ನಿನ್ನೆಯಷ್ಟೆ ಮಹಿಳಾ ಐಪಿಎಲ್ ಟೂರ್ನಿ ಉದ್ಘಾಟನೆಯಾಗಿದೆ. ಅದ್ಧೂರಿ ಉದ್ಘಾಟನಾ ಸಮಾರಂಭವೂ ಕಣ್ಮನಸೆಳೆದಿತ್ತು. ಈ ಉದ್ಘಾಟನಾ ಸಮಾರಂಭದಲ್ಲಿ ಕೆಲಸ ಮಾಡಿದ್ದ ಕ್ಯಾಮೆರಾಮೆನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಬೆಂಗಳೂರು(ಫೆ.24) ಮಹಿಳಾ ಐಪಿಎಲ್ ಟೂರ್ನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿ ಉದ್ಘಟನಾ ಕಾರ್ಯಕ್ರಮದ ಮೂಲಕ ಟೂರ್ನಿ ಆರಂಭಗೊಂಡಿದೆ. ಬಾಲಿವುಡ್ ತಾರೆಯರ ವರ್ಣರಂಜಿತ ಕಾರ್ಯಕ್ರಮ ಎಲ್ಲರ ಮನೆಸೂರೆಗೊಂಡಿತ್ತು. ಈ ಸಮಾರಂಭದಲ್ಲಿ ಕೆಲಸ ಮಾಡಿದ್ದ ಕ್ಯಾಮೆರಾಮೆನ್ ಕಮಲನಾಡಿ ಮುತ್ತು ತಿರುವಳ್ಳನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಕ್ಯಾಮೆರಾಮೆನ್ ಆಗಿ ನೇಮಕಗೊಂಡಿದ್ದ ತಿರುವಳ್ಳನ್ ನಿನ್ನೆ ಅಷ್ಟೇ ಲವಲವಿಕೆಯಿಂದ ಕೆಲಸ ಮಾಡಿದ್ದರು.ಕೆಲಸದ ವೇಳೆ ಯಾವುದೇ ಆಯಾಸವಾಗಲಿ, ಆರೋಗ್ಯ ಸಮಸ್ಯೆಯಾಗಲಿ ಕಾಣಿಸಿಕೊಂಡಿಲ್ಲ. ಆದರೆ ಇಂದು ತಿರುವಳ್ಳನ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಐಪಿಎಲ್, ಕ್ರಿಕೆಟ್ ಟೂರ್ನಿ, ಕಬಡ್ಡಿ ಸೇರಿದಂತೆ ಕ್ರೀಡೆಯ ನೇರಪ್ರಸಾರದಲ್ಲಿ ಕ್ಯಾಮೆರಾಮೆನ್ ಆಗಿ ತಿರುವಳ್ಳನ್ ಕೆಲಸ ಮಾಡಿದ್ದಾರೆ.

ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಔಟ್..!

ಸದಾ ನಗುಮುಖದಿಂದ ಇರುವ ತಿರುವ್ಳನ್ ಮಹಿಳಾ ಐಪಿಎಲ್ ಟೂರ್ನಿಯ ನೇರಪ್ರಸಾರದ ಮಹತ್ತರ ಜವಾಬ್ದಾರಿ ವಹಿಸಿಕೊಂಡಿದ್ದರು. ಕ್ರೀಡೆಯನ್ನು ಜನರಿಗೆ ಅಷ್ಟೇ ರೋಚಕವಾಗಿ ಜನರಿಗೆ ತಲುಪಿಸುವಲ್ಲಿ ತಿರುವಳ್ಳನ್ ಅತ್ಯಂತ ಯಶಸ್ವಿಯಾಗಿದ್ದರು. ಇದೀಗ ತಿರುವಳ್ಳನ್ ಸಾವಿಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್, ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. 

Scroll to load tweet…

ಇದು ಆಘಾತಕಾರಿ ಸುದ್ದಿ. ಸದಾ ನಗುತ್ತಲೇ ಇರುತ್ತಿದ್ದ ತಿರು ಅತ್ಯಂತ ಆತ್ಮೀಯರು. ಕ್ರೀಡೆಯನ್ನು ಅಷ್ಟೇ ರೋಚಕವಾಗಿ ಜನರಿಗೆ ತಲುಪಿಸಿದ ತಿರು ಮಿಡ್ ವಿಕೆಟ್ ಕ್ಯಾಮೆರಾವನ್ನು ಅವರದ್ದೇ ಶೈಲಿಯಲ್ಲಿ ಜನರಿಗೆ ತಲಪಿಸಿದ್ದಾರೆ. ನಾವು ಭೇಟಿಯಾದಗೆಲ್ಲಾ, ತಿರು ಅವರ ಪೂರ್ಣ ಹೆಸರನ್ನು ಹೇಳುತ್ತಿದ್ದೆ. ಆದರೆ ತಿರು ಅದೆ ನಗುವಿನಿಂದ ಉತ್ತರ ನೀಡುತ್ತಿದ್ದರು. ಈ ಸುದ್ದಿ ಭಯಾನಕ ಎಂದು ಹರ್ಷಾ ಬೋಗ್ಲೆ ಹೇಳಿದ್ದಾರೆ.

KL Rahul Kannada: 'ಅದು ಕನ್ನಡ್ ಅಲ್ಲ ಕನ್ನಡ..' ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದ ಕೆ ಎಲ್ ರಾಹುಲ್..

ಖಾಸಗಿ ವಾಹಿನಿಯ ಹಿರಿಯ ಛಾಯಾಗ್ರಾಹಕವಾಗಿ ಕೆಲಸ ಮಾಡುತ್ತಿದ್ದ ತಿರುವಳ್ಳವನ್ ಇನ್ನಿಲ್ಲ ಅನ್ನೋ ಸುದ್ದಿ ಕ್ರೀಡಾ ಜಗತ್ತಿನಲ್ಲಿ ಆಘಾತ ತಂದಿದೆ. ಇಂದು ಬೆಳಗ್ಗೆ ತಿರುವಳ್ಳವನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಎದೆನೋವಿನಿಂದ ಅಸ್ವಸ್ಥಗೊಂಡ ತಿರುವಳ್ಳವನ್ ಅವರನ್ನು ತಕ್ಷವೇ ಆಸ್ಪತ್ರೆ ದಾಖಲಿಸಲಾಗಿತ್ತು. ಅಷ್ಟರೊಳಗೆ ತಿರುವಳ್ಳವನ್ ಪ್ರಾಣಪಕ್ಷಿ ಹಾರಿಹೋಗಿತ್ತು.