MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಈ ಕ್ಯಾನ್ಸರ್‌ನಿಂದ ರಿಂಕು ಸಿಂಗ್ ತಂದೆ ನಿಧನ! ಕೆಲದಿನಗಳ ಹಿಂದಷ್ಟೇ ಭಾರತ ತಂಡ ತೊರೆದಿದ್ದ ಆಟಗಾರ

ಈ ಕ್ಯಾನ್ಸರ್‌ನಿಂದ ರಿಂಕು ಸಿಂಗ್ ತಂದೆ ನಿಧನ! ಕೆಲದಿನಗಳ ಹಿಂದಷ್ಟೇ ಭಾರತ ತಂಡ ತೊರೆದಿದ್ದ ಆಟಗಾರ

ಒಂದು ಕಡೆ ಐಸಿಸಿ ಟಿ20 ವಿಶ್ವಕಪ್ ನಡೆಯುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ತಂದೆ ಖಚೇಂದ್ರ ಸಿಂಗ್ ಇಂದು ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ. 

1 Min read
Author : Naveen Kodase
| Updated : Feb 27 2026, 09:21 AM IST
Share this Photo Gallery
  • FB
  • TW
  • Linkdin
  • Whatsapp
16
ರಿಂಕು ಸಿಂಗ್ ತಂದೆ ನಿಧನ
Image Credit : X

ರಿಂಕು ಸಿಂಗ್ ತಂದೆ ನಿಧನ

ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಅವರ ತಂದೆ ಖಚೇಂದ್ರ ಸಿಂಗ್ ಶುಕ್ರವಾರವಾದ ಇಂದು ಲಿವರ್ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ಅವರು ನಾಲ್ಕನೇ ಸ್ಟೇಜ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

26
ಭಾರತ ತಂಡದಲ್ಲಿದ್ದ ರಿಂಕು ಸಿಂಗ್
Image Credit : Getty

ಭಾರತ ತಂಡದಲ್ಲಿದ್ದ ರಿಂಕು ಸಿಂಗ್

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಿಂಕು ಸಿಂಗ್ ಭಾರತ ತಂಡದ ಭಾಗವಾಗಿದ್ದರು. ಆದರೆ ಸೂಪರ್-8 ಹಂತದ ಪಂದ್ಯಕ್ಕೂ ಮುನ್ನ ತಂದೆಯ ಆರೋಗ್ಯ ಬಿಗಡಾಯಿಸಿದ್ದರಿಂದ ಭಾರತ ತಂಡ ತೊರೆದು ಮನೆಗೆ ತೆರಳಿದ್ದರು.

Related Articles

Related image1
ಅಷ್ಟಕ್ಕೂ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ತಂದೆಗೆ ಏನಾಗಿದೆ? ರಿಂಕು ದಿಢೀರ್ ತಂಡ ತೊರೆದಿದ್ದೇಕೆ?
Related image2
'ವಿನ್ನಿಂಗ್ ಶಾಟ್ ನಾನೇ ಹೊಡಿತೀನಿ': ನಿಜವಾದ ರಿಂಕು ಸಿಂಗ್ ಭವಿಷ್ಯ!
36
ಕಂಬನಿ ಮಿಡಿದ ಭಜ್ಜಿ
Image Credit : X

ಕಂಬನಿ ಮಿಡಿದ ಭಜ್ಜಿ

ಹರ್ಭಜನ್ ಸಿಂಗ್, ರಿಂಕು ಸಿಂಗ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ರಿಂಕು ಸಿಂಗ್ ಅವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಭಜ್ಜಿ ಟ್ವೀಟ್ ಮಾಡಿದ್ದಾರೆ.

46
ಕಳೆದೊಂದು ವಾರದಿಂದ ರಿಂಕು ತಂದೆ ಆರೋಗ್ಯ ಬಿಗಡಾಯಿಸಿತ್ತು.
Image Credit : X

ಕಳೆದೊಂದು ವಾರದಿಂದ ರಿಂಕು ತಂದೆ ಆರೋಗ್ಯ ಬಿಗಡಾಯಿಸಿತ್ತು.

ಟೈಮ್ಸ್ ನೌ ಸುದ್ದಿಸಂಸ್ಥೆ ವರದಿಯ ಪ್ರಕಾರ, ರಿಂಕು ಸಿಂಗ್ ಅವರ ತಂದೆ ಗ್ರೇಟರ್‌ ನೋಯ್ಡಾದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದೊಂದು ವಾರದಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ತಂದೆಯನ್ನು ಭೇಟಿ ಮಾಡಿ ರಿಂಕು ಮತ್ತೆ ಭಾರತ ತಂಡವನ್ನು ಕೂಡಿಕೊಂಡಿದ್ದರು. ಆದರೆ ರಿಂಕು ಅವರಿಗೆ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

56
ಮಗನನ್ನು ಕ್ರಿಕೆಟಿಗನಾಗಿ ಮಾಡಲು ತಂದೆಯ ಶ್ರಮ ಹಿರಿದು
Image Credit : X

ಮಗನನ್ನು ಕ್ರಿಕೆಟಿಗನಾಗಿ ಮಾಡಲು ತಂದೆಯ ಶ್ರಮ ಹಿರಿದು

ರಿಂಕು ಸಿಂಗ್ ಇಂದು ಭಾರತದ ಸ್ಟಾರ್ ಕ್ರಿಕೆಟಿಗನಾಗುವಲ್ಲಿ ಅವರ ತಂದೆಯ ಪಾತ್ರ ದೊಡ್ಡದಿದೆ. ಎಲ್‌ಪಿಜಿ ಸಿಲಿಂಡರ್ ಡೆಲಿವರಿ ಮಾಡುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರದಿದ್ದರೂ, ರಿಂಕು ಸಿಂಗ್‌ಗೆ ಎಷ್ಟು ಸಾಧ್ಯವೋ ಅಷ್ಟು ಕ್ರಿಕೆಟ್ ಬೆಳವಣಿಗೆಗೆ ಸಹಕಾರ ನೀಡಿ ದೊಡ್ಡ ಕ್ರಿಕೆಟಿಗನನ್ನಾಗಿ ಮಾಡಲು ಪಣ ತೊಟ್ಟಿದ್ದರು.

66
ರಿಂಕು ತಂದೆಗೆ ಬೈಕ್ ಗಿಫ್ಟ್
Image Credit : social media

ರಿಂಕು ತಂದೆಗೆ ಬೈಕ್ ಗಿಫ್ಟ್

ಇನ್ನು ರಿಂಕು ಸಿಂಗ್ ಕಳೆದ ವರ್ಷವಷ್ಟೇ ತಮ್ಮ ಪ್ರೀತಿಯ ತಂದೆಗೆ ಸುಮಾರು 3.19 ಲಕ್ಷ ರುಪಾಯಿ ಮೌಲ್ಯದ ಕವಾಸಕಿ ನಿಂಜಾ ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಐಸಿಸಿ ಟಿ20 ವಿಶ್ವಕಪ್

Latest Videos
Recommended Stories
Recommended image1
ಟಿ20 ವಿಶ್ವಕಪ್: ನಿನ್ನೆ ನಡೆದ ಭಾರತ-ಜಿಂಬಾಬ್ವೆ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
Recommended image2
ರಣಜಿ ಫೈನಲ್: ಮಯಾಂಕ್ ಅಗರ್‌ವಾಲ್ ಕೆಚ್ಚೆದೆಯ ಶತಕ, ಜಮ್ಮು ಎದುರು ಮುಂದುವರೆದ ರಾಜ್ಯದ ಹೋರಾಟ
Recommended image3
IPL ಡೀಲ್‌ಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ವೆಸ್ಟ್‌ ಇಂಡೀಸ್‌? ಪಾಕ್‌ ಮಾಜಿ ಸ್ಪಿನ್ನರ್‌ ಸಕ್ಲೇನ್ ಮುಷ್ತಾಕ್ ಗಂಭೀರ ಆರೋಪ!
Related Stories
Recommended image1
ಅಷ್ಟಕ್ಕೂ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ತಂದೆಗೆ ಏನಾಗಿದೆ? ರಿಂಕು ದಿಢೀರ್ ತಂಡ ತೊರೆದಿದ್ದೇಕೆ?
Recommended image2
'ವಿನ್ನಿಂಗ್ ಶಾಟ್ ನಾನೇ ಹೊಡಿತೀನಿ': ನಿಜವಾದ ರಿಂಕು ಸಿಂಗ್ ಭವಿಷ್ಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved