ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಗೆಲುವಿನ ಮೂಲಕ ಅಬ್ಬರಿಸುತ್ತಿರುವ ಭಾರತ ಮಹಿಳಾ ತಂಡ ಇಂದು ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸುತ್ತಿದೆ. ಸೆಮಿಫೈನಲ್ ಟಿಕೆಟ್ ಖಚಿತ ಪಡಿಸಿಕೊಳ್ಳಲು ಭಾರತ ಹೋರಾಟ ನಡೆಸಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮಹಿಳಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ 1 ಬದಲಾವಣೆ ಮಾಡಲಾಗಿದೆ.

ಜಾರ್ಜ್ ಪಾರ್ಕ್(ಫೆ.18): ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ 2 ಗೆಲುವು ದಾಖಲಿಸಿ ದಿಟ್ಟವಾಗಿ ಮುನ್ನುಗ್ಗುತ್ತಿದೆ. ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ಬಳಿಕ ಇದೀಗ ಇಂಗ್ಲೆಂಡ್ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಮಹತ್ವದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ ಪಂದ್ಯವಾಗಿದೆ. ಈ ಪಂದ್ಯ ಗೆದ್ದ ತಂಡ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಮಹತ್ವದ ಪಂದ್ಯದಲ್ಲಿ ಭಾರತ ಮಹಿಳಾ ತಂಡ 1 ಬದಲಾವಣೆ ಮಾಡಿದೆ. ದೇವಿಕಾ ಬದಲು ಶಿಖಾ ಪಾಂಡೆ ತಂಡ ಸೇರಿಕೊಂಡಿದ್ದಾರೆ.

ಭಾರತ ಮಹಿಳಾ ತಂಡ:
ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೇಮಿ ರೋಡ್ರಿಗ್ರೆಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ರಿಚಾ ಘೋಷ್, ಶಿಖಾ ಪಾಂಡೆ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್

'ತುಂಬಾ ಹಣ ವೇಸ್ಟ್‌ ಮಾಡ್ತಾಳೆ': WPL ಹರಾಜಿನಿಂದ ಬಂದ ಹಣವನ್ನು ಇನ್ವೆಸ್ಟ್‌ ಮಾಡಲು ಪೂಜಾ ವಸ್ತ್ರಾಕರ್ ತಂದೆ ಸಲಹೆ..!

ಇಂಗ್ಲೆಂಡ್ ಮಹಿಳಾ ತಂಡ
ಸೋಫಿಯಾ ಡಂಕ್ಲಿ, ಡೇನಿಯಲ್ ವೈಟ್, ಅಲಿಸೆ ಕ್ಯಾಪ್ಸಿ, ನ್ಯಾಟ್ ಸ್ಕಿವಿಯರ್ ಬ್ರಂಟ್, ಹೀದರ್ ನೈಟ್(ನಾಯಕಿ), ಆ್ಯಮಿ ಜೋನ್ಸ್, ಕ್ಯಾದರಿನ್ ಸ್ಕೀವಿಯರ್ ಬ್ರಂಟ್, ಸೋಫಿ ಎಕ್ಲಿಸ್ಟೋನ್, ಚಾರ್ಲೊಟ್ ಡೀನ್, ಸಾರ ಗ್ಲೆನ್, ಲೌರೆನ್ ಬೆಲ್

ಇಂಗ್ಲೆಂಡ್ ಮಹಿಳಾ ತಂಡ
ಸೋಫಿಯಾ ಡಂಕ್ಲಿ, ಡೇನಿಯಲ್ ವೈಟ್, ಅಲಿಸೆ ಕ್ಯಾಪ್ಸಿ, ನ್ಯಾಟ್ ಸ್ಕಿವಿಯರ್ ಬ್ರಂಟ್, ಹೀದರ್ ನೈಟ್(ನಾಯಕಿ), ಆ್ಯಮಿ ಜೋನ್ಸ್, ಕ್ಯಾದರಿನ್ ಸ್ಕೀವಿಯರ್ ಬ್ರಂಟ್, ಸೋಫಿ ಎಕ್ಲಿಸ್ಟೋನ್, ಚಾರ್ಲೊಟ್ ಡೀನ್, ಸಾರ ಗ್ಲೆನ್, ಲೌರೆನ್ ಬೆಲ್

 ಸದ್ಯ 2 ಅಂಕ​ಗ​ಳೊಂದಿಗೆ ‘ಬಿ’ ಗುಂಪಿ​ನ​ಲ್ಲಿ 2ನೇ ಸ್ಥಾನ​ದ​ಲ್ಲಿ​ದ್ದರೂ ಸೆಮಿ​ಫೈ​ನಲ್‌ ರೇಸ್‌​ನಲ್ಲಿ ಉಳಿ​ಯಲು ಕಳೆದ ಬಾರಿ ರನ್ನ​ರ್‌​-ಅಪ್‌ ಭಾರ​ತಕ್ಕೆ ಈ ಪಂದ್ಯ​ದಲ್ಲಿ ಗೆಲುವು ಅನಿ​ವಾರ್ಯ. ಅತ್ತ ಆರಂಭಿಕ ಪಂದ್ಯ​ದಲ್ಲಿ ಇಂಗ್ಲೆಂಡ್‌ ವಿರುದ್ಧ ಪರಾ​ಭ​ವ​ಗೊಂಡಿದ್ದ ವಿಂಡೀ​ಸ್‌ಗೂ ನಾಕೌಟ್‌ ರೇಸ್‌​ನಲ್ಲಿ ಉಳಿ​ಯ​ಬೇ​ಕಾ​ದರೆ ಭಾರತ ವಿರುದ್ಧ ಗೆಲ್ಲ​ಲೇ​ಬೇ​ಕಾದ ಒತ್ತ​ಡವಿದೆ. ಒಂದು ವೇಳೆ ಸೋತರೆ ತಂಡದ ಸೆಮೀಸ್‌ ಹಾದಿ ಕಠಿ​ಣ​ಗೊ​ಳ್ಳ​ಲಿ​ದೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ ದೀಪ್ತಿ ಶರ್ಮಾ 100 ವಿಕೆಟ್‌: ದಾಖಲೆ!

ಪಾಕ್‌ ಪಂದ್ಯಕ್ಕೆ ಅಲ​ಭ್ಯ​ರಾ​ಗಿದ್ದ ಸ್ಮೃತಿ ಮಂಧನಾ ಈ ಪಂದ್ಯದಲ್ಲಿ ಆಡುವ ನಿರೀ​ಕ್ಷೆ​ಯಿದ್ದು, ಬ್ಯಾಟಿಂಗ್‌ ಪಡೆಗೆ ಬಲ ತುಂಬಲಿದ್ದಾರೆ. ಜೆಮಿಮಾ ರೋಡ್ರಿಗ್‌್ಸ ಜೊತೆ ಯುವ ತಾರೆ​ಗ​ಳಾದ ಶಫಾಲಿ ವರ್ಮಾ, ರಿಚಾ ಘೋಷ್‌ ಅಬ್ಬ​ರಿ​ಸಿ​ದರೆ ಎದು​ರಾ​ಳಿಗೆ ಉಳಿ​ಗಾ​ಲ​ವಿಲ್ಲ. ಗಾಯದಿಂದ ಚೇತರಿಸಿಕೊಂಡಿರುವ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಇನ್ನಷ್ಟೇ ತಮ್ಮ ನೈಜ ಆಟ ಪ್ರದ​ರ್ಶಿ​ಸ​ಬೇ​ಕಿದೆ.

ಇನ್ನು, ಕಳೆದ ಪಂದ್ಯ​ದಲ್ಲಿ ದುಬಾ​ರಿ​ಯಾ​ಗಿದ್ದ ಬೌಲಿಂಗ್‌ ವಿಭಾಗ ಸುಧಾ​ರಿತ ಪ್ರದ​ರ್ಶನ ನೀಡ​ಬೇ​ಕಾದ ಅಗ​ತ್ಯ​ವಿದ್ದು, ಯುವ ವೇಗಿ ರೇ​ಣುಕಾ ಸಿಂಗ್‌, ಅನು​ಭ​ವಿ​ ಸ್ಪಿನ್ನ​ರ್‌ ರಾಜೇ​ಶ್ವರಿ ಗಾಯ​ಕ್ವಾ​ಡ್‌, ರಾಧಾ ಯಾದ​ವ್‌ ಮೇಲೆ ಭಾರೀ ನಿರೀ​ಕ್ಷೆ ಇದೆ. ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರ​ಕರ್‌ ಆಲ್ರೌಂಡ್‌ ಪ್ರದ​ರ್ಶನ ತಂಡಕ್ಕೆ ನಿರ್ಣಾ​ಯಕ ಎನಿ​ಸಿ​ಕೊಂಡಿ​ದೆ. ಫೀಲ್ಡಿಂಗ್‌ನಲ್ಲೂ ಭಾರತೀಯರು ಸುಧಾರಣೆ ಕಾಣಬೇಕಿದೆ. ಮತ್ತೊಂದೆಡೆ ವಿಂಡೀಸ್‌ ತಂಡ ನಾಯಕಿ ಹೇಲಿ ಮ್ಯಾಥ್ಯೂ​ಸ್‌, ಅನು​ಭವಿ ಸ್ಟೆಫಾನಿ ಟೇಲ​ರ್‌​ರನ್ನೇ ಹೆಚ್ಚಾಗಿ ಅವ​ಲಂಬಿ​ಸಿದ್ದು, ನಿರೀಕ್ಷೆಗೂ ಮೀರಿದ ಆಟವಾಡಬೇಕಿರುವ ಒತ್ತಡದಲ್ಲಿದೆ.