ದೀಪ್ತಿ ಶರ್ಮಾ ದಾಳಿಗೆ ವೆಸ್ಟ್ ಇಂಡೀಸ್ ಮಹಿಳಾ ತಂಡ ಗಲಿಬಿಲಿಯಾಗಿದೆ. ಇದರ ಪರಿಣಾಮ ಭಾರತಕ್ಕೆ 119 ರನ್ ಟಾರ್ಗೆಟ್ ನೀಡಿದೆ. ಇದೀಗ ಈ ಟಾರ್ಗೆಟ್ ಚೇಸ್ ಭಾರತಕ್ಕೆ ಸವಾಲಾಗಿದೆ.
ಕೇಪ್‌ಟೌನ್(ಫೆ.15): ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿರುವ ಭಾರತ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ. ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಆರ್ಭಟಕ್ಕೆ ದೀಪ್ತಿ ಶರ್ಮಾ ಬ್ರೇಕ್ ಹಾಕಿದ್ದಾರೆ. ಸ್ಟಾಫಾನಿ ಟೇಲರ್ ಹಾಗೂ ಶಮೈನ್ ಕ್ಯಾಂಬೆಲ್ಲೇ ದಿಟ್ಟ ಹೋರಾಟದ ನಡುವೆ ಭಾರತ ಅತ್ಯುತ್ತಮ ದಾಳಿ ಸಂಘಟಿಸಿತು. ಇದರ ಪರಿಣಾಮ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 118ರನ್ ಸಿಡಿಸಿದೆ. ಇದೀಗ 120 ಎಸೆತದಲ್ಲಿ ಭಾರತ ಗೆಲುವಿಗೆ 119 ರನ್ ಸಿಡಿಸಬೇಕಿದೆ. ಕೇಪ್‌ಟೌನ್ ಮೈದಾನದಲ್ಲಿ ಚೇಸಿಂಗ್ ಅಂದುಕೊಂಡಷ್ಟು ಸುಲಭವಲ್ಲ. ಆದರೆ ಭಾರತ ಮಹಿಳಾ ತಂಡ ಉತ್ತಮ ಬ್ಯಾಟರ್ ಹೊಂದಿದೆ. ಹೀಗಾಗಿ ರೋಚಕ ಹೋರಾಟ ಏರ್ಪಡಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕಿ ಹೈಲೇ ಮ್ಯಾಥ್ಯೂಸ್ ಕೇವಲ 2 ರನ್ ಸಿಡಿಸಿ ಔಟಾದರು. ಆದರೆ ಸ್ಟಾಫಾನಿ ಟೇಲರ್ ಹಾಗೂ ಶಮೈನ್ ಕ್ಯಾಂಬೆಲ್ಲೇ ಆರ್ಭಟ ವಿಂಡೀಸ್ ತಂಡಕ್ಕೆ ಚೇತರಿಕೆ ನೀಡಿತು. ಇವರಿಬ್ಬರ ಜೊತೆಯಾಟದಿಂದ ವೆಸ್ಟ್ ಇಂಡೀಸ್ ಉತ್ತಮ ಮೊತ್ತ ಪೇರಿಸಿತು. ಶಮೈನ್ ಕ್ಯಾಂಬೆಲ್ಲೇ 30 ರನ್ ಕಾಣಿಕೆ ನೀಡಿದರು. ಇತ್ತ ಸ್ಟಾಫಾನಿ ಟೇಲರ್ 40 ಎಸೆತದಲ್ಲಿ 42 ರನ್ ಸಿಡಿಸಿದರು.
WPL AUCTION: ದಾಖಲೆಯ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಬಂದ ಸ್ಮೃತಿ ಮಂಧನಾ..!
ಚಿನೆಲ್ ಹೆನ್ರಿ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು. ಆಧರೆ ಶೀಡನ್ ನೇಷನ್ ಹಾಗೂ ಶಬಿಕಾ ಗಜ್ನಬಿ ಜೊತೆಯಾಟ ಮತ್ತೆ ವಿಂಡೀಸ್ ತಂಡಕ್ಕೆ ನೆರವಾಯಿತು. ಶಬೀಕಾ ಗಜ್ನಬಿ ಕೇವಲ 13 ಎಸೆದಲ್ಲಿ 15 ರನ್ ಸಿಡಿಸಿದರು.ಫ್ಲೆಚರ್ ಡಕೌಟ್ ಆದರು. ವಿಕೆಟ್ ಕೀಪರ್ ರಶದಾ ವಿಲಿಯಮ್ಸ್ ಕೇವಲ 2 ರನ್ ಸಿಡಿಸಿ ಔಟಾದರು. ಚೀಡನ್ ನೇಷನ್ 18 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 118 ರನ್ ಸಿಡಿಸಿತು.
'ಕ್ರಿಕೆಟ್ ಹುಡುಗ್ರ ಆಟ, ನೀನ್ ಆಡೋದ್ ಬೇಡ..' ಎಂದಿದ್ದ ತಂದೆಗೆ ಸವಾಲೆಸಿದ್ದ ಮಿನ್ನು ಮಣಿ ಈಗ ಮನೆಯ ಧಣಿ!
ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಜಯಭೇರಿ!
ಟಿ20 ವಿಶ್ವಕಪ್ ಟೂರ್ನಿಗೆ ಕಾಲಿಟ್ಟಭಾರತ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧವೈರಿ ಪಾಕಿಸ್ತಾನವನ್ನು ಸೋಲಿಸಿ ಶುಭಾರಂಭ ಮಾಡಿದೆ.ಮಹತ್ವದ ಪಂದ್ಯದಲ್ಲಿ ಭಾರತ 7 ವಿಕೆಟ್ ಗೆಲುವು ಸಾಧಿಸಿತು.ಟಾಸ್ ಗೆದ್ದು ಬ್ಯಾಟ್ ಮಾಡಿದ ಪಾಕಿಸ್ತಾನ 4 ವಿಕೆಟ್‌ಗೆ 149 ರನ್ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹರ್ಮನ್ಪ್ರೀತ್ ಬಳಗ 19 ಓವರಲ್ಲಿ ಗೆಲುವು ಪಡೆಯಿತು. ಸ್ಮೃತಿ ಮಂಧನಾ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಯಸ್ತಿಕಾ ಭಾಟಿಯಾ 17 ರನ್‌ಗೆ ವಿಕೆಟ್ ಒಪ್ಪಿಸಿದರೆ, ಶಫಾಲಿ ವರ್ಮಾ ವೇಗವಾಗಿ 33 ರನ್ ಸಿಡಿಸಿದರು. 13.3ನೇ ಓವರಲ್ಲಿ ಹರ್ಮನ್(16) ಔಟಾದಾಗ ಭಾರತಕ್ಕೆ 39 ಎಸೆತದಲ್ಲಿ ಗೆಲ್ಲಲು 57 ರನ್ ಬೇಕಿತ್ತು.ಜೆಮಿಮಾ ಹಾಗೂ ರಿಚಾ ಸತತ ಬೌಂಡರಿಗಳ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿದರು. 17ನೇ ಓವರಲ್ಲಿ 13 ರನ್ ಕಲೆಹಾಕಿದ ಈ ಇಬ್ಬರು, 18ನೇ ಓವರಲ್ಲಿ 14 ರನ್ ಕದ್ದರು. ಕೊನೆ 12 ಎಸೆತದಲ್ಲಿ 14 ರನ್ ಬೇಕಿತ್ತು. ಆದರೆ ಫಾತಿಮಾು ಸನಾ ಎಸೆದ 19ನೇ ಓವರಲ್ಲಿ 3 ಬೌಂಡರಿ ಸಿಡಿಸಿದ ಜೆಮಿಮಾ ಅರ್ಧಶತಕ ಪೂರೈಸುವುದರ ಜೊತೆಗೆ ಭಾರತವನ್ನು ಜಯದ ದಡ ಸೇರಿಸಿದರು. ಇವರಿಬ್ಬರು ಮುರಿಯದ 4ನೇ ವಿಕೆಟ್‌ಗೆ ಕೇವಲ 5.3 ಓವರಲ್ಲಿ 58 ರನ್ ಸೇರಿಸಿದರು.
