MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Sports
  • Cricket
  • New IPL Rules: ಐಪಿಎಲ್‌ ಅಭಿಮಾನಿಗಳು ತಿಳಿದಿರಲೇಬೇಕಾದ ಐಪಿಎಲ್‌ನಲ್ಲಿ ಬದಲಾದ ಮಹತ್ವದ ರೂಲ್ಸ್‌ಗಳಿವು..!

New IPL Rules: ಐಪಿಎಲ್‌ ಅಭಿಮಾನಿಗಳು ತಿಳಿದಿರಲೇಬೇಕಾದ ಐಪಿಎಲ್‌ನಲ್ಲಿ ಬದಲಾದ ಮಹತ್ವದ ರೂಲ್ಸ್‌ಗಳಿವು..!

ಮುಂಬೈ(ಮಾ.23): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಇದೇ ಮಾರ್ಚ್‌ 31ರಿಂದ ಐಪಿಎಲ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಲವೊಂದು ಹೊಸ ನಿಯಮಗಳನ್ನು ಬಿಸಿಸಿಐ ಪರಿಚಯಿಸಿದೆ. ಅಷ್ಟಕ್ಕೂ ಯಾವ ರೂಲ್ಸ್‌ಗಳು ಬದಲಾಗಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

2 Min read
Author : Naveen Kodase
Published : Mar 23 2023, 05:56 PM IST
Share this Photo Gallery
  • FB
  • TW
  • Linkdin
  • Whatsapp
18
* ಟಾಸ್ ಬಳಿಕ ಆಡುವ ಹನ್ನೊಂದರ ಬಳಗ ಬದಲಿಸಲು ಅವಕಾಶ:

* ಟಾಸ್ ಬಳಿಕ ಆಡುವ ಹನ್ನೊಂದರ ಬಳಗ ಬದಲಿಸಲು ಅವಕಾಶ:

ಹೌದು, ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಟಾಸ್‌ಗೆ ಬರುವ ನಾಯಕರು, ತಮ್ಮ ಆಡುವ ಹನ್ನೊಂದರ ಬಳಗದ ಪಟ್ಟಿಯೊಂದಿಗೆ ಮೈದಾನಕ್ಕೆ ಬರುತ್ತಿದ್ದರು. ಟಾಸ್ ಆಗುತ್ತಿದ್ದಂತೆಯೇ ತಮ್ಮ ಆಡುವ ಹನ್ನೊಂದರ ಬಳಗದ ಮಾಹಿತಿಯನ್ನು ಎದುರಾಳಿ ತಂಡದ ನಾಯಕರಿಗೆ ಮಾಹಿತಿ ಹಸ್ತಾಂತರಿಸುತ್ತಿದ್ದರು.
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಆದರೆ ಇದೀಗ ಹೊಸ ನಿಯಮದ ಪ್ರಕಾರ, ಟಾಸ್ ಆದ ಬಳಿಕವೂ ನಾಯಕನಿಗೆ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತರಬೇಕು ಎಂದು ಅನಿಸಿದರೆ, ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 

38

ಅದರೆ ತಂಡದ ನಾಯಕ ಟಾಸ್ ಬಳಿಕ, ತನ್ನ ತಂಡದ ಆಡುವ ಹನ್ನೊಂದು ಆಟಗಾರರು ಹಾಗೂ ಗರಿಷ್ಠ 5 ಬದಲಿ ಫೀಲ್ಡರ್‌ಗಳ ಹೆಸರನ್ನು ಲಿಖಿತ ರೂಪದಲ್ಲಿ ಬರೆದು ಪಂದ್ಯ ಆರಂಭಕ್ಕೂ ಮುನ್ನ ಮ್ಯಾಚ್‌ ರೆಫ್ರಿಗೆ ನೀಡಲು ಅವಕಾಶ ಒದಗಿಸಲಾಗಿದೆ.

48

ಒಮ್ಮೆ ತಮ್ಮ ಆಡುವ ಹನ್ನೊಂದರ ಬಳಗವನ್ನು ಅಧಿಕೃತಗೊಳಿಸಿದ ಬಳಿಕ ಪಂದ್ಯ ಆರಂಭಕ್ಕೂ ಮುನ್ನ ಎದುರಾಳಿ ತಂಡದ ನಾಯಕನ ಒಪ್ಪಿಗೆ ಇಲ್ಲದೇ ತನ್ನ ಆಡುವ ಹನ್ನೊಂದು ಆಟಗಾರರಲ್ಲಿ ಬದಲಾವಣೆ ತರಲು ಅವಕಾಶವಿಲ್ಲ
 

58

ಇನ್ನು ಬೌಲಿಂಗ್ ಮಾಡುವ ತಂಡವು ನಿಗದಿತ ಸಮಯದಲ್ಲಿ ಪ್ರತಿ ಓವರ್‌ ಪೂರ್ಣಗೊಳಿಸದಿದ್ದಲ್ಲಿ, ಓವರ್ ರೇಟ್‌ ಪೆನಾಲ್ಟಿ ಹಾಕುವ ನಿಯಮ ಜಾರಿಗೆ ತಂದಿದೆ. ಹೀಗಾದಲ್ಲಿ ಮರು ಓವರ್‌ ಮಾಡುವ ಸಂದರ್ಭದಲ್ಲಿ ಕೇವಲ 4 ಫೀಲ್ಡರ್‌ಗಳು ಮಾತ್ರ 30 ಯಾರ್ಡ್ಸ್‌ ಹೊರಗಿರಲು ಅವಕಾಶವಿರುತ್ತದೆ.

68

ಇನ್ನು ತಂಡಗಳು ಅಂಪೈರ್ ನೀಡುವ ವೈಡ್‌ ಹಾಗೂ ನೋಬಾಲ್‌ ತೀರ್ಪನ್ನು ಪ್ರಶ್ನಿಸಿ ಡಿಆರ್‌ಎಸ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಈಗಾಗಲೇ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಈ ರೂಲ್ಸ್ ಬಳಸಲಾಗುತ್ತಿದೆ.

78

ಒಂದು ವೇಳೆ ಬ್ಯಾಟರ್‌ ಚೆಂಡನ್ನು ಎದುರಿಸುವ ಸಂದರ್ಭದಲ್ಲಿ ಆತನ ಏಕಾಗ್ರತೆ ಧಕ್ಕೆ ತರುವಂತೆ ವಿಕೆಟ್‌ ಕೀಪರ್ ಹಾಗೂ ಕ್ಷೇತ್ರರಕ್ಷಕರು ಅನಗತ್ಯವಾಗಿ ಓಡಾಡಿದರೆ, ಅದನ್ನು ಅನ್ಯಾಯದ ಚಲನೆ ಎಂದು ತೀರ್ಮಾನಿಸಿ, ಪೆನಾಲ್ಟಿ ರೂಪದಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ 5 ರನ್ ನೀಡಲು ತೀರ್ಮಾನಿಸಲಾಗಿದೆ.ಇದಷ್ಟೇ ಅಲ್ಲದೇ ಆ ಚೆಂಡನ್ನು ಡೆಡ್ ಬಾಲ್ ಎಂದು ಘೋಷಿಸಲಾಗುವುದು.

88

ಇನ್ನು ಬಿಸಿಸಿಐ ಈ ಬಾರಿ ಇಂಪ್ಯಾಕ್ಟ್‌ ಪ್ಲೇಯರ್ ರೂಲ್ಸ್‌ ಜಾರಿಗೆ ತಂದಿರುವುದರಿಂದ ತಂಡದಲ್ಲಿ 15 ಆಟಗಾರರ ಬದಲಿಗೆ 16 ಆಟಗಾರರಿರಲು (11+5) ಅವಕಾಶ ಒದಗಿಸಲಾಗಿದೆ. ಇದರರ್ಥ ಇಂಪ್ಯಾಕ್ಟ್‌ ಪ್ಲೇಯರ್ ಬಳಸಿಕೊಳ್ಳಲು ತಂಡಗಳಿಗೆ ಹೆಚ್ಚಿನ ಅವಕಾಶ ಸಿಕ್ಕಂತಾಗಲಿದೆ.
 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್

Latest Videos
Recommended Stories
Recommended image1
ಇಂದಿನಿಂದ ಭಾರತ-ಆಫ್ಘಾನಿಸ್ತಾನ ಟಿ20 ಕದನ; ಎಷ್ಟು ಗಂಟೆಗೆ ಆರಂಭ? ಎಲ್ಲಿ ನೇರ ಪ್ರಸಾರ?
Recommended image2
ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಮುರಿದ ಜೋ ರೂಟ್: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ!
Recommended image3
BCCI ಹೊಸ ರೂಲ್ಸ್; ರೋಹಿತ್, ಕೊಹ್ಲಿಗೆ ಬಿಗ್ ಶಾಕ್; ರೆಡಿಯಾದ ಮಹಾಸಂಚಿನ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved