WPL Auction: ದಾಖಲೆಯ ಮೊತ್ತಕ್ಕೆ ಆರ್ಸಿಬಿ ತೆಕ್ಕೆಗೆ ಬಂದ ಸ್ಮೃತಿ ಮಂಧನಾ..!
ಸ್ಮೃತಿ ಮಂಧನಾರನ್ನು ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಸ್ಮೃತಿ ಮಂಧನಾ
3.40 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮುಂಬೈ(ಫೆ.13): ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಮೊದಲ ಸ್ಥಾನದಲ್ಲೇ ಸ್ಮೃತಿ ಮಂಧನಾ ಖರೀದಿಸಿಲು ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ
50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಸ್ಮೃತಿ ಮಂಧನಾ ಖರೀದಿಸಲು ಮುಂಬೈ ಹಾಗೂ ಆರ್ಸಿಬಿ ಫ್ರಾಂಚೈಸಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತಾದರೂ 3.40 ಕೋಟಿ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಆರ್ಸಿಬಿ ಫ್ರಾಂಚೈಸಿ ಯಶಸ್ವಿಯಾಯಿತು. ಇನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕ ಹರ್ಮನ್ಪ್ರೀತ್ ಕೌರ್ ಅವರನ್ನು 1.80 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇನ್ನು ಕೌರ್ ಕೂಡಾ ಮೂಲ ಬೆಲೆ 50 ಲಕ್ಷ ರುಪಾಯಿ ಹೊಂದಿದ್ದರು.
ಇನ್ನು ಸೋಫಿ ಡಿವೈನ್ ಅವರನ್ನು ಮೂಲ ಬೆಲೆ 50 ಲಕ್ಷ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಶಸ್ವಿಯಾಯಿತು.
ವುಮೆನ್ಸ್ ಪ್ರೀಮಿಯರ್ ಲೀಗ್(ಮಹಿಳಾ ಐಪಿಎಲ್)ನ ಹರಾಜು ಪ್ರಕ್ರಿಯೆ ಇಂದು ಮುಂಬೈನಲ್ಲಿ ಆರಂಭವಾಗಿದ್ದು, 246 ಭಾರತೀಯರು ಸೇರಿದಂತೆ ಒಟ್ಟು 409 ಆಟಗಾರ್ತಿಯರು ವಿವಿಧ ತಂಡಗಳಿಗೆ ಬಿಕರಿಯಾಗುವ ನಿರೀಕ್ಷೆಯಲ್ಲಿದ್ದಾರೆ.
ಪಟ್ಟಿಯಲ್ಲಿ 163 ವಿದೇಶಿ ಆಟಗಾರ್ತಿಯರ ಜೊತೆಗೆ, 199 ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರ್ತಿಯರೂ ಇದ್ದಾರೆ. ಟೂರ್ನಿಯ 5 ತಂಡಗಳು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು ಕನಿಷ್ಠ 30 ವಿದೇಶಿಗರು ಸೇರಿ ಗರಿಷ್ಠ 90 ಆಟಗಾರ್ತಿಯರು ಬಿಕರಿಯಾಗಬಹುದು. ಪ್ರತೀ ತಂಡ ಕನಿಷ್ಠ 15, ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಿಬಹುದಾಗಿದ್ದು, ಗರಿಷ್ಠ 12 ಕೋಟಿ ರು. ಬಳಸಬಹುದಾಗಿದೆ. 24 ಅಟಗಾರ್ತಿಯರು ಗರಿಷ್ಠ ಅಂದರೆ 50 ಲಕ್ಷ ರು. ಮೂಲಬೆಲೆ, 30 ಅಟಗಾರ್ತಿಯರು 40 ಲಕ್ಷ ರು. ಮೂಲಬೆಲೆಯ ಪಟ್ಟಿಯಲ್ಲಿದ್ದಾರೆ.
ವೇದಾ ಕೃಷ್ಣಮೂರ್ತಿ, ರಾಜೇಶ್ವರಿ, ವೃಂದಾ ಸೇರಿದಂತೆ ಕರ್ನಾಟಕದ 21 ಆಟಗಾರ್ತಿಯರು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.