WPL 2023: ರನ್‌ ಹೊಳೆ ಹರಿಸಲು ಸಣ್ಣ ಬೌಂಡರಿ..! BCCI ಮಾಸ್ಟರ್ ಪ್ಲಾನ್‌

ವುಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಸರಾಗವಾಗಿ ಹರಿದುಬರುತ್ತಿವೆ ಬೌಂಡರಿ ಸಿಕ್ಸರ್‌ಗಳು
ರನ್ ಮಳೆ ಸುರಿಸಲು ಬಿಸಿಸಿಐನಿಂದ ಮಾಸ್ಟರ್ ಪ್ಲಾನ್‌
ಸಾಮಾನ್ಯ ಮೈದಾನಕ್ಕಿಂತ 5 ಮೀಟರ್ ಚಿಕ್ಕ ಬೌಂಡರಿ ನಿರ್ಮಾಣ

WPL 2023 Boundary length 5 meters less than the distance at Womens T20 World Cup kvn

ಮುಂಬೈ(ಮಾ.06): ಚೊಚ್ಚಲ ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಡ​ಬ್ಲ್ಯು​ಪಿ​ಎ​ಲ್‌​)​ನಲ್ಲಿ ರನ್‌ ಹೊಳೆ ಹರಿಯಲು ಮಾಸ್ಟರ್‌ ಪ್ಲ್ಯಾನ್‌ ಮಾಡಿ​ರುವ ಬಿಸಿಸಿಐ, ಕ್ರೀಡಾಂಗ​ಣದ ಬೌಂಡ​ರಿ​ಗಳ ದೂರ​ವನ್ನು ಕಡಿ​ತಗೊ​ಳಿ​ಸಿದೆ. ಟೂರ್ನಿಯ ಪಂದ್ಯ​ಗಳಿಗೆ ಆತಿಥ್ಯ ವಹಿಸುತ್ತಿರುವ ಡಿ.ವೈ.​ಪಾ​ಟೀಲ್‌ ಹಾಗೂ ಬ್ರೆಬೋರ್ನ್‌ ಕ್ರೀಡಾಂಗ​ಣ​ದಲ್ಲಿ ಪಿಚ್‌ನಿಂದ ಬೌಂಡರಿ ದೂರ​ವನ್ನು 50ರಿಂದ 55 ಮೀಟ​ರ್‌ಗೆ ಸೀಮಿ​ತ​ಗೊ​ಳಿ​ಸಿದೆ. 

ಸಾಮಾನ್ಯವಾಗಿ ಅಂತಾರಾ​ಷ್ಟ್ರೀ​ಯ ಪಂದ್ಯದಲ್ಲಿ ಕನಿಷ್ಠ 55 ಮೀಟರ್‌ನಿಂದ 60 ಮೀಟರ್ ಬೌಂಡರಿ ಇರಲಿದೆ. ಇತ್ತೀ​ಚೆಗೆ ನಡೆದ ಮಹಿಳಾ ಟಿ20 ವಿಶ್ವ​ಕ​ಪ್‌​ನ​ಲ್ಲೂ ಬೌಂಡರಿ 60 ಮೀಟರ್ ಇತ್ತು. ಕಳೆದ ವರ್ಷ ಪುರು​ಷರ ಐಪಿ​ಎಲ್‌ ನಡೆ​ದಾಗ ಈ ಎರಡೂ ಕ್ರೀಡಾಂಗ​ಣ​ಗ​ಳಲ್ಲಿ ಬೌಂಡರಿ ದೂರ 70 ಮೀಟರ್‌ ಇರಿಸಲಾಗಿತ್ತು.

ಬಿಸಿಸಿಐನ ಯೋಜನೆ ಕೈಹಿಡಿದಿದ್ದು, ಆರಂಭಿಕ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್‌ 207 ರನ್‌ ಕಲೆಹಾಕಿತ್ತು. ಇನ್ನು ಭಾನುವಾರ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 223 ರನ್‌ ಚಚ್ಚಿತ್ತು. ಆರ್‌ಸಿಬಿ ದಿಢೀರ್‌ ಕುಸಿತ ಕಂಡರೂ, ತಂಡದ ಇನ್ನಿಂಗ್‌್ಸನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳಿಗೆ ಕೊರತೆ ಇರಲಿಲ್ಲ. ಮೊದಲೆರಡು ಪಂದ್ಯಗಳಲ್ಲೇ ಬರೋಬ್ಬರಿ 87 ಬೌಂಡರಿ, 18 ಸಿಕ್ಸರ್‌ಗಳು ದಾಖಲಾದವು.

ವೈಡ್‌, ನೋಬಾಲ್‌ಗೂ ಡಿಆರ್‌ಎಸ್‌: ಹೊಸತು

ಮಹಿಳಾ ಐಪಿ​ಎ​ಲ್‌​ ಮೂಲಕ ಬಿಸಿ​ಸಿಐ ಹೊಸ ನಿಯ​ಮ​ಗ​ಳನ್ನು ಅಳ​ವ​ಡಿ​ಸಿದ್ದು, ವೈಡ್‌, ನೋಬಾ​ಲ್‌​ಗೂ ಡಿಆ​ರ್‌​ಎ​ಸ್‌​(​ಅಂಪೈರ್‌ ತೀರ್ಪು ಮರು​ಪ​ರಿ​ಶೀ​ಲನಾ ನಿಮ​ಯ) ಪಡೆ​ದು​ಕೊ​ಳ್ಳಲು ಅವ​ಕಾಶ ನೀಡಿದೆ. ಹೊಸ ನಿಯ​ಮದ ಪ್ರಕಾರ ಅಂಪೈ​ರ್‌ನ ವೈಡ್‌, ನೋಬಾಲ್‌ ಸೇರಿ​ದಂತೆ ಯಾವುದೇ ನಿರ್ಧಾ​ರ​ದಲ್ಲಿ ಅತೃಪ್ತಿ ಇದ್ದರೆ ಆಟ​ಗಾ​ರ್ತಿಯರು ಡಿಆ​ರ್‌​ಎಸ್‌ ಪಡೆ​ಯ​ಬ​ಹುದು. ಉದ್ಘಾ​ಟನಾ ಪಂದ್ಯ​ದಲ್ಲಿ ಗುಜ​ರಾತ್‌ ವಿರುದ್ಧ 13ನೇ ಓವರ್‌ ವೇಳೆ ಮುಂಬೈ ನಾಯಕಿ ಹರ್ಮ​ನ್‌​ಪ್ರೀತ್‌ ವೈಡ್‌ ಕರೆ ವಿರುದ್ಧ ಮೊದಲ ಬಾರಿ ಡಿಆ​ರ್‌ಎಸ್‌ ಪಡೆ​ದ​ರು. ಆರ್‌ಸಿಬಿ ವಿರುದ್ಧ ಡೆಲ್ಲಿಯ ಜೆಮಿಮಾ ನೋಬಾಲ್‌ ತೀರ್ಪಿನ ಬಗ್ಗೆ ಡಿಆರ್‌ಎಸ್‌ ಮೊರೆ ಹೋದರು.

ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 20 ಲೀಗ್ ಪಂದ್ಯಗಳು ಹಾಗೂ ಎರಡು ಪ್ಲೇ ಆಫ್ ಪಂದ್ಯಗಳು ಸೇರಿದಂತೆ ಒಟ್ಟು 22 ಪಂದ್ಯಗಳು ಜರುಗಲಿವೆ. 23 ದಿನಗಳ ಕಾಲ ನಡೆಯಲಿರುವ ಈ ಐತಿಹಾಸಿಕ ಮಹಿಳಾ ಟಿ20 ಲೀಗ್ ಟೂರ್ನಿಯಲ್ಲಿ ಒಟ್ಟು 87 ಆಟಗಾರ್ತಿಯರು ಪಾಲ್ಗೊಂಡಿದ್ದು, ಭಾರತ ಸೇರಿದಂತೆ ಏಳು ದೇಶದ ಆಟಗಾರ್ತಿಯರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.

WPL: ಆರ್‌ಸಿಬಿ ವಿರುದ್ಧ ಐವರು ವಿದೇಶಿ ಆಟಗಾರ್ತಿಯರನ್ನು ಆಡಿಸಿ ನಿಯಮ ಮೀರಿತಾ ಡೆಲ್ಲಿ!

ಡಬಲ್‌ ರೌಂಡ್‌ ರಾಬಿನ್‌ ಮಾದ​ರಿ​ಯಲ್ಲಿ ಲೀಗ್‌ ಹಂತ ನಡೆ​ಯ​ಲಿದ್ದು, ಪ್ರತಿ ತಂಡ ಇತರ 4 ತಂಡ​ಗಳ ವಿರುದ್ಧ ತಲಾ 2 ಬಾರಿ ಸೆಣ​ಸಲಿದೆ. ಲೀಗ್‌ ಹಂತ​ದಲ್ಲಿ ಅಗ್ರ​ಸ್ಥಾನ ಪಡೆದ ತಂಡ ನೇರ​ವಾಗಿ ಫೈನಲ್‌ ಪ್ರವೇ​ಶಿ​ಸ​ಲಿದ್ದು, 2 ಮತ್ತು 3ನೇ ಸ್ಥಾನ ಪಡೆವ ತಂಡ​ಗಳು ಎಲಿ​ಮಿ​ನೇ​ಟ​ರ್‌​ನಲ್ಲಿ ಸೆಣ​ಸ​ಲಿ​ವೆ. ನಾಕೌಟ್ ಪಂದ್ಯಕ್ಕೂ ಮುನ್ನ ಪ್ರತಿ ತಂಡವು 8 ಪಂದ್ಯಗಳನ್ನಾಡಲಿದೆ.

ಮೈದಾನದಲ್ಲಿ WPL ಟೂರ್ನಿ ಕಣ್ತುಂಬಿಕೊಳ್ಳಲು ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಆರಂಭಗೊಂಡಿದೆ. ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಅಭಿಮಾನಿಗಳನ್ನು ಸೆಳೆಯಲು ಬಿಸಿಸಿಐ ಅತೀ ಕಡಿಮೆ ಮೊತ್ತದ ಟಿಕೆಟ್ ಘೋಷಿಸಿದೆ. ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಎಲ್ಲಾ 20 ಪಂದ್ಯದ ಟಿಕೆಟ್ 100 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಿಕೆಟ್ ಆನ್‌ಲೈನ್ ಬುಕಿಂಗ್ ಆರಂಭಗೊಂಡಿದೆ.
 

Latest Videos
Follow Us:
Download App:
  • android
  • ios