ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳಾಪಟ್ಟಿ ಪ್ರಕಟ: ಬೆಂಗಳೂರು ಕ್ರಿಕೆಟ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್..!

ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಬೆಂಗಳೂರು ಹಾಗೂ ಡೆಲ್ಲಿಯಲ್ಲಿ ನಡೆಯಲಿದ್ದು, ಮೊದಲ ಹಂತದ ಪಂದ್ಯಗಳು ಬೆಂಗಳೂರಿನಲ್ಲೇ ನಡೆದರೆ, ದ್ವಿತಿಯಾರ್ಧ ಹಾಗೂ ನಾಕೌಟ್ & ಫೈನಲ್ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಎಲಿಮಿನೇಟರ್ ಪಂದ್ಯವು ಮಾರ್ಚ್ 15ರಂದು ನಡೆದರೆ, ಫೈನಲ್ ಪಂದ್ಯವು ಮಾರ್ಚ್ 17ರಂದು ನಡೆಯಲಿದೆ.

Womens Premier League Schedule Mumbai Indians Delhi Capitals to kick off WPL 2024 on Feburary 23 kvn

ಮುಂಬೈ(ಜ.23): ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಬಿಸಿಸಿಐ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ್ದು, ಬೆಂಗಳೂರು ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ನೀಡಿದೆ. ಚೊಚ್ಚಲ ಆವೃತ್ತಿಯ ಸಂಪೂರ್ಣ ವುಮೆನ್ಸ್ ಪ್ರೀಮಿಯರ್ ಲೀಗ್ ಮುಂಬೈನಲ್ಲಿ ನಡೆದಿತ್ತು. ಆದರೆ ಇದೀಗ ಎರಡನೇ ಆವೃತ್ತಿಯ ಟೂರ್ನಿ ಅರ್ಧ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ನಮ್ಮ ಕ್ರಿಕೆಟ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ನೀಡಿದೆ.

ಹೌದು, ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಮುಂಬರುವ ಫೆಬ್ರವರಿ 23ರಿಂದ ಆರಂಭವಾಗಲಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಲಿವೆ. ಸಂಜೆ 7.30ರಿಂದ ಪಂದ್ಯ ಆರಂಭವಾಗಲಿದೆ.

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ರೆಡಿ..!

ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಬೆಂಗಳೂರು ಹಾಗೂ ಡೆಲ್ಲಿಯಲ್ಲಿ ನಡೆಯಲಿದ್ದು, ಮೊದಲ ಹಂತದ ಪಂದ್ಯಗಳು ಬೆಂಗಳೂರಿನಲ್ಲೇ ನಡೆದರೆ, ದ್ವಿತಿಯಾರ್ಧ ಹಾಗೂ ನಾಕೌಟ್ & ಫೈನಲ್ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಎಲಿಮಿನೇಟರ್ ಪಂದ್ಯವು ಮಾರ್ಚ್ 15ರಂದು ನಡೆದರೆ, ಫೈನಲ್ ಪಂದ್ಯವು ಮಾರ್ಚ್ 17ರಂದು ನಡೆಯಲಿದೆ.

ಕಳೆದ ಬಾರಿಯಂತೆ ಈ ಬಾರಿ ಕೂಡಾ 5 ಮಹಿಳಾ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಒಟ್ಟು 22 ಪಂದ್ಯಗಳ ಪೈಕಿ 11 ಪಂದ್ಯಗಳು ಬೆಂಗಳೂರು ಹಾಗೂ 11 ಪಂದ್ಯಗಳು ಡೆಲ್ಲಿಯಲ್ಲಿ ನಡೆಯಲಿವೆ. ಫೆಬ್ರವರಿ 23ರಿಂದ ಮಾರ್ಚ್ 04ರವರೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟಗಳು ನಡೆಯಲಿವೆ. ಇದಾದ ಬಳಿಕ ಟೂರ್ನಿಯು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು 24 ದಿನಗಳ ಅವಧಿಯ ಈ ಟೂರ್ನಿಯಲ್ಲಿ ಪ್ರತಿದಿನ ಒಂದೊಂದು ಪಂದ್ಯ ನಡೆಯಲಿದೆ.

ಸಾನಿಯಾಗೆ ಮಲಿಕ್ ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ, ಆದ್ರೂ ಪಾಕ್ ಕ್ರಿಕೆಟಿಗನ ಬಲೆಗೆ ಬಿದ್ದಿದ್ದು ಹೇಗೆ?

WPL ವೇಳಾಪಟ್ಟಿ ಹೀಗಿದೆ ನೋಡಿ

ಬೆಂಗಳೂರು ಚರಣದ ಪಂದ್ಯಗಳು

Feb 23: MI vs DC

Feb 24: RCB vs UP Warriorz

Feb 25: Gujarat Giants vs MI

Feb 26: UP Warriorz vs DC

Feb 27: RCB vs Gujarat Giants

Feb 28: MI vs UP Warriorz

Feb 29: RCB vs DC

March 1: UP Warriorz vs Gujarat Giants

March 2: RCB vs MI

March 3: Gujarat Giants vs DC

Mach 4: UP Warriorz vs RCB

ಡೆಲ್ಲಿ ಚರಣದ ಪಂದ್ಯಗಳು

March 5: DC vs MI

March 6: Gujarat Giants vs RCB

March 7: UP Warriorz vs MI

March 8: DC vs UP Warriorz

March 9: MI vs Gujarat Giants

March 10: DC vs RCB

March 11: Gujarat Giants vs UP Warriorz

March 12: MI vs RCB

March 13: DC vs Gujarat Giants

March 15: ಎಲಿಮಿನೇಟರ್ ಪಂದ್ಯ

March 17: ಫೈನಲ್ ಪಂದ್ಯ

Latest Videos
Follow Us:
Download App:
  • android
  • ios