ಕಳೆದ ವರ್ಷ ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ಆಡಲು ಆಸ್ಟ್ರೇಲಿಯಾಗೆ ತೆರಳಿದ್ದ ಗುಣತಿಲಕ, ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಿಲುಕಿ ಜೈಲು ಪಾಲಾಗಿದ್ದರು. ತಮ್ಮ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾಗಿ ಮಹಿಳೆಯೊಬ್ಬರು ಆರೋಪಿಸಿದ ಪರಿಣಾಮ ಗುಣತಿಲಕ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಸಿಕ್ಕರೂ ಆಸ್ಟ್ರೇಲಿಯಾ ಬಿಟ್ಟು ತೆರಳದಂತೆ ನ್ಯಾಯಾಲಯ ನಿರ್ಬಂಧ ಹೇರಿತ್ತು.

ಸಿಡ್ನಿ(ಸೆ.29): ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆಸ್ಟ್ರೇಲಿಯಾದಲ್ಲೇ ಬಾಕಿಯಾಗಿದ್ದ ಶ್ರೀಲಂಕಾ ಕ್ರಿಕೆಟಿಗ ಧನುಷ್ಕ ಗುಣತಿಲಕ ಅವರನ್ನು ಸಿಡ್ನಿ ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿದೆ. ದೂರುದಾರೆ ಸೂಕ್ತ ಸಾಕ್ಷ್ಯ ಒದಗಿಸದ ಹಾಗೂ ಅವರ ಹೇಳಿಕೆಯನ್ನು ಹಲವು ಸರಿ ಬದಲಿಸಿದ ಹಿನ್ನೆಲೆಯಲ್ಲಿ ಧನುಷ್ಕ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. 

ಕಳೆದ ವರ್ಷ ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ಆಡಲು ಆಸ್ಟ್ರೇಲಿಯಾಗೆ ತೆರಳಿದ್ದ ಗುಣತಿಲಕ, ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಿಲುಕಿ ಜೈಲು ಪಾಲಾಗಿದ್ದರು. ತಮ್ಮ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾಗಿ ಮಹಿಳೆಯೊಬ್ಬರು ಆರೋಪಿಸಿದ ಪರಿಣಾಮ ಗುಣತಿಲಕ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಸಿಕ್ಕರೂ ಆಸ್ಟ್ರೇಲಿಯಾ ಬಿಟ್ಟು ತೆರಳದಂತೆ ನ್ಯಾಯಾಲಯ ನಿರ್ಬಂಧ ಹೇರಿತ್ತು.

ವಿಶ್ವಕಪ್‌: ಲಂಕಾ ತಂಡದಲ್ಲಿ ಹಸರಂಗ, ಚಮೀರಗಿಲ್ಲ ಸ್ಥಾನ

ಕೊಲಂಬೊ: ಅಕ್ಟೋಬರ್ 5ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ 15 ಸದಸ್ಯರ ಶ್ರೀಲಂಕಾ ತಂಡ ಪ್ರಕಟಗೊಂಡಿದ್ದು, ಗಾಯದಿಂದ ಚೇತರಿಸಿಕೊಳ್ಳದ ಕಾರಣ ತಾರಾ ಆಲ್ರೌಂಡರ್‌ ವನಿಂದು ಹಸರಂಗ, ವೇಗಿ ದುಷ್ಮಾಂತ ಚಮೀರಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ. ದಸುನ್‌ ಶಾನಕ ತಂಡ ಮುನ್ನಡೆಸಲಿದ್ದು, ಕುಸಾಲ್‌ ಮೆಂಡಿಸ್‌ ಉಪನಾಯಕತ್ವ ವಹಿಸಲಿದ್ದಾರೆ. ಲಂಕಾ ಅಕ್ಟೋಬರ್ 7ರಂದು ದ.ಆಫ್ರಿಕಾ ವಿರುದ್ಧ ಮೊದಲ ಪಂದ್ಯವಾಡಲಿದೆ.

Watch: ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಆಟಗಾರರಿಗೆ ಕೇಸರಿ ಶಾಲು ಹಾಕಿ ಭವ್ಯ ಸ್ವಾಗತ!

ತಂಡ: ದಶುನ್ ಶಾನಕ(ನಾಯಕ), ಕುಸಾಲ್ ಮೆಂಡಿಸ್‌, ಕುಸಾಲ್‌ ಪೆರೆರಾ, ಪತುಮ್ ನಿಸ್ಸಾಂಕ, ಚಮಿಕಾ ಕರುಣರತ್ನೆ, ಸಮರವಿಕ್ರಮ, ಅಸಲಂಕ, ಡಿ ಸಿಲ್ವಾ, ಹೇಮಂತ, ತೀಕ್ಷಣ, ವೆಲ್ಲಲಗೆ, ರಜಿತ, ಪತಿರನ, ಲಹಿರು ಕುಮಾರ, ಮಧುಶನಕ.

ಹೈದರಾಬಾದ್‌ನಲ್ಲಿ ಪಾಕ್‌ ತಂಡಕ್ಕೆ ಭರ್ಜರಿ ಸ್ವಾಗತ

ಹೈದರಾಬಾದ್‌: ಏಕದಿನ ವಿಶ್ವಕಪ್‌ ಆಡಲು ಬುಧವಾರ ರಾತ್ರಿ ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಹೈದರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ಪಾಕಿಸ್ತಾನಿ ಆಟಗಾರರನ್ನು ಸ್ವಾಗತಿಸಿದರು. ಬಳಿಕ ಹೋಟೆಲ್‌ ಬಳಿಯೂ ಹಲವರು ನೆರೆದಿದ್ದರು. ಅಭಿಮಾನಿಗಳಿಂದ ಸಿಕ್ಕ ಪ್ರತಿಕ್ರಿಯೆಗೆ ಪಾಕ್‌ ಆಟಗಾರರು ಬೆರಗಾಗಿದ್ದು, ಬಾಬರ್‌, ರಿಜ್ವಾನ್‌ ಸೇರಿ ಹಲವರು ಸಾಮಾಜಿಕ ತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಇನ್ನು ಪಾಕ್‌ ತಂಡಕ್ಕೆ ಭಾರಿ ಭದ್ರತೆ ಒದಗಿಸಿರುವುದಾಗಿ ಹೈದರಾಬಾದ್‌ ಪೊಲೀಸ್‌ ಇಲಾಖೆ ತಿಳಿಸಿದೆ.

ಅಶ್ವಿನ್ ಇನ್, ಅಕ್ಸರ್ ಪಟೇಲ್ ಔಟ್, ವಿಶ್ವಕಪ್ ಟೂರ್ನಿಗೆ ಅಂತಿಮ ತಂಡ ಪ್ರಕಟ!

ಏಷ್ಯಾಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಭಾರತ ನಿರಾಕರಿಸಿತ್ತು. ಹೀಗಾಗಿ ಏಷ್ಯಾಕಪ್ ಟೂರ್ನಿ ಕೆಲ ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ಆಯೋಜನೆ ಗೊಂಡರೆ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಭಾರತ ಪ್ರವಾಸ ನಿರಾಕರಿಸಿದ ಕಾರಣ, ಪಾಕಿಸ್ತಾನ ಏಕದಿನ ವಿಶ್ವಕಪ್ ಟೂರ್ನಿ ಬಹಿಷ್ಕರಿಸುವುದಾಗಿ ಎಚ್ಚರಿಸಿತ್ತು. ಭಾರತ ಪ್ರವಾಸ ಮಾಡುವುದಿಲ್ಲ ಎಂದಿತ್ತು. ಬಳಿಕ ಪಾಕಿಸ್ತಾನ ತನ್ನ ಪಟ್ಟು ಸಡಿಲಿಸಿತ್ತು.