರಿ 3.2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಗುಜರಾತ್ ಜೈಂಟ್ಸ್ ಖರೀದಿಸಿದ ದುಬಾರಿ ಆಟಗಾರ್ತಿ ಅನ್ನೋ ಹೆಗ್ಗಳಿಗೆಗೆ ಗಾರ್ಡ್ನರ್ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಬೆಥ್ ಮೂನಿಗೆ ಗುಜರಾತ್ ಜೈಂಟ್ಸ್ 2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇನ್ನು ಗಾರ್ಡ್ನರ್ ಹಾಗೂ ಬೆಥ್ ಮೂನಿ ಇಬ್ಬರು ಆಟಗಾರ್ತಿಯರಿಗೆ ಗುಜರಾತ್ ಜೈಂಟ್ಸ್ ಕೋಟಿ ಕೋಟಿ ರೂಪಾಯಿ ಸುರಿದಿದೆ. ಪ್ರತಿಭಾನ್ವಿತ ಆಟಗಾರ್ತಿಯರನ್ನು ತಂಡ ಸೇರಿಸಿಕೊಂಡು ಬಲಿಷ್ಠ ತಂಡವನ್ನಾಗಿ ರೂಪಿಸಿದೆ. ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ಅಳೆದು ತೂಗಿ ಪ್ಲೇಯರ್ಸ್ ಖರೀದಿಸಿದೆ.

WPL Auction ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಬೆನ್ನಲ್ಲೇ ಕನ್ನಡದಲ್ಲಿ ಸ್ಮೃತಿ ಮಂಧಾನ ಸಂದೇಶ!

ಇಂಗ್ಲೆಂಡ್ ಆಟಗಾರ್ತಿ ಸೋಫಿಯಾ ಡಂಕ್ಲೆಗೆ 60 ಲಕ್ಷ ರೂಪಾಯಿ ನೀಡಿತು. ಇನ್ನು ಬಿಗ್‌ಬ್ಯಾಶ್ ಮಹಿಳಾ ಲೀಗ್ ಟೂರ್ನಿಯಲ್ಲಿ ಮಿಂಚಿರುವ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲೆಂಡ್‌ಗೆ ಗುಜರಾಟ್ ಜೈಂಟ್ಸ್ 70 ಲಕ್ಷ ರೂಪಾಯಿ ನೀಡಿತು. ಹಿಮಾಚಲ ಪ್ರದೇಶದ ಮೂಲಕ ಭಾರತ ಮಹಿಳಾ ತಂಡ ಆಟಗಾರ್ತಿ ಹರ್ಲಿನ್ ದಿಯೋಲ್ ಗುಜರಾತ್ ಜೈಂಟ್ಸ್ ತಂಡ ಸೇರಿಕೊಂಡಿದ್ದಾರೆ. ದಿಯೋಲ್‌ಗೆ 40 ಲಕ್ಷ ರೂಪಾಯಿ ನೀಡಿ ಗುಜರಾತ್ ಖರೀದಿಸಿತು. ವೆಸ್ಟ್ ಇಂಡೀಸ್ ಮಹಿಳಾ ತಂಡದ ಪ್ರತಿಭಾನ್ವಿತ ಆಟಗಾರ್ತಿ ಡಿಯಾಂಡ್ರ ಡೊಟ್ಟಿನ್‌ಗೆ 60 ಲಕ್ಷ ರೂಪಾಯಿ ನೀಡಿ ಖರೀದಿಸಿದೆ.

ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿ ಸ್ನೇಹಾ ರಾಣಾ 75 ಲಕ್ಷ ರೂಪಾಯಿಗೆ ಗುಜರಾತ್ ಜೈಂಟ್ಸ್ ತಂಡ ಸೇರಿಕೊಂಡಿದ್ದಾರೆ. ಸಬ್ಬಿನೇನಿ ಮೆಘಾನಗೆ 30 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ಆಸ್ಟ್ರೇಲಿಯಾದ ಜಾರ್ಜಿಯಾ ವರ್ಹ್ಯಾಮ್‌ 75 ಲಕ್ಷ ರೂಪಾಯಿಗೆ ಗುಜರಾತ್ ಜೈಂಟ್ಸ್ ಪಾಲಾಗಿದ್ದಾದರೆ. ಇನ್ನು ಭಾರತದ ಮಾನ್ಸಿ ಜೋಶಿ 30 ಲಕ್ಷ ರೂಪಾಯಿ, ದಯಾಲನ್ ಹೇಮಲತಾ 30 ಲಕ್ಷ ರೂಪಾಯಿ, ಮೋನಿಕಾ ಪಟೇಲ್ 30 ಲಕ್ಷ ರೂಪಾಯಿ ಹಾಗೂ ತನುಜಾ ಕನ್ವರ್‌ಗೆ 50 ಲಕ್ಷ ರೂಪಾಯಿ ನೀಡಿ ಖರೀದಿಸಲಾಗಿದೆ. ಸುಶ್ಮಾ ವರ್ಣಾಗೆ 60 ಲಕ್ಷ ರೂಪಾಯಿ, ಅಶ್ವಿನಿ ಕುಮಾರಿ 35 ಹಾಗೂ ಪುರಾಣಿಕ್ ಸಿಸೋಡಿಯಾಗೆ 10 ಲಕ್ಷ ರೂಪಾಯಿ ನೀಡಿ ಖರೀದಿಸಲಾಗಿದೆ. 

WPL Auction ಆರ್‌ಸಿಬಿ ಬಿಡ್ ಗೆಲ್ಲುತ್ತಿದ್ದಂತೆ ಸಂಭ್ರಮದಲ್ಲಿ ತೇಲಾಡಿದ ಮಂಧಾನಾ, ರೇಣುಕಾ ಸಿಂಗ್!

ಹರಾಜಿನ ಬಳಿಕ ಗುಜರಾತ್ ಜೈಂಟ್ಸ್ ತಂಡದ ಪಟ್ಟಿ
ಅಶ್ಲೇಹ್ ಗಾರ್ಡ್ನರ್: 3.2 ಕೋಟಿ ರೂಪಾಯಿ
ಬೆಥ್ ಮೂನಿ: 2 ಕೋಟಿ ರೂಪಾಯಿ
ಸೋಫಿಯಾ ಡಂಕ್ಲೆ: 60 ಲಕ್ಷ ರೂಪಾಯಿ
ಅನ್ನಾಬೆಲ್ ಸದರ್ಲೆಂಡ್: 70 ಲಕ್ಷ ರೂಪಾಯಿ
ಹರ್ಲಿನ್ ದಿಯೋಲ್: 40 ಲಕ್ಷ ರೂಪಾಯಿ
ಡಿಯಾಂಡ್ರ ಡೊಟ್ಟಿನ: 60 ಲಕ್ಷ ರೂಪಾಯಿ
ಸ್ನೇಹಾ ರಾಣ:75 ಲಕ್ಷ ರೂಪಾಯಿ
ಸಬ್ಬಿನೇನಿ ಮೇಘನಾ: 30 ಲಕ್ಷ ರೂಪಾಯಿ
ಜಾರ್ಜಿಯಾ ವಾರ್ಹ್ಯಾಮ್: 75 ಲಕ್ಷ ರೂಪಾಯಿ
ಮಾನ್ಸಿ ಜೋಶಿ :30 ಲಕ್ಷ ರೂಪಾಯಿ
ದಯಾಲನ್ ಹೇಮಲತಾ: 30 ಲಕ್ಷ ರೂಪಾಯಿ
ಮೊನಿಕಾ ಪಟೇಲ್ :30 ಲಕ್ಷ ರೂಪಾಯಿ
ತನುಜಾ ಕನ್ವರ್ : 50 ರೂಪಾಯಿ

ಸುಶ್ಮಾ ವರ್ಣಾ: 60 ಲಕ್ಷ ರೂಪಾಯಿ
ಹರ್ಲೇ ಗಾಲಾ : 10 ಲಕ್ಷ ರೂಪಾಯಿ
ಅಶ್ವಿನಿ ಕುಮಾರಿ : 35 ಲಕ್ಷ ರೂಪಾಯಿ
ಪುರಾಣಿಕಾ ಸಿಸೋಡಿಯಾ : 10 ಲಕ್ಷ ರೂಪಾಯಿ