Asianet Suvarna News Asianet Suvarna News

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ರೆಡಿ..!

ಟೀಂ ಇಂಡಿಯಾ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಕ್ರಿಕೆಟ್ ಸರಣಿಗೆ ರೆಡಿಯಾಗಿದೆ. ಈ ವರ್ಷ ರೋಹಿತ್ ಶರ್ಮಾ ಪಡೆ ಆಡ್ತಿರೋ ಮೊದಲ ಟೆಸ್ಟ್ ಸರಣಿ ಇದಾಗಿದೆ. ಜನವರಿ 25ರಿಂದ ಹೈದ್ರಾಬಾದ್​ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ಪ್ಲೇಯಿಂಗ್ ಇಲೆವೆನ್ ಆಯ್ಕೆ, ಕ್ಯಾಪ್ಟನ್​ ರೋಹಿತ್ ಆ್ಯಂಡ್ ಕೋಚ್​ ರಾಹುಲ್ ದ್ರಾವಿಡ್​ ಚಿಂತೆ ಹೆಚ್ಚಿಸಿದೆ. 

Team India ready for Test Series against England kvn
Author
First Published Jan 23, 2024, 5:19 PM IST | Last Updated Jan 23, 2024, 5:19 PM IST

ಬೆಂಗಳೂರು(ನ.23): ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಈ ಆಟಗಾರನಿಗೆ ಚಾನ್ಸ್ ಸಿಗೋದು ಅನುಮಾನವಿತ್ತು. ಆದ್ರೀಗ, ಪ್ಲೇಯಿಂಗ್​ ಇಲೆವೆಲ್ ಪ್ಲೇಸ್ ಫಿಕ್ಸ್ ಆಗಿದೆ. ಇನ್ನು ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದ್ರೆ, ಆಂಗ್ಲರ ವಿರುದ್ಧ ಈ ಆಟಗಾರ ಅಬ್ಬರಿಸಲೇಬೇಕಿದೆ. ಅಷ್ಟಕ್ಕೂ ನಾವ್ಯಾರ ಬಗ್ಗೆ ಹೇಳ್ತಿದ್ದೀವಿ..? ಅನ್ಕೊಂಡ್ರಾ..? ಈ ಸ್ಟೋರಿ ನೋಡಿ ನಿಮಿಗೆ ಗೊತ್ತಾಗುತ್ತೆ...!! 

ಲಯನ್ಸ್ ವಿರುದ್ಧದ ಶತಕ ಶ್ರಿರಾಮನಿಗೆ ಸಮರ್ಪಣೆ..!

ಟೀಂ ಇಂಡಿಯಾ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಕ್ರಿಕೆಟ್ ಸರಣಿಗೆ ರೆಡಿಯಾಗಿದೆ. ಈ ವರ್ಷ ರೋಹಿತ್ ಶರ್ಮಾ ಪಡೆ ಆಡ್ತಿರೋ ಮೊದಲ ಟೆಸ್ಟ್ ಸರಣಿ ಇದಾಗಿದೆ. ಜನವರಿ 25ರಿಂದ ಹೈದ್ರಾಬಾದ್​ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ಪ್ಲೇಯಿಂಗ್ ಇಲೆವೆನ್ ಆಯ್ಕೆ, ಕ್ಯಾಪ್ಟನ್​ ರೋಹಿತ್ ಆ್ಯಂಡ್ ಕೋಚ್​ ರಾಹುಲ್ ದ್ರಾವಿಡ್​ ಚಿಂತೆ ಹೆಚ್ಚಿಸಿದೆ. 

ಯೆಸ್, ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಸ್ಥಾನದಲ್ಲಿ ಕೆ.ಎಸ್ ಭರತ್ ಮತ್ತು ಧೃವ್ ಜುರೆಲ್ ಮಧ್ಯೆ ಕಾಂಪಿಟೇಷನ್ ಏರ್ಪಟ್ಟಿದೆ. ಈ ಇಬ್ಬರಲ್ಲಿ ಯಾರನ್ನ ಆಡಿಸ್ಬೇಕು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಆದ್ರೆ, ಈ ನಡುವೆ ಕೆ.ಎಸ್ ಭರತ್​ ಭಾರತ A ತಂಡದ ಪರ ಭರ್ಜರಿ ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭರತ್​ ಸೆಂಚುರಿ ಬಾರಿಸಿದ್ದಾರೆ. 165 ಎಸೆತಗಳಲ್ಲಿ ಆ ಮೂಲಕ ಇಂಗ್ಲೆಂಡ್​ ವಿರುದ್ಧದ ಮೊದಲ ಟಸ್ಟ್​​​ನ ಪ್ಲೇಯಿಂಗ್ ಇಲೆವೆನ್​ ಸ್ಥಾನಕ್ಕೆ ಟವಲ್ ಹಾಕಿದ್ದಾರೆ. ಇನ್ನು ತಮ್ಮ ಶತಕವನ್ನ ಭರತ್ ಪ್ರಭು ಶ್ರೀರಾಮಚಂದ್ರನಿಗೆ ಅರ್ಪಿಸಿದ್ದಾರೆ. 

ಇಂಡಿಯಾ-ಇಂಗ್ಲೆಂಡ್ ಟೆಸ್ಟ್ ಸಮರ: ಕೊಹ್ಲಿ ಅಲಭ್ಯತೆ ಇಂಗ್ಲೆಂಡ್​ ಪಾಲಿಗೆ ವರ..!

ವಿಕೆಟ್ ಕೀಪಿಂಗ್ಸ್‌ನಲ್ಲಿ ಓಕೆ, ಬ್ಯಾಟಿಂಗ್‌ನಲ್ಲಿ ಫ್ಲಾಪ್ ಶೋ..!

ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಎಂಟ್ರಿ  ನೀಡಿದ ಭರತ್, ಈವರೆಗು ಹೇಳಿಕೊಳ್ಳೋ ಪ್ರದರ್ಶನ ನೀಡಿಲ್ಲ. ವಿಕೆಟ್ ಕೀಪಿಂಗ್​ನಲ್ಲಿ ಮಾತ್ರ ಮಿಂಚುತ್ತಿದ್ದಾರೆ. ಬ್ಯಾಟಿಂಗ್​​ನಲ್ಲಿ ಮಾತ್ರ ಅಟ್ಟರ್ ಫ್ಲಾಫ್ ಶೋ ನೀಡ್ತಿದ್ದಾರೆ. ಈವರೆಗು 5 ಪಂದ್ಯಗಳನ್ನಾಡಿರೋ ಭರತ್​, ಕೇವಲ 18.42ರ ಸರಾಸರಿಯಲ್ಲಿ 129 ರನ್ ​ಗಳಿಸಿದ್ದಾರೆ. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಕೈಬಿಡಲಾಗಿತ್ತು. ಆದ್ರೀಗ, ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಸಾಮರ್ಥ್ಯ ಪ್ರೂವ್ ಮಾಡಿಕೊಳ್ಳೋಕೆ ಲಾಸ್ಟ್​ ಚಾನ್ಸ್..?

ಯೆಸ್, ಇದೇ ಮೊದಲ ಬಾರಿ ಟೀಂ ಇಂಡಿಯಾಗೆ ಆಯ್ಕೆಯಾಗಿರೋ ಧೃವ್​, ಬ್ಯಾಟಿಂಗ್​ & ಬೌಲಿಂಗ್​ ಎರಡರಲ್ಲೂ ಮಿಂಚಬಲ್ಲರು. ಫಸ್ಟ್ ಕ್ಲಾಸ್ ಅಂಕಿಅಂಶಗಳು ವಿಚಾರದಲ್ಲಿ ಭರತ್‌ಗಿಂತ ಧೃವ್ ಮುಂದಿದ್ದಾರೆ. ಈವರೆಗು 19 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ, 46.47ರ ಸರಾಸರಿಯಲ್ಲಿ 790 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ 1 ಶತಕ ಮತ್ತು 5 ಅರ್ಧಶತಕ ಸೇರಿವೆ. ವಿಕೆಟ್ ಕೀಪಿಂಗ್​ನಲ್ಲೂ ಧೃವ್​ ಬೆಸ್ಟ್ ಎನಿಸಿದ್ದಾರೆ. 

ಭರತ್ ಮತ್ತು ಧೃವ್ ಜೊತೆಗೆ ಕೆ.ಎಲ್ ರಾಹುಲ್ ಕೂಡ ವಿಕೆಟ್ ಕೀಪರ್ ಆಪ್ಷನ್ ಆಗಿದ್ದಾರೆ. ಆದ್ರೆ, ರಾಹುಲ್​ಗೆ ಸ್ಪಿನ್ ಬೌಲಿಂಗ್​ನಲ್ಲಿ ಕೀಪಿಂಗ್ ಮಾಡಿದ ಅನುಭವವಿಲ್ಲ. ಇದರಿಂದ ಒಟ್ಟಿನಲ್ಲಿ  ವಿಕೆಟ್ ಕೀಪರ್ ಸ್ಥಾನಕ್ಕಾಗಿ ಧೃವ್ ಮತ್ತು ಭರತ್ ಮಧ್ಯೆ ಪೈಪೋಟಿ ಜೋರಾಗಿದೆ. ಆದ್ರೆ, ಅನುಭವದ ಆಧಾರದ ಮೇಲೆ ಕೆ.ಎಸ್ ಭರತ್‌ಗೆ ಚಾನ್ಸ್ ಸಿಗೋ ಸಾಧ್ಯತೆಯಿದೆ. ಒಂದು ವೇಳೆ ಈ ಬಾರಿಯೂ ಭರತ್ ತಮ್ಮ ತಾಕತ್ತೂ ಪ್ರೂವ್ ಮಾಡದೇ ಇದ್ದರೆ, ಟೀಮ್ ಇಂಡಿಯಾದ ಡೋರ್ ಕಂಪ್ಲೀಟ್ ಕ್ಲೋಸ್ ಪಕ್ಕಾ..!

ಸ್ಪೋರ್ಟ್ಸ್​ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

Latest Videos
Follow Us:
Download App:
  • android
  • ios