RCB ಸೋಲಿಸಿ ಕಪ್ ಗೆದ್ದ ನಾಯಕ ಅನ್‌ಸೋಲ್ಡ್; ಈತ 3 ಆರೆಂಜ್ ಕ್ಯಾಪ್ ವಿನ್ನರ್!

ಐಪಿಎಲ್ ಮೆಗಾ ಹರಾಜಿನಲ್ಲಿ ಆಸೀಸ್ ಅನುಭವಿ ಬ್ಯಾಟರ್ ಡೇವಿಡ್ ವಾರ್ನರ್ ಅನ್‌ಸೋಲ್ಡ್ ಆಗಿದ್ದು, ಅವರ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ

End of an era for IPL legend David Warner kvn

ಬೆಂಗಳೂರು: ಐಪಿಎಲ್‌ನ ಮೆಗಾ ಸ್ಟಾರ್‌ ಎಂದೇ ಕರೆಸಿಕೊಳ್ಳುವ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಈ ಬಾರಿ ಹರಾಜಿನಲ್ಲಿ ಬಿಕರಿಯಾಗದೆ ಉಳಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ವಾರ್ನರ್‌ರ ಐಪಿಎಲ್‌ ವೃತ್ತಿಬದುಕಿಗೂ ತೆರೆ ಬಿದ್ದಿದೆ.

2009ರಿಂದ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಡೇವಿಡ್ ವಾರ್ನರ್‌ 184 ಪಂದ್ಯಗಳಲ್ಲಿ 6,565 ರನ್‌ ಕಲೆಹಾಕಿದ್ದಾರೆ. 4 ಶತಕ, 62 ಅರ್ಧಶತಕ ಸಿಡಿಸಿದ್ದಾರೆ. ಡೇವಿಡ್ ವಾರ್ನರ್ 215, 2017 ಹಾಗೂ 2019ರ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸುವ ಮೂಲಕ ಒಟ್ಟು ಮೂರು ಬಾರಿ ಐಪಿಎಲ್ ಆರೆಂಜ್ ಕ್ಯಾಪ್ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಡೇವಿಡ್ ವಾರ್ನರ್, ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಲು ಮನಸ್ಸು ಮಾಡಿರಲಿಲ್ಲ.

ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ-ಮುಂಬೈ ಮಾಲೀಕರ ಒಳ ಒಪ್ಪಂದ? ಫ್ರಾಂಚೈಸಿ ಮೇಲೆ ಬೆಂಗಳೂರು ಫ್ಯಾನ್ಸ್ ಆಕ್ರೋಶ

ಡೆಲ್ಲಿ ತಂಡ ಸೇರುವ ಮುನ್ನ ಡೇವಿಡ್ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಚಾಂಪಿಯನ್ ಆಟಗಾರ ಎನಿಸಿಕೊಂಡಿದ್ದರು. ಆರೆಂಜ್‌ ಆರ್ಮಿಯ ನಾಯಕರಾಗಿ ವಾರ್ನರ್‌ 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು.

2ನೇ ದಿನ ಆರಂಭಿಕ 8 ಆಟಗಾರರ ಪೈಕಿ 6 ಮಂದಿ ಅನ್‌ಸೋಲ್ಡ್‌!

2ನೇ ದಿನದ ಹರಾಜು ‘ಅನ್‌ಸೋಲ್ಡ್‌’ ಮೂಲಕ ಆರಂಭಗೊಂಡಿತು. ಸೋಮವಾರ ಹರಾಜು ಪಟ್ಟಿಯಲ್ಲಿ ಮೊದಲ ಹೆಸರು ಬಂದಿದ್ದು ಕೇನ್‌ ವಿಲಿಯಮ್ಸನ್‌ರದ್ದು. ಆದರೆ ನ್ಯೂಜಿಲೆಂಡ್‌ ದಿಗ್ಗಜ ಬ್ಯಾಟರ್‌ ಅನ್ನು ಕೊಂಡುಕೊಳ್ಳಲು ಯಾವ ತಂಡವೂ ಮನಸ್ಸು ಮಾಡಲಿಲ್ಲ. ಆ ಬಳಿಕ ಹರಾಜುಗಾರ್ತಿ ಕೂಗಿದ 7 ಮಂದಿಯ ಪೈಕಿ ಐವರು ಅನ್‌ಸೋಲ್ಡ್‌ ಆದರು. ಗ್ಲೆನ್‌ ಫಿಲಿಪ್ಸ್‌, ರಹಾನೆ, ಮಯಾಂಕ್‌, ಪೃಥ್ವಿ ಶಾ, ಶಾರ್ದೂಲ್‌ ಠಾಕೂರ್‌ ಬಿಕರಿಯಾಗಲಿಲ್ಲ.

13ನೇ ಸರಿ ಹರಾಜಿನಲ್ಲಿ ಬಿಕರಿಯಾದ ಉನಾದ್ಕತ್‌!

ಜಯ್‌ದೇವ್‌ ಉನಾದ್ಕತ್‌ ಐಪಿಎಲ್‌ ಹರಾಜಿನಲ್ಲಿ 13ನೇ ಬಾರಿಗೆ ಬಿಕರಿಯಾದರು. ಸನ್‌ರೈಸರ್ಸ್‌ ಹೈದರಾಬಾದ್‌ ₹1 ಕೋಟಿಗೆ ಖರೀದಿ ಮಾಡಿತು. ಐಪಿಎಲ್‌ನಲ್ಲಿ ಅತಿಹೆಚ್ಚು ಬಾರಿ ಹರಾಜಾದ ಆಟಗಾರ ಎನ್ನುವ ದಾಖಲೆ ಉನಾದ್ಕತ್‌ ಹೆಸರಿನಲ್ಲಿದೆ. ಉಳಿದ್ಯಾವ ಆಟಗಾರರು 7ಕ್ಕಿಂತ ಹೆಚ್ಚು ಹರಾಜಿನಲ್ಲಿ ಬಿಕರಿಯಾಗಿಲ್ಲ.

ಆರ್‌ಸಿಬಿ ಗುರಿ ಐಪಿಎಲ್ ಕಪ್ ಗೆಲ್ಲೋದಲ್ಲ, ಹಣ ಗಳಿಸೋದು: ಕನ್ನಡಿಗರ ಭಾವನೆಗಳ ಜೊತೆ ಆಡ್ತಾ ಇದ್ಯಾ ಫ್ರಾಂಚೈಸಿ?

ಹರಾಜಿಗೇ ಬರದ 43ರ ಜಿಮ್ಮೆ ಆ್ಯಂಡರ್‌ಸನ್‌ ಹೆಸ್ರು!

ಇದೇ ಮೊದಲ ಬಾರಿಗೆ ಐಪಿಎಲ್‌ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದ ಇಂಗ್ಲೆಂಡ್‌ನ ಮಾಜಿ ವೇಗಿ, 43 ವರ್ಷದ ಜೇಮ್ಸ್‌ ಅ್ಯಂಡರ್‌ಸನ್‌ಗೆ ನಿರಾಸೆ ಉಂಟಾಯಿತು. ಆ್ಯಂಡರ್‌ಸನ್‌ರ ಹೆಸರು ಹರಾಜಿಗೇ ಬರಲಿಲ್ಲ. ಮೊದಲು 1500ಕ್ಕೂ ಹೆಚ್ಚು ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 577 ಆಟಗಾರರನ್ನು ಹರಾಜಿನ ಅಂತಿಮ ಪಟ್ಟಿಗೆ ಸೇರಿಸಲಾಗಿತ್ತು. ಹರಾಜಿನಲ್ಲಿ ಫ್ರಾಂಚೈಸಿಗಳು ಆ್ಯಂಡರ್‌ಸನ್‌ರ ಹೆಸರನ್ನು ಕೊನೆಯ ಸುತ್ತಿನಲ್ಲೂ ಸೂಚಿಸದೆ ಇದ್ದ ಕಾರಣ, ಅವರ ಹೆಸರನ್ನು ಹರಾಜಿಗೆ ತೆಗೆದುಕೊಳ್ಳಲಿಲ್ಲ.

Latest Videos
Follow Us:
Download App:
  • android
  • ios