Asianet Suvarna News Asianet Suvarna News

ವಿಶ್ವಕಪ್‌ಗೆ ಟೀಂ ಇಂಡಿಯಾ ಆಯ್ಕೆ ಮಾಡುವಾಗ ಆದ ಎಡವಟ್ಟು ಗುರುತಿಸಿದ ಯುವರಾಜ್ ಸಿಂಗ್..!

ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಯುಜುವೇಂದ್ರ ಚಹಲ್ ಅವರನ್ನು ಕೈಬಿಟ್ಟಿದ್ದು ಟೀಂ ಇಂಡಿಯಾದ ದೊಡ್ಡ ಎಡವಟ್ಟು ಎಂದು ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಲ್ರೌಂಡರ್ ಯುವರಾಜ್ ಸಿಂಗ್ ವ್ಯಾಖ್ಯಾನಿಸಿದ್ದಾರೆ. ಮುಂಬರುವ ವಿಶ್ವಕಪ್ ಟೂರ್ನಿಗೆ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

World Cup 2023 Leaving out Yuzvendra Chahal could be a mistake says Yuvraj Singh kvn
Author
First Published Sep 29, 2023, 5:37 PM IST

ಮುಂಬೈ(ಸೆ.29): ಮುಂಬರುವ ಅಕ್ಟೋಬರ್ 05ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ 15 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ಕೊನೆಯ ಕ್ಷಣದಲ್ಲಿ 15ರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯಶಸ್ವಿಯಾಗಿದ್ದಾರೆ. ಆದರೆ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್, ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಹೆಸರಿಸುವಾಗ ಆಯ್ಕೆ ಸಮಿತಿಯು ಮಾಡಿದ ಎಡವಟ್ಟನ್ನು ಗುರುತಿಸಿದ್ದಾರೆ.

ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಯುಜುವೇಂದ್ರ ಚಹಲ್ ಅವರನ್ನು ಕೈಬಿಟ್ಟಿದ್ದು ಟೀಂ ಇಂಡಿಯಾದ ದೊಡ್ಡ ಎಡವಟ್ಟು ಎಂದು ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಲ್ರೌಂಡರ್ ಯುವರಾಜ್ ಸಿಂಗ್ ವ್ಯಾಖ್ಯಾನಿಸಿದ್ದಾರೆ. ಮುಂಬರುವ ವಿಶ್ವಕಪ್ ಟೂರ್ನಿಗೆ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ವಿಶ್ವಕಪ್ ಉದ್ಘಾಟನಾ ಪಂದ್ಯದಿಂದ ಹೊರಬಿದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್..!

ದಿ ವೀಕ್‌ ಮಾಧ್ಯಮದ ಜತೆ ಮಾತನಾಡಿದ ಯುವರಾಜ್ ಸಿಂಗ್, ನಿಧಾನಗತಿಯ ಪಿಚ್‌ನಲ್ಲಿ ಯುಜುವೇಂದ್ರ ಚಹಲ್ ಅಪಾಯಕಾರಿ ಬೌಲರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ವಿಶ್ವಕಪ್ ಟೂರ್ನಿಗೆ ಅವರನ್ನು ಆಯ್ಕೆ ಮಾಡದೇ ಹೋದದ್ದು ದೊಡ್ಡ ಮಿಸ್ಟೇಕ್‌ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.

" ಯುಜುವೇಂದ್ರ ಚಹಲ್ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಟ್ಟಿರುವುದು ದೊಡ್ಡ ಮಿಸ್ಟೇಕ್ ಆಗುವ ಸಾಧ್ಯತೆಯಿದೆ. ಕನಿಷ್ಠಪಕ್ಷ ಅವರಿಗೆ ತಂಡದೊಳಗಾದರೂ ಸ್ಥಾನ ನೀಡಬೇಕಿತ್ತು. ಲೆಗ್‌ಸ್ಪಿನ್ನರ್ ಯಾವಾಗಲೂ ತಂಡಕ್ಕೆ ವಿಕೆಟ್ ಕಬಳಿಸುವ ಬೌಲರ್‌ಗಳಾಗಿರುತ್ತಾರೆ. ಕುಲ್ದೀಪ್ ಯಾದವ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ತಿರುವು ಪಡೆಯುವ ಹಾಗೂ ನಿಧಾನಗತಿಯ ಪಿಚ್‌ನಲ್ಲಿ ಚಹಲ್ ಅಪಾಯಕಾರಿಯಾಗಬಲ್ಲ ಬೌಲರ್ ಆಗಿದ್ದಾರೆ. ಮೂರನೇ ವೇಗಿಯ ರೂಪದಲ್ಲಿ ಹಾರ್ದಿಕ್ ಪಾಂಡ್ಯ ತಂಡದ ಬೌಲಿಂಗ್ ವಿಭಾಗವನ್ನು ಸಮತೋಲನದಿಂದ ಕೂಡಿರುವಂತೆ ಮಾಡುತ್ತಾರೆ. ಹೀಗಾಗಿ ಚಹಲ್ ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಬೇಕಿತ್ತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

Danushka Gunathilaka ಲೈಂಗಿಕ ಕಿರುಕುಳ ಕೇಸ್‌ ಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ನಿರ್ದೋಷಿ

"ಇನ್ನು ಜಸ್ಪ್ರೀತ್ ಬುಮ್ರಾ, ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಯಾಕೆಂದರೆ ಅವರಿಲ್ಲದ ಭಾರತ ಬೌಲಿಂಗ್ ವಿಭಾಗ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ಏಷ್ಯಾಕಪ್‌ಗೂ ಮುನ್ನ ಗಾಯದ ಬಗ್ಗೆ ಆತಂಕಕ್ಕೊಳಗಾಗಿದ್ದೆ. ಏಷ್ಯಾಕಪ್ ಗೆದ್ದಿದ್ದೇವೆ ಎಂದಾಕ್ಷಣ ವಿಶ್ವಕಪ್ ಗೆಲ್ಲುತ್ತೇವೆ ಎಂದರ್ಥವಲ್ಲ. ಆದರೆ ಭಾರತ ಒಳ್ಳೆಯ ಫಾರ್ಮ್‌ನಲ್ಲಿದೆ ಎನ್ನುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ" ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ವಿಶ್ವಕಪ್‌ ತಂಡಕ್ಕೆ ಅಶ್ವಿನ್‌

ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಹಿರಿಯ ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ಆರ್‌.ಅಶ್ವಿನ್‌ ಸ್ಥಾನ ಪಡೆದಿದ್ದಾರೆ. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಅಕ್ಷರ್‌ ಪಟೇಲ್‌ ಬದಲಿಗೆ ಅಶ್ವಿನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಲು ಗುರುವಾರ (ಸೆ.28) ಕೊನೆಯ ದಿನವಾಗಿತ್ತು. ಬಿಸಿಸಿಐ ತಂಡದಲ್ಲಿ ಒಂದು ಬದಲಾವಣೆ ಮಾಡಿರುವುದಾಗಿ ಗುರುವಾರ ಸಂಜೆ ಐಸಿಸಿ ಪ್ರಕಟಣೆ ಮೂಲಕ ಖಚಿತಪಡಿಸಿತು.

20 ಓವರ್‌ನಲ್ಲಿ 314 ರನ್, ಕೇವಲ 9 ಎಸೆತಗಳಲ್ಲಿ 50..! ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ನೇಪಾಳ..!

ಏಷ್ಯಾಕಪ್‌ನ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಅಕ್ಷರ್‌ ತೊಡೆಯ ಗಾಯಕ್ಕೆ ತುತ್ತಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಸರಣಿಯಿಂದ ಹೊರಬಿದ್ದಾಗಲೇ ಅಕ್ಷರ್‌ ವಿಶ್ವಕಪ್‌ಗೂ ಅಲಭ್ಯರಾಗಬಹುದು ಎಂದು ಅಂದಾಜಿಸಲಾಗಿತ್ತು. ಒಂದೂವರೆ ವರ್ಷ ಬಳಿಕ ಏಕದಿನ ತಂಡಕ್ಕೆ ಮರಳಿದ ಅಶ್ವಿನ್‌, ಆಸೀಸ್‌ ವಿರುದ್ಧ ಆಡಿದ 2 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ, ತಮ್ಮ ಆಯ್ಕೆ ಸಮರ್ಥಿಸಿಕೊಂಡಿದ್ದರು. ಗುರುವಾರ ವಿಶ್ವಕಪ್‌ ಅಭ್ಯಾಸ ಪಂದ್ಯಕ್ಕಾಗಿ ಅಶ್ವಿನ್‌ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಿದ ವೇಳೆಯೇ ಅವರಿಗೆ ವಿಶ್ವಕಪ್‌ ತಂಡದಲ್ಲಿ ಸ್ಥಾನ ಸಿಗುವ ಸುಳಿವು ಸಿಕ್ಕಿತ್ತು.

ವಿಶ್ವಕಪ್‌ಗೆ ಭಾರತ ತಂಡ:

ರೋಹಿತ್‌ ಶರ್ಮಾ(ನಾಯಕ), ಹಾರ್ದಿಕ್‌ ಪಾಂಡ್ಯ(ಉಪನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಸಿರಾಜ್‌, ಕುಲ್ದೀಪ್‌ ಯಾದವ್‌, ಮೊಹಮದ್‌ ಶಮಿ, ಆರ್‌.ಅಶ್ವಿನ್‌, ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌.

Follow Us:
Download App:
  • android
  • ios