KL Rahul Kannada: 'ಅದು ಕನ್ನಡ್ ಅಲ್ಲ ಕನ್ನಡ..' ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದ ಕೆ ಎಲ್ ರಾಹುಲ್..!
ಐಪಿಎಲ್‌ಗಾಗಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಹುಡುಗನೊಬ್ಬ ಕೆ ಎಲ್ ರಾಹುಲ್‌ಗೆ ಡೈಲಾಗ್ ಸ್ಕ್ರಿಪ್ಟ್ ನೀಡುತ್ತಾನೆ. ಬೇರೆ ಬೇರೆಯ ಭಾಷೆಯ ಸ್ಕ್ರಿಪ್ಟ್ ಬಗ್ಗೆ ಮಾತನಾಡುವಾಗ ಕನ್ನಡದ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು(ಫೆ.24): ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್, ಸದ್ಯ ಫಿಟ್ನೆಸ್ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಎದುರಿನ ಕಳೆದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದರ ನಡುವೆ ಮುಂಬರುವ 17ನೇ ಆವತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿ ಟಿವಿ ನೇರ ಪ್ರಸಾರದ ಮಾಧ್ಯಮ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಹಲವು ತಾರಾ ಕ್ರಿಕೆಟಿಗರ ಬಳಿ ಜಾಹಿರಾತುಗಳನ್ನು ರೆಡಿ ಮಾಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹಿಂದಿವಾಲನಿಗೆ ಕನ್ನಡಿಗ ಕೆ ಎಲ್ ಕನ್ನಡ ಪಾಠ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೌದು. ಐಪಿಎಲ್‌ಗಾಗಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಹುಡುಗನೊಬ್ಬ ಕೆ ಎಲ್ ರಾಹುಲ್‌ಗೆ ಡೈಲಾಗ್ ಸ್ಕ್ರಿಪ್ಟ್ ನೀಡುತ್ತಾನೆ. ಬೇರೆ ಬೇರೆಯ ಭಾಷೆಯ ಸ್ಕ್ರಿಪ್ಟ್ ಬಗ್ಗೆ ಮಾತನಾಡುವಾಗ ಕನ್ನಡದ ಬಗ್ಗೆ ಮಾತನಾಡಿದ್ದಾರೆ. ಮ್ಯಾಚ್ ಡೇ ಪ್ರೋಮೋ ಇಂಗ್ಲೀಷ್, ಮ್ಯಾಚ್ ಡೇ ಪ್ರೋಮೋ ಹಿಂದಿ, ಮ್ಯಾಚ್ ಡೇ ಪ್ರೋಮೋ ಕನ್ನಡ ಎನ್ನುತ್ತಿರುವಾಗಲೇ ಹಿಂದಿವಾಲ ಹುಡುಗ ಕನ್ನಡ್ ಎನ್ನತ್ತಾನೆ. ನಿಮಗೆ ಎಷ್ಟು ಸಲ ಹೇಳಬೇಕು. ಅದು ಕನ್ನಡ್ ಅಲ್ಲ ಕನ್ನಡ ಎಂದು ಕೆ ಎಲ್ ರಾಹುಲ್ ಆ ಹುಡುಗನ ಮೇಲೆ ರೇಗುತ್ತಾರೆ. ಬಳಿಕ ಕನ್ನಡ್ ಅಲ್ಲ ಕನ್ನಡ ಅಂತ ಹೇಳು ಎಂದು ಹಿಂದಿವಾಲ ಬಾಯಲ್ಲಿ ಕನ್ನಡ ಹೇಳಿಸುತ್ತಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
'ನಂಗೂ ಭಯ ಆಗುತ್ತೆ..!': ಗರ್ಲ್ ಫ್ಯಾನ್‌ಗೆ ಯಶಸ್ವಿ ಜೈಸ್ವಾಲ್ ಹೀಗಂದಿದ್ದೇಕೆ..? ವಿಡಿಯೋ ವೈರಲ್
ಹೀಗಿದೆ ನೋಡಿ ಆ ವಿಡಿಯೋ:
KL Rahul at Star Sports IPL film shoot. pic.twitter.com/5H2Lum8Sv9
— Mufaddal Vohra (@mufaddal_vohra) February 23, 2024
ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೇ, 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಇನ್ನು ಕನ್ನಡಿಗ ಕೆ ಎಲ್ ರಾಹುಲ್, ಲಖನೌ ಸೂಪರ್ ಜೈಂಟ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲು ಸಜ್ಜಾಗಿದ್ದಾರೆ.
WPL 2024: ಬೆಂಗಳೂರಿನಲ್ಲಿಂದು ಆರ್‌ಸಿಬಿ vs ಯುಪಿ ವಾರಿಯರ್ಸ್ ಫೈಟ್
ಲಖನೌ ಸೂಪರ್ ಜೈಂಟ್ಸ್ ತಂಡವು ಕಳೆದೆರಡು ಆವೃತ್ತಿಯ ಐಪಿಎಲ್‌ನಲ್ಲೂ ಅದ್ಭುತ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿದೆಯಾದರೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಶತಾಯಗತಾಯ ಕಪ್ ಗೆಲ್ಲಲು ಕೆ ಎಲ್ ರಾಹುಲ್ ಪಡೆ ಐಪಿಎಲ್ ಕಪ್ ಗೆಲ್ಲಲು ಎದುರು ನೋಡುತ್ತಿದೆ.