ಮಾರ್ಚ್‌ 4ರಿಂದ ಮುಂಬೈನಲ್ಲಿ ಮಹಿಳಾ ಐಪಿಎಲ್‌ ಶುರುವಾಗುವ ಸಾಧ್ಯತೆಮುಂಬೈನ 2 ಕ್ರೀಡಾಂಗಣ ಆತಿಥ್ಯ ಮಾರ್ಚ್ 26ಕ್ಕೆ ಫೈನಲ್‌ಟೂರ್ನಿಯಲ್ಲಿ 5 ತಂಡಗಳು ಪಾಲ್ಗೊಳ್ಳಲಿವೆ 

ಮುಂಬೈ(ಫೆ.04): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಮಹಿಳಾ ಐಪಿಎಲ್‌) ಮಾರ್ಚ್ 4ರಿಂದ 26ರ ವರೆಗೆ ಮುಂಬೈನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲವಾದರೂ ಟೂರ್ನಿಯ ವೇಳಾಪಟ್ಟಿ ಸಿದ್ಧಗೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಟೂರ್ನಿಯ ಎಲ್ಲಾ ಪಂದ್ಯಗಳಿಗೂ ಮುಂಬೈನ ಬ್ರೆಬೋರ್ನ್‌ ಹಾಗೂ ಡಿ.ವೈ.ಪಾಟೀಲ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಮುಖೇಶ್‌ ಅಂಬಾನಿ ಮಾಲಿಕತ್ವದ ಮುಂಬೈ ಹಾಗೂ ಗೌತಮ್‌ ಅದಾನಿ ಒಡೆತನದ ಅಹಮದಾಬಾದ್‌ ತಂಡಗಳು ಮುಖಾಮುಖಿಯಾಗಲಿವೆ. 2ನೇ ಪಂದ್ಯದಲ್ಲಿ ಬೆಂಗಳೂರು ಹಾಗೂ ಡೆಲ್ಲಿ ತಂಡಗಳು ಸ್ಪರ್ಧಿಸುವ ಸಾಧ್ಯತೆ ಇದೆ. 

ಮೂಲಗಳ ಪ್ರಕಾರ ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ಗೇರಲಿದ್ದು, 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಮಾರ್ಚ್ 24ರಂದು ಎಲಿಮಿನೇಟರ್‌ನಲ್ಲಿ ಸೆಣಸಲಿವೆ ಎನ್ನಲಾಗಿದೆ. ಟೂರ್ನಿಯಲ್ಲಿ 5 ತಂಡಗಳು ಪಾಲ್ಗೊಳ್ಳಲಿವೆ.

ವುಮೆನ್ಸ್‌ ಪ್ರೀಮಿಯರ್‌ ಲೀಗ್‌ ಎಂದು ನಾಮಕರಣ

ಮಹಿಳಾ ಐಪಿಎಲ್‌ ಟೂರ್ನಿಗೆ ಬಿಸಿಸಿಐ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಎಂದು ನಾಮಕರಣ ಮಾಡಿದೆ. ಆಟಗಾರ್ತಿಯರ ಹರಾಜು ಫೆಬ್ರವರಿ ಎರಡನೇ ವಾರದಲ್ಲಿ ನಡೆಯಲಿದೆ. ಮೊದಲ ಆವೃತ್ತಿಯನ್ನು ಸಂಪೂರ್ಣವಾಗಿ ಮುಂಬೈನಲ್ಲೇ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಕ್ರಿಕೆಟ್‌ನಿಂದ ದೂರವಾಗಿ 6 ವರ್ಷ ಬಳಿಕ ಜೋಗಿಂದರ್‌ ಶರ್ಮಾ ನಿವೃತ್ತಿ ಘೋಷಣೆ!

ನವದೆಹಲಿ: 2017ರ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಎನಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದ್ದ ವೇಗಿ ಜೋಗಿಂದರ್‌ ಶರ್ಮಾ ಶುಕ್ರವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 

Ranji Trophy: ಉತ್ತರಾಖಂಡ ಬಗ್ಗುಬಡಿದು ಸೆಮೀಸ್‌ಗೆ ಕರ್ನಾಟಕ ಲಗ್ಗೆ..!

2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಹರ್ಯಾಣದ ಜೋಗಿಂದರ್‌ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದು 2007ರ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ. ಕೊನೆ ಓವರ್‌ಗೆ 13 ರನ್‌ ಬೇಕಿದ್ದಾಗ ಬೌಲ್‌ ಮಾಡಿದ್ದ ಜೋಗಿಂದರ್‌ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿದ್ದರು. ಬಳಿಕ ಅವರಿಗೆ ಭಾರತ ಪರ ಆಡುವ ಅವಕಾಶ ಸಿಗಲಿಲ್ಲ. ದೇಶದ ಪರ ಜೋಗಿಂದರ್‌ 4 ಏಕದಿನ, 4 ಟಿ20 ಪಂದ್ಯಗಳನ್ನಾಡಿದ್ದಾರೆ. 2017ರಲ್ಲಿ ಕೊನೆ ಬಾರಿ ಹರಾರ‍ಯಣ ಪರ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದರು.

ರಾಷ್ಟ್ರೀಯ ವನಿತಾ ಏಕದಿನ: ಸೆಮೀಸ್‌ಗೇರಿದ ಕರ್ನಾಟಕ

ರಾಂಚಿ: ಕಳೆದ ಬಾರಿ ರನ್ನರ್‌-ಅಪ್‌ ಕರ್ನಾಟಕ ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ರಾಜ್ಯ ತಂಡ ಡೆಲ್ಲಿ ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸಿ, ಗುಂಪು ಹಂತದ ಸೋಲಿಗೆ ಸೇಡು ತೀರಿಸಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಉತ್ತಮ ಆರಂಭದ ಹೊರತಾಗಿಯೂ 49.4 ಓವರ್‌ಗಳಲ್ಲಿ 199ಕ್ಕೆ ಆಲೌಟಾಯಿತು. 

ಪ್ರಿಯಾ ಪೂನಿಯಾ(67) ಏಕಾಂಗಿ ಹೋರಾಟ ಪ್ರದರ್ಶಿಸಿದರು. ತಂಡದ ಕೊನೆ 7 ವಿಕೆಟ್‌ 24 ರನ್‌ ಅಂತರದಲ್ಲಿ ಪತನಗೊಂಡವು. ಕರ್ನಾಟಕ 38.4 ಓವರಲ್ಲಿ ಗುರಿ ತಲುಪಿತು. ವೃಂದಾ(62), ಶಿಶಿರಾ ಗೌಡ(51), ನಾಯಕಿ ವೇದಾ ಕೃಷ್ಣಮೂರ್ತಿ(ಔಟಾಗದೆ 45) ಜಯ ತಂದುಕೊಟ್ಟರು. ಸೆಮೀಸ್‌ನಲ್ಲಿ ರಾಜ್ಯ ತಂಡ ಭಾನುವಾರ ರಾಜಸ್ಥಾನ ವಿರುದ್ಧ ಕಾದಾಡಲಿದೆ.