Asianet Suvarna News Asianet Suvarna News

WPL 2023: ಎಲಿಮಿನೇಟರ್‌ನಲ್ಲಿಂದು ಮುಂಬೈ vs ಯುಪಿ ವಾರಿಯರ್ಸ್‌ ಫೈಟ್

ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಂದು ಎಲಿಮಿನೇಟರ್ ಪಂದ್ಯ
ನಾಕೌಟ್ ಪಂದ್ಯದಲ್ಲಿಂದು ಮುಂಬೈ ಇಂಡಿಯನ್ಸ್-ಯುಪಿ ವಾರಿಯರ್ಸ್‌ ಫೈಟ್
ಇಂದು ಗೆದ್ದ ತಂಡವು ಫೈನಲ್‌ ಪ್ರವೇಶ, ಡೆಲ್ಲಿ ಜತೆಗೆ ಫೈನಲ್ ಫೈಟ್

WPL 2023 Mumbai Indians up against entertainers UP Warriorz in WPL Eliminator kvn
Author
First Published Mar 24, 2023, 9:44 AM IST

ಮುಂಬೈ(ಮಾ.24): ಚೊಚ್ಚಲ ಆವೃ​ತ್ತಿ​ಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಡ​ಬ್ಲ್ಯು​ಪಿ​ಎ​ಲ್‌​)ನ ನಾಕೌಟ್‌ ಹಂತಕ್ಕೆ ವೇದಿಕೆ ಸಜ್ಜು​ಗೊಂಡಿದ್ದು, ಶುಕ್ರ​ವಾರ ಎಲಿ​ಮಿ​ನೇ​ಟ​ರ್‌ ಪಂದ್ಯ​ದಲ್ಲಿ ಮುಂಬೈ ಇಂಡಿ​ಯನ್ಸ್‌ ಹಾಗೂ ಯುಪಿ ವಾರಿ​ಯ​ರ್ಸ್‌ ತಂಡ​ಗಳು ಸೆಣ​ಸಾ​ಡಲಿವೆ. ಲೀಗ್‌ ಹಂತ​ದಲ್ಲಿ 6 ಪಂದ್ಯ ಗೆದ್ದು ಅಗ್ರ​ಸ್ಥಾ​ನಿ​ಯಾದ ಡೆಲ್ಲಿ ಕ್ಯಾಪಿ​ಟಲ್ಸ್‌ ನೇರ​ವಾಗಿ ಫೈನಲ್‌ ಪ್ರವೇ​ಶಿ​ಸಿದ್ದು, ಪ್ರಶಸ್ತಿ ಸುತ್ತಿ​ಗೇ​ರುವ ಮತ್ತೊಂದು ತಂಡ ಯಾವು​ದೆಂದು ಶುಕ್ರ​ವಾರ ನಿರ್ಧಾ​ರ​ವಾ​ಗ​ಲಿದೆ. 

ಟೂರ್ನಿಯ ಮೊದಲ ಐದೂ ಪಂದ್ಯ​ಗ​ಳಲ್ಲಿ ಗೆದ್ದಿದ್ದ ಮುಂಬೈ ಬಳಿಕ 2 ಪಂದ್ಯ ಸೋತಿತ್ತು. ಕೊನೆ ಪಂದ್ಯ​ದಲ್ಲಿ ಗೆದ್ದ​ರೂ ನೆಟ್‌ ರನ್‌​ರೇಟ್‌ ಆಧಾ​ರ​ದಲ್ಲಿ 2ನೇ ಸ್ಥಾನ ಪಡೆದಿದ್ದು, ನೇರ​ವಾ​ಗಿ ಫೈನಲ್‌ ಪ್ರವೇಶಿಸುವ ಅವ​ಕಾಶ ಕಳೆ​ದು​ಕೊಂಡಿತ್ತು. ಅತ್ತ ಯುಪಿ ವಾರಿಯರ್ಸ್‌ ಆಡಿದ 8 ಪಂದ್ಯ​ಗ​ಳಲ್ಲಿ 4ರಲ್ಲಿ ಗೆದ್ದಿದ್ದು, ಅಂಕ​ಪ​ಟ್ಟಿ​ಯಲ್ಲಿ 3ನೇ ಸ್ಥಾನಿ​ಯಾಗಿ ನಾಕೌ​ಟ್‌​ಗೇ​ರಿದೆ. ಉಭಯ ತಂಡ​ಗಳು ಲೀಗ್‌ ಹಂತ​ದಲ್ಲಿ 2 ಬಾರಿ ಮುಖಾ​ಮುಖಿ​ಯಾ​ಗಿದ್ದು, ಮೊದಲ ಪಂದ್ಯ​ದಲ್ಲಿ ಮುಂಬೈ 8 ವಿಕೆ​ಟ್‌​ಗ​ಳಿಂದ ಗೆದ್ದಿ​ದ್ದರೆ, 2ನೇ ಪಂದ್ಯ​ವನ್ನು ಯುಪಿ 5 ವಿಕೆ​ಟ್‌​ಗ​ಳಿಂದ ಜಯಿ​ಸಿತ್ತು. ಟೂರ್ನಿಯ ಫೈನಲ್‌ ಪಂದ್ಯ ಮಾರ್ಚ್‌ 26ಕ್ಕೆ ನಡೆ​ಯ​ಲಿ​ದೆ.

New IPL Rules: ಐಪಿಎಲ್‌ ಅಭಿಮಾನಿಗಳು ತಿಳಿದಿರಲೇಬೇಕಾದ ಐಪಿಎಲ್‌ನಲ್ಲಿ ಬದಲಾದ ಮಹತ್ವದ ರೂಲ್ಸ್‌ಗಳಿವು..!

ಮುಂಬೈ ಇಂಡಿಯನ್ಸ್‌ ತಂಡವು ಬ್ಯಾಟಿಂಗ್‌ನಲ್ಲಿ ಹೆಚ್ಚಾಗಿ ಹೀಲಿ ಮ್ಯಾಥ್ಯೂಸ್‌, ನಥಾಲಿ ಶೀವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ ಹಾಗೂ ಯಾಶ್ತಿಕಾ ಭಾಟಿಯಾ ಅವರನ್ನು ನೆಚ್ಚಿಕೊಂಡಿದೆ. ಇನ್ನು ಆಲ್ರೌಂಡರ್‌ಗಳಾದ ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್‌ ಹಾಗೂ ಅಮೇಲಿಯಾ ಕೌರ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. 

ಇನ್ನೊಂದೆಡೆ ಯುಪಿ ವಾರಿಯರ್ಸ್‌ ತಂಡವು ಹೆಚ್ಚಾಗಿ ಬ್ಯಾಟಿಂಗ್‌ನಲ್ಲಿ ತಾಹಿಲಾ ಮೆಗ್ರಾಥ್ ಹಾಗೂ ಗ್ರೇಸ್ ಹ್ಯಾರಿಸ್ ಮೇಲೆ ಅವಲಂಭಿತವಾಗಿದೆ. ಸದ್ಯ ತಾಹಿಲಾ ಮೆಗ್ರಾಥ್ ಸದ್ಯ 8 ಪಂದ್ಯಗಳನ್ನಾಡಿ 295 ರನ್ ಬಾರಿಸಿದ್ದು, ಇನ್ನು ಕೇವಲ 15 ರನ್ ಬಾರಿಸಿದರೆ, ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳಲಿದ್ದಾರೆ. ಇನ್ನು ಗ್ರೇಸ್ ಹ್ಯಾರಿಸ್ ಕಳೆದ 5 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಕನಿಷ್ಠ 39 ರನ್ ಬಾರಿಸುವುದರೊಂದಿಗೆ ತಂಡಕ್ಕೆ ಸ್ಥಿರ ಪ್ರದರ್ಶನದ ಮೂಲಕ ನೆರವಾಗಿದ್ದಾರೆ.

ಇನ್ನು ಬೌಲಿಂಗ್‌ ವಿಭಾಗವನ್ನು ಗಮನಿಸಿದರೆ, ಯುಪಿ ವಾರಿಯರ್ಸ್‌ಗೆ ಹೋಲಿಸಿದರೆ, ಮುಂಬೈ ಇಂಡಿಯನ್ಸ್ ಸಾಕಷ್ಟು ಸಮತೋಲಿತ ಪಡೆಯನ್ನು ಹೊಂದಿದಂತೆ ಕಂಡು ಬಂದಿದೆ. ತಂಡದ ಸ್ಪಿನ್ನರ್‌ಗಳಾದ ಅಮೆಲಿಯಾ ಕೆರ್ರ್(13 ವಿಕೆಟ್, ಎರಡನೇ ಸ್ಥಾನ), ಸಾಯಿಕಾ ಇಶಾಕ್‌(13 ವಿಕೆಟ್, ಮೂರನೇ ಸ್ಥಾನ), ಹೀಲಿ ಮ್ಯಾಥ್ಯೂಸ್(12 ವಿಕೆಟ್, ನಾಲ್ಕನೇ ಸ್ಥಾನ) ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್‌ಗಳ ಪಟ್ಟಿಯಲ್ಲಿ ಮೂವರು ಬೌಲರ್‌ಗಳು ಮುಂಬೈ ತಂಡದವರು ಎನ್ನುವುದು ವಿಶೇಷ. ಇನ್ನೊಂದೆಡೆ ಯುಪಿ ವಾರಿಯರ್ಸ್‌ ಪರ ಸೋಫಿ ಎಕ್ಲೆಸ್ಟೋನ್‌ 14 ವಿಕೆಟ್ ಕಬಳಿಸಿ, ಪರ್ಪಲ್‌ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಸೋಫಿ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ಎದುರು ಜಾದೂ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ:

ಮುಂಬೈ ಇಂಡಿಯನ್ಸ್‌;
ಹೀಲಿ ಮ್ಯಾಥ್ಯೂಸ್‌, ಯಾಶ್ತಿಕಾ ಭಾಟಿಯಾ(ವಿಕೆಟ್ ಕೀಪರ್), ನಥಾಲಿ ಶೀವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಅಮೆಲಿ ಕೆರ್ರ್, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್, ಹುಮೈರಾ ಖಾಜಿ, ಜಿಂತಿಮನಿ ಕಲಿತಾ, ಸಾಯಿಕಾ ಇಶಾಕ್.

ಯುಪಿ ವಾರಿಯರ್ಸ್‌:
ದೇವಿಕಾ ವೈದ್ಯಾ, ಎಲೈಸಾ ಹೀಲಿ(ಕ್ಯಾಪ್ಟನ್&ವಿಕೆಟ್ ಕೀಪರ್), ಕಿರನ್‌ ನವಗೆರೆ, ತಾಹಿಲಾ ಮೆಗ್ರಾಥ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಸಿಮ್ರಾನ್ ಶೇಖ್, ಪರ್ಸಾವಿ ಚೋಪ್ರಾ, ಅಂಜಲಿ ಶರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

ಪಂದ್ಯ: ಸಂಜೆ 7.30ಕ್ಕೆ
ನೇರ​ಪ್ರ​ಸಾ​ರ: ಸ್ಪೋರ್ಟ್ಸ್ 18, ಜಿಯೋ ಸಿನೆ​ಮಾ
 

Follow Us:
Download App:
  • android
  • ios