ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ ವುಮೆನ್ಸ್ ಇದೀಗ ಎರಡನೇ ಪಂದ್ಯದಲ್ಲಿ  155 ರನ್‌ಗೆ ಆಲೌಟ್ ಆಗುವ ಮೂಲಕ ಆತಂಕ ಎದುರಿಸುತ್ತಿದೆ. 

ಮುಂಬೈ(ಮಾ.06): ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ತನ್ನ ಎರಡನೇ ಪಂದ್ಯದಲ್ಲಿ ತಿಣುಕಾಡಿದೆ. ಮುಂಬೈ ಇಂಡಿಯನ್ಸ್ ದಾಳಿಗೆ ಅಬ್ಬರಿಸಲು ವಿಫಲವಾದ ಆರ್‌ಸಿಬಿ 155 ರನ್ ಸಿಡಿಸಿ ಆಲೌಟ್ ಆಗಿದೆ. 18.4 ಓವರ್‌ಗಳಲ್ಲಿ ತನ್ನಲ್ಲೆ ವಿಕೆಟ್ ಕಳೆದುಕೊಂಡಿತು. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಬೌಲಿಂಗ್‌ನಲ್ಲಿ ದುಬಾರಿಯಾಗಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ 222 ರನ್ ಬಿಟ್ಟುಕೊಟ್ಟಿತು. ಹೀಗಾಗಿ ಈ ಪಂದ್ಯದಲ್ಲಿ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.

ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ಪಂದ್ಯದಲ್ಲಿ ಬಿಟ್ಟುಕೊಟ್ಟ ರನ್‌ಗೆ ಪ್ರತಿಯಾಗಿ ರನ್ ಸಿಡಿಸುವ ಲೆಕ್ಕಾಚಾರ ಹಾಕಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಪೇರಿಸಲು ತಯಾರಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ ದಾಳಿ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿತು. 39 ರನ್‌ಗಳಿಗೆ ಆರ್‌ಸಿಬಿ ಮೊದಲ ವಿಕೆಟ್ ಕಳೆದುಕೊಂಡಿತು. ಸೋಫಿ ಡಿವೈನ್ 16 ರನ್ ಸಿಡಿಸಿ ನಿರ್ಗಮಿಸಿದರು. ದಿಶಾ ಕಸತ್ ಡಕೌಟ್ ಆದರು. ಈ ಮೂಲಕ ಸತತ ಎರಡು ವಿಕೆಟ್ ಕಳೆದುಕೊಂಡು ಆರ್‌ಸಿಬಿ ವನಿತೆಯರು ಆತಂಕ ಎದುರಿಸಿದರು.

ಧಾರಾವಿ ಸ್ಲಂ ಬೀದಿಯಿಂದ WPLವರೆಗೆ, ಸಿಮ್ರನ್‌ ಜರ್ನಿಯೇ ಒಂದು ಸ್ಪೂರ್ತಿಯ ಕಥೆ..!

ನಾಯಕಿ ಸ್ಮೃತಿ ಮಂಧನಾ 23 ರನ್ ಸಿಡಿಸಿ ನಿರ್ಗಮಿಸಿದರು.ಇತ್ತ ಹೀದರ್ ನೈಟ್ ಶೂನ್ಯ ಸುತ್ತಿದರು. ಹೋರಾಟ ನೀಡುವ ಸೂಚನೆ ನೀಡಿದ ಎಲ್ಲಿಸ್ ಪೆರಿ 13 ರನ್ ಸಿಡಿಸಿ ನಿರ್ಗಮಿಸಿದರು. ರಿಚಾ ಘೋಷ್ ಹಾಗೂ ಕಾನಿಕಾ ಅಹುಜ ಜೊತೆಯಾಟದಿಂದ ಆರ್‌ಸಿಬಿ ಚೇತರಿಸಿಕೊಂಡಿತು. ಆಧರೆ ಕಾನಿಕಾ ಅಹುಜಾ 22 ರನ್ ಸಿಡಿಸಿ ಔಟಾದದರು. ರಿಚಾ ಘೋಷ್ 28 ರನ್ ಕಾಣಿಕೆ ನೀಡಿದರು.

ಅಂತಿಮ ಹಂತದಲ್ಲಿ ಶ್ರೇಯಾಂಕ ಪಾಟೀಲ್ ಹಾಗೂ ಮೆಗನ್ ಸ್ಕಟ್ ಜೊತೆಯಾಟ ನೆರವಾಯಿತು. ಶ್ರೇಯಾಂಕ ಪಾಟೀಲ್ 23 ರನ್ ಸಿಡಿಸಿದರೆ ಮೆಗನ್ 20 ರನ್ ಸಿಡಿಸಿದರು. ರೇಣುಕಾ ಠಾಕೂರ್ ಸಿಂಗ್ 2 ರನ್ ಸಿಡಿಸಿ ಔಟಾದರು. ಈ ಮೂಲಕ ಆರ್‌ಸಿಬಿ 18.4 ಓವರ್‌ಗಳಲ್ಲಿ 155 ರನ್ ಸಿಡಿಸಿದರು.

WPL 2023: ರನ್‌ ಹೊಳೆ ಹರಿಸಲು ಸಣ್ಣ ಬೌಂಡರಿ..! BCCI ಮಾಸ್ಟರ್ ಪ್ಲಾನ್‌

ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ದ ಮುಗ್ಗರಿಸಿದ್ದ ಆರ್‌ಸಿಬಿ
ಭರ್ಜರಿ ಶುಭಾ​ರಂಭದ ನಿರೀ​ಕ್ಷೆ​ಯ​ಲ್ಲಿದ್ದ ಹಲವು ತಾರೆ​ಯ​ರ​ನ್ನೊ​ಳ​ಗೊಂಡ ರಾಯಲ್‌ ಚಾಲೆಂಜ​ರ್‍ಸ್ ಬೆಂಗ​ಳೂ​ರು​(​ಆ​ರ್‌​ಸಿ​ಬಿ) ಮಹಿಳಾ ತಂಡ ಮೊದಲ ಪಂದ್ಯದಲ್ಲಿ ಮುಗ್ಗರಿಸಿತ್ತು. ಬೌಲಿಂಗ್‌ನಲ್ಲಿ 222 ರನ್ ಬಿಟ್ಟುಕೊಟ್ಟ ಆರ್‌ಸಿಬಿ ವುವೆನ್ಸ್, ಬ್ಯಾಟಿಂಗ್‌ನಲ್ಲಿ 163 ರನ್ ಸಿಡಿಸಿ ಸೋಲೋಪ್ಪಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 2 ವಿಕೆ​ಟ್‌ಗೆ ಬರೋ​ಬ್ಬರಿ 223 ರನ್‌ ಕಲೆ​ಹಾ​ಕಿತು. ಬೃಹತ್‌ ಮೊತ್ತ ನೋಡಿಯೇ ಕಂಗಾ​ಲಾದ ಆರ್‌​ಸಿಬಿ 8 ವಿಕೆ​ಟ್‌ಗೆ 163 ರನ್‌ ಗಳಿಸಿ ಸೋಲೊ​ಪ್ಪಿ​ಕೊಂಡಿತು. ನಾಯಕಿ ಸ್ಮೃತಿ ಮಂಧನಾ ಹಾಗೂ ಸೋಫಿ ಡಿವೈನ್‌(14) ಮೊದಲ 4.2 ಓವ​ರಲ್ಲಿ 41 ರನ್‌ ಸಿಡಿ​ಸಿ​ದರೂ ಬಳಿಕ ಡೆಲ್ಲಿ ಮೇಲುಗೈ ಸಾಧಿ​ಸಿತು. ಮಂಧನಾ 23 ಎಸೆ​ತ​ಗ​ಳಲ್ಲಿ 35, ಎಲೈಸಿ ಪೆರ್ರಿ 19 ಎಸೆ​ತ​ಗ​ಳಲ್ಲಿ 31 ರನ್‌ ಸಿಡಿಸಿ ಔಟಾದ ಬಳಿಕ ತಂಡ ಸಂಕ​ಷ್ಟ​ಕ್ಕೊ​ಳ​ಗಾ​ಯಿ​ತು. 89ಕ್ಕೆ 2 ವಿಕೆಟ್‌ ಕಳೆ​ದು​ಕೊಂಡಿದ್ದ ತಂಡ ಬಳಿಕ 8 ರನ್‌ಗೆ 5 ವಿಕೆಟ್‌ ಕಳೆ​ದು​ಕೊಂಡಿತು. ಕೊನೆ​ಯಲ್ಲಿ ಹೀಥರ್‌ ನೈಟ್‌​(34), ಮೇಗನ್‌ ಶುಟ್‌​(30) ಹೋರಾ​ಡಿ ತಂಡ ಕಳಪೆ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು.