- Home
- Sports
- Cricket
- ಸಾನಿಯಾಗೆ ಮಲಿಕ್ ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ, ಆದ್ರೂ ಪಾಕ್ ಕ್ರಿಕೆಟಿಗನ ಬಲೆಗೆ ಬಿದ್ದಿದ್ದು ಹೇಗೆ?
ಸಾನಿಯಾಗೆ ಮಲಿಕ್ ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ, ಆದ್ರೂ ಪಾಕ್ ಕ್ರಿಕೆಟಿಗನ ಬಲೆಗೆ ಬಿದ್ದಿದ್ದು ಹೇಗೆ?
ಬೆಂಗಳೂರು: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ 14 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ. ಇದೀಗ ಶೋಯೆಬ್ ಮಲಿಕ್, ಪಾಕಿಸ್ತಾನದ ನಟಿ ಸನಾ ಜಾವೆದ್ ಅವರನ್ನು ಮೂರನೇ ಮದುವೆಯಾಗಿದ್ದಾರೆ. ಭಾರತದ ಸಾನಿಯಾ ಮಿರ್ಜಾ, ಪಾಕಿಸ್ತಾನದ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿದ್ದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಪಾಕ್ ನಟಿ ಸನಾ ಜಾವೆದ್ ಅವರನ್ನು ಪಾಕಿಸ್ತಾನಿ ಕ್ರಿಕೆಟಿಗ ಮದುವೆಯಾಗುವುದರೊಂದಿಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರ 14 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಕೊನೆಗೂ ಪೂರ್ಣ ವಿರಾಮ ಬಿದ್ದಿದೆ.
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ ಎನ್ನುವ ಮಾತುಗಳು ಈ ಹಿಂದಿನಿಂದಲೂ ಕೇಳಿಬಂದಿದ್ದವು. ಇದೀಗ ಶೋಯೆಬ್ ಮಲಿಕ್ ಮೂರನೇ ಮದುವೆಯಾಗುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರ ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಸಾನಿಯಾ ಮಿರ್ಜಾ ಮೊದಲ ಬಾರಿಗೆ ಶೋಯೆಬ್ ಮಲಿಕ್ ಅವರನ್ನು ಭೇಟಿಯಾಗಿದ್ದಾಗ ಪಾಕ್ ಕ್ರಿಕೆಟಿಗ ಇಷ್ಟವಾಗಿರಲಿಲ್ಲವಂತೆ. ಈ ಮಾತನ್ನು ಸ್ವತಃ ಮಲಿಕ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಪಾಕಿಸ್ತಾನದ ಟಿವಿ ಶೋ ವೊಂದರಲ್ಲಿ ಮಾತನಾಡಿದ್ದ ಮಲಿಕ್, ತಾವು ಸಾನಿಯಾ ಮಿರ್ಜಾ ಅವರನ್ನು 2003ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದಾಗಿ ತಿಳಿಸಿದ್ದರು. ಆ ಸಂದರ್ಭದಲ್ಲಿ ಸಾನಿಯಾಗೆ ನಾನು ಒಂಚೂರು ಇಷ್ಟವಾಗಿರಲಿಲ್ಲ ಎಂದು ಹೇಳಿದ್ದಾರೆ.
sania mirza 2.
ಆ ಸಂದರ್ಭದಲ್ಲೇ ಮಾತನಾಡಿದ್ದ ಸಾನಿಯಾ, ಕ್ರಿಕೆಟರ್‌ಗಳದ್ದು ಎಂತಹ ಬದುಕು ಆಗಿರುತ್ತದೆ ಎಂದು ನಮಗೆ ಗೊತ್ತಿದೆ. ಹೀಗಾಗಿ ಅವರಿಂದ ದೂರವಿರುವುದೇ ಒಳ್ಳೆಯದು ಎಂದು ಭಾವಿಸಿದ್ದೆ ಎಂದು ಸಾನಿಯಾ ತಮ್ಮ ಮೊದಲ ಭೇಟಿಯನ್ನು ಸ್ಮರಿಸಿಕೊಂಡಿದ್ದರು.
ಇದಾದ ಆರು ವರ್ಷಗಳ ಬಳಿಕ ಅಂದರೆ 2009ರಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಎರಡನೇ ಬಾರಿಗೆ ಮುಖಾಮುಖಿಯಾದರು. ಇದು ಅವರಿಬ್ಬರ ಜೀವನದ ಟರ್ನಿಂಗ್ ಪಾಯಿಂಟ್ ಎನಿಸಿತು.
sania mirza
2009ರಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಆಸ್ಟ್ರೇಲಿಯಾದ ಹೋಬರ್ಟ್‌ನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾದರು. ಆಗ ಮಾತುಕತೆ ಅವರಿಬ್ಬರನ್ನು ಹತ್ತಿರಕ್ಕೆ ತರುವಂತೆ ಮಾಡಿತು. ಪರಿಣಾಮ ಅದು ಮರು ವರ್ಷವೇ ಅವರಿಬ್ಬರು ಮದುವೆಯಾಗುವಂತೆ ಮಾಡಿತು.
ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ಏಪ್ರಿಲ್ 10, 2010ರಲ್ಲಿ ಮುಸ್ಲಿಂ ಸಂಪ್ರದಾಯದಂತೆಯೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಹೈದರಾಬಾದ್‌ನಲ್ಲಿ ಸಾನಿಯಾ-ಶೋಯೆಬ್ ಮದುವೆ ಅದ್ಧೂರಿಯಾಗಿ ನಡೆಯಿತು.
ಇದಾಗಿ ಎಂಟು ವರ್ಷಗಳ ಬಳಿಕ ಅಂದರೆ 2018ರಲ್ಲಿ ಈ ದಂಪತಿಗೆ ಇಜಾನ್ ಮಿರ್ಜಾ ಮಲಿಕ್ ಎನ್ನುವ ಗಂಡು ಮಗು ಜನಿಸಿತು. ಈಗ ಇಜಾನ್ ಮಿರ್ಜಾ ಮಲಿಕ್‌ಗೆ 5 ವರ್ಷವಾಗಿದ್ದು, ಸದ್ಯ ಅಮ್ಮ ಸಾನಿಯಾ ಮಿರ್ಜಾ ಜತೆಗಿದ್ದಾನೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.