ಟೆಸ್ಟ್ ಚಾಂಪಿಯನ್‌ಶಿಪ್: ಇಂಗ್ಲೆಂಡ್ ಎರಡನೇ ಸ್ಥಾನಕ್ಕೇರಿದ ಭಾರತ
ಈ ಬಾರಿ ಟೂರ್ನಿಯಲ್ಲಿ 6 ಟೆಸ್ಟ್‌ಗಳನ್ನಾಡಿರುವ ಭಾರತ, 3 ಗೆಲುವು ಸಾಧಿಸಿದ್ದು, 1ರಲ್ಲಿ ಡ್ರಾ, 2ರಲ್ಲಿ ಸೋಲನುಭವಿಸಿದೆ. ಶೇ.52.77 ಗೆಲುವಿನ ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದೆ. ಶೇ.55 ಗೆಲುವಿನ ಪ್ರತಿಶತ ಹೊಂದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ.
ದುಬೈ(ಜ.06): 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ್ಯಾಂಕಿಂಗ್ ನಲ್ಲಿ ಭಾರತ ಮತ್ತೆ 2ನೇ ಸ್ಥಾನಕ್ಕೇರಿದೆ. ಮೊದಲ ಟೆಸ್ಟ್ ಸೋಲಿನ ಬಳಿಕ ರೋಹಿತ್ ಪಡೆ 6ನೇ ಸ್ಥಾನಕ್ಕೆ ಕುಸಿದಿತ್ತು. ವಿಶಾಖಪಟ್ಟಣಂನಲ್ಲಿ ಸೋಮವಾರ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ 106 ರನ್‌ಗಳಲ್ಲಿ ಗೆದ್ದ ಬಳಿಕ ಭಾರತ ಅಂಕಪಟ್ಟಿಯಲ್ಲಿ 4 ಸ್ಥಾನ ಪ್ರಗತಿ ಸಾಧಿಸಿದೆ.
ಈ ಬಾರಿ ಟೂರ್ನಿಯಲ್ಲಿ 6 ಟೆಸ್ಟ್‌ಗಳನ್ನಾಡಿರುವ ಭಾರತ, 3 ಗೆಲುವು ಸಾಧಿಸಿದ್ದು, 1ರಲ್ಲಿ ಡ್ರಾ, 2ರಲ್ಲಿ ಸೋಲನುಭವಿಸಿದೆ. ಶೇ.52.77 ಗೆಲುವಿನ ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದೆ. ಶೇ.55 ಗೆಲುವಿನ ಪ್ರತಿಶತ ಹೊಂದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ವಿರುದ್ಧ ಉಳಿದಿರುವ 3 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಭಾರತ ಕಾಯುತ್ತಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ವೆಸ್ಟ್‌ಇಂಡೀಸ್ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ಪ್ರೊ ಕಬಡ್ಡಿ ಲೀಗ್: ಪ್ಲೇ-ಆಫ್‌ಗೆ ಲಗ್ಗೆ ಇಟ್ಟ ಪುಣೇರಿ ಪಲ್ಟನ್
ಬಾಜ್‌ಬಾಲ್ ಆಟಕ್ಕೆ ಬೆದರದೆ ಗೆದ್ದ ಭಾರತ
ವಿಶಾಖಪಟ್ಟಣಂ: ಇತ್ತೀಚಿನ ದಶಕಗಳಲ್ಲಿ ಭಾರತಕ್ಕೆ ತವರಿನ ಟೆಸ್ಟ್‌ನಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವ ತಂಡಗಳಲ್ಲಿ ಇಂಗ್ಲೆಂಡ್‌ಗೆ ಅಗ್ರಸ್ಥಾನ. ಆದರೆ ಈ ಬಾರಿ ಪ್ರವಾಸಿ ಇಂಗ್ಲೆಂಡ್‌ನ ಬಾಜ್‌ಬಾಲ್ ಶೈಲಿಯ ಆಟಕ್ಕೆ ಭಾರತ ಎದೆಯೊಡ್ಡಿ ನಿಂತು ಗೆದ್ದು ಬೀಗಿದೆ. ಸೋಮವಾರ ಮುಕ್ತಾಯಗೊಂಡ 2ನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಪಡೆ 106 ರನ್ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಹೈದರಾಬಾದ್‌ನಲ್ಲಿ ಎದುರಾಗಿದ್ದ ಆಘಾತಕಾರಿ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ, 5 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿತು.
ಗೆಲುವಿಗೆ 399 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್, ಟೀಂ ಇಂಡಿಯಾ ಪಾಳಯದಲ್ಲಿ ಭಯ ಹುಟ್ಟಿಸಲು ಯಶಸ್ವಿಯಾಯಿತಾದರೂ 292ಕ್ಕೆ ಆಲೌಟಾಗಿ ಸೋಲೊಪ್ಪಿಕೊಂಡಿತು. ತವರಿನಲ್ಲಿ ಸೋಲೇ ಇಲ್ಲ ಎಂಬಂತೆ ಮೆರೆದಾಡುತ್ತಿದ್ದ ಭಾರತಕ್ಕೆ ಆರಂಭಿಕ ಪಂದ್ಯದಲ್ಲಿ ಸೋಲುಣಿಸಿದ್ದ ಇಂಗ್ಲೆಂಡ್‌ಗೆ ಈ ಬಾರಿ 399 ರನ್ ಸವಾಲು ಅಸಾಧ್ಯವೇನೂ ಆಗಿರಲಿಲ್ಲ. ಆದರೆ ವೇಗಿ ಬೂಮ್ರಾರ ನಿಖರ ದಾಳಿ, ಸ್ಪಿನ್ನರ್ ಆರ್.ಅಶ್ವಿನ್‌ರ ಕೈಚಳಕದ ಮುಂದೆ ಇಂಗ್ಲೆಂಡ್ ಬ್ಯಾಟರ್‌ಗಳು ಮಂಡಿಯೂರಲೇಬೇಕಾಯಿತು.
ವಿರಾಟ್ ಕೊಹ್ಲಿ ಬಳಿಯಿರುವ 10 ದುಬಾರಿ ವಸ್ತುಗಳಿವು..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
70 ಓವರಲ್ಲಿ ಗೇಲ್ತೇವೆ ಎಂದಿದ್ದ ಆ್ಯಂಡರ್‌ಸನ್!
ಭಾನುವಾರದ ಆಟ ಕೊನೆಗೊಂಡ ಬಳಿಕ ಮಾತನಾಡಿದ್ದ ಇಂಗ್ಲೆಂಡ್ ವೇಗಿ ಆ್ಯಂಡರ್‌ಸನ್, ಪಂದ್ಯದಲ್ಲಿ 180 ಓವರ್ ಬಾಕಿ ಇದ್ದರೂ ನಾವು 60-70 ಓವರಲ್ಲೇ ಗೆಲ್ಲಲು ಪ್ರಯತ್ನಿಸುತ್ತೇವೆ. ನಮ್ಮ ಆಟದ ಶೈಲಿಯೇ ಅದು ಎಂದಿದ್ದರು. ಆ್ಯಂಡರ್‌ಸನ್ ಹೇಳಿದಂತೆ ಇಂಗ್ಲೆಂಡ್ ಬೇಗನೇ ಪಂದ್ಯ ಮುಗಿಸಲು ಪ್ರಯತ್ನಿಸಿದರೂ ಗೆಲುವು ಸಿಗಲಿಲ್ಲ. ತಂಡ 69.2 ಓವರ್‌ಗಳಲ್ಲೇ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.