Asianet Suvarna News Asianet Suvarna News

ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಔಟ್..!

ಬಿಸಿಸಿಐ ಈಗಾಗಲೇ 2023-24ರ ಗುತ್ತಿಗೆ ಪಟ್ಟಿ ಸಿದ್ಧಪಡಿಸಿದ್ದು, ಇಶಾನ್‌ ಕಿಶನ್, ಶ್ರೇಯಸ್‌ ಅಯ್ಯರ್‌ರನ್ನು ಹೊರಗಿಟ್ಟಿದೆ ಎಂದು ಹೇಳಲಾಗುತ್ತಿದೆ. ಪಟ್ಟಿ ಶೀಘ್ರದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಇಶಾನ್‌, ಶ್ರೇಯಸ್‌ ಇಬ್ಬರೂ ಸದ್ಯ ರಾಷ್ಟ್ರೀಯ ತಂಡದಿಂದ ಹೊರಗಿದ್ದಾರೆ. ಆದರೆ ರಣಜಿ ಆಡುವ ಬದಲು ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Ishan Kishan Shreyas Iyer Likely To Be Axed From BCCI Central Contracts kvn
Author
First Published Feb 24, 2024, 2:00 PM IST

ನವದೆಹಲಿ(ಫೆ.24): ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಿದ್ದರೆ ರಣಜಿ ಆಡಿ ಎಂಬ ಸೂಚನೆಯನ್ನು ಕಡೆಗಣಿಸುತ್ತಿರುವ ತಾರಾ ಕ್ರಿಕೆಟಿಗರಾದ ಶ್ರೇಯಸ್‌ ಅಯ್ಯರ್‌ ಹಾಗೂ ಇಶಾನ್‌ ಕಿಶನ್‌ರನ್ನು ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಹೊರಗಿಡಲು ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಬಿಸಿಸಿಐ ಈಗಾಗಲೇ 2023-24ರ ಗುತ್ತಿಗೆ ಪಟ್ಟಿ ಸಿದ್ಧಪಡಿಸಿದ್ದು, ಇಶಾನ್‌ ಕಿಶನ್, ಶ್ರೇಯಸ್‌ ಅಯ್ಯರ್‌ರನ್ನು ಹೊರಗಿಟ್ಟಿದೆ ಎಂದು ಹೇಳಲಾಗುತ್ತಿದೆ. ಪಟ್ಟಿ ಶೀಘ್ರದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಇಶಾನ್‌, ಶ್ರೇಯಸ್‌ ಇಬ್ಬರೂ ಸದ್ಯ ರಾಷ್ಟ್ರೀಯ ತಂಡದಿಂದ ಹೊರಗಿದ್ದಾರೆ. ಆದರೆ ರಣಜಿ ಆಡುವ ಬದಲು ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶ್ರೇಯಸ್‌ ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಬಳಿಕ ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಬಳಿಕ ಬೆಂಗಳೂರಿನಲ್ಲಿರುವ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದ ಅವರು, ಶುಕ್ರವಾರದಿಂದ ಆರಂಭಗೊಳ್ಳಲಿರುವ ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯದಿಂದ ಬೆನ್ನು ನೋವಿನ ನೆಪ ಹೇಳಿ ಹಿಂದೆ ಸರಿದಿದ್ದಾರೆ. 

ತಂದೆ ವಿರೋಧದ ನಡುವೆ ಕ್ರಿಕೆಟಿಗನಾದ ಆಕಾಶ್ ದೀಪ್ ಈಗ ಟೀಂ ಇಂಡಿಯಾ ಹೀರೋ

ಸ್ಪಿನ್‌ ಮಾಂತ್ರಿಕ ಅಶ್ವಿನ್‌ ಮತ್ತೊಂದು ಮೈಲಿಗಲ್ಲು

ರಾಂಚಿ: ಭಾರತದ ಮಾಂತ್ರಿಕ ಸ್ಪಿನ್ನರ್‌ ಆರ್‌.ಆಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬೇರ್‌ಸ್ಟೋವ್‌ರನ್ನು ಔಟ್‌ ಮಾಡಿದ ಅಶ್ವಿನ್‌, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ವಿಕೆಟ್‌ ಗಳಿಕೆಯನ್ನು 100ಕ್ಕೆ ಏರಿಸಿದರು.

ಈ ಮೂಲಕ ಅವರು ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ರನ್‌, 100ಕ್ಕೂ ಹೆಚ್ಚು ವಿಕೆಟ್‌ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ ತಂಡವೊಂದರ ವಿರುದ್ಧ ಈ ಮೈಲಿಗಲ್ಲು ಸಾಧಿಸಿದ ವಿಶ್ವದ 7ನೇ ಆಟಗಾರ. ಜೊತೆಗೆ 2 ತಂಡಗಳ ವಿರುದ್ಧ ಟೆಸ್ಟ್‌ನಲ್ಲಿ 100+ ವಿಕೆಟ್‌ ಕಿತ್ತ ಭಾರತದ ಮೊದಲ ಬೌಲರ್ ಎಂಬ ಖ್ಯಾತಿಗೂ ಒಳಗಾಗಿದ್ದಾರೆ. ಅಶ್ವಿನ್‌ ಆಸ್ಟ್ರೇಲಿಯಾ ವಿರುದ್ಧ ಕೂಡಾ ಈ ಸಾಧನೆ ಮಾಡಿದ್ದಾರೆ. ಇನ್ನು, ಅನಿಲ್‌ ಕುಂಬ್ಳೆ ಆಸ್ಟ್ರೇಲಿಯಾ ವಿರುದ್ಧ 100+ ವಿಕೆಟ್‌ ಪಡೆದಿದ್ದಾರೆ.

Ranchi Test: ಜಡ್ಡುಗೆ 4 ವಿಕೆಟ್‌, ಇಂಗ್ಲೆಂಡ್ ಆಲೌಟ್ @353

ಟೆಸ್ಟ್‌ನಲ್ಲಿ ತಂಡವೊಂದರ ವಿರುದ್ಧ 1000+ ರನ್‌, 100+ ವಿಕೆಟ್‌ ಸಾಧಕರು.

ಆಟಗಾರ ರನ್‌ ವಿಕೆಟ್‌ ಎದುರಾಳಿ

ಜಾರ್ಜ್‌ ಗಿಫೆನ್‌ 1,238 103 ಇಂಗ್ಲೆಂಡ್‌

ಮೋಂಟಿ ನೋಬ್ಲೆ 1,905 115 ಇಂಗ್ಲೆಂಡ್‌

ವಿಲ್ಫ್ರೆಡ್‌ ರೋಡ್ಸ್‌ 1,706 109 ಆಸ್ಟ್ರೇಲಿಯಾ

ಗ್ಯಾರಿ ಸೋಬರ್ಸ್‌ 3,214 102 ಇಂಗ್ಲೆಂಡ್‌

ಇಯಾನ್‌ ಬೋಥಂ 1,673 148 ಆಸ್ಟ್ರೇಲಿಯಾ

ಸ್ಟುವರ್ಟ್‌ ಬ್ರಾಡ್‌ 1,019 153 ಆಸ್ಟ್ರೇಲಿಯಾ

ಆರ್‌.ಅಶ್ವಿನ್‌ 1,085 100 ಇಂಗ್ಲೆಂಡ್‌

ಕಿವೀಸ್‌ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ

ಆಕ್ಲಂಡ್‌: ನ್ಯೂಜಿಲೆಂಡ್‌ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಆಸ್ಟ್ರೇಲಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಕೈವಶ ಪಡಿಸಿಕೊಂಡಿದೆ. ಶುಕ್ರವಾರ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 72 ರನ್‌ ಜಯಗಳಿಸಿತು. ಮೊದಲು ಬ್ಯಾಟ್‌ ಮಾಡಿದ ಆಸೀಸ್‌, ಟ್ರ್ಯಾವಿಸ್‌ ಹೆಡ್‌(22 ಎಸೆತಗಳಲ್ಲಿ 45) ಆರ್ಭಟದ ಹೊರತಾಗಿಯೂ ಕೊನೆಯಲ್ಲಿ ಮುಗ್ಗರಿಸಿ 19.5 ಓವರ್‌ಗಳಲ್ಲಿ 174ಕ್ಕೆ ಆಲೌಟಾಯಿತು. ದೊಡ್ಡ ಗುರಿ ಬೆನ್ನತ್ತಿದ ಕಿವೀಸ್‌ 17 ಓವರ್‌ಗಳಲ್ಲಿ 102 ರನ್‌ಗೆ ಸರ್ವಪತನ ಕಂಡಿತು.
 

Follow Us:
Download App:
  • android
  • ios