ಶನಿವಾರ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ ಪಂದ್ಯವಾಡಲು ಭಾರತ ಅಣಿಯಾಗಿದೆ. ಇದರ ನಡುವೆ ಡೆಂಗ್ಯುದಿಂದ ಬಳಲುತ್ತಿರುವ ಶುಭ್‌ಮನ್‌ ಗಿಲ್‌ ಪಂದ್ಯಕ್ಕೆ ಲಭ್ಯರಿದ್ದಾರೆಯೇ ಎನ್ನುವ ಪ್ರಶ್ನೆಗೆ ಸ್ವತಃ ಕ್ಯಾಪ್ಟನ್‌ ರೋಹಿತ್‌ ಶರ್ಮ ಉತ್ತರ ನೀಡಿದ್ದಾರೆ.

ಅಹಮದಾಬಾದ್‌ (ಅ.13): ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್ ಶರ್ಮ, ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಶುಭ್‌ಮನ್‌ ಗಿಲ್‌ ಡೆಂಗ್ಯುದಿಂದ ಚೇತರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಶನಿವಾರ ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಬ್ಲಾಕ್‌ಬಸ್ಟರ್‌ ಪಂದ್ಯಕ್ಕೆ ಅವರು ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ರೋಹಿತ್‌ ಶರ್ಮ ತಿಳಿಸಿದ್ದಾರೆ. ಡೆಂಗ್ಯು ಕಾರಣದಿಂದಾಗಿ ರಕ್ತದಲಲ್ಲಿ ಪೇಟ್ಲೆಟ್ಸ್‌ ಕಡಿಮೆಯಾದ ಕಾರಣ, ಶುಭ್‌ಮನ್‌ ಗಿಲ್‌ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರಿಂದಾಗಿ ಟೀಂ ಇಂಡಿಯಾದ ಮೊದಲ ಎರಡು ಪಂದ್ಯಗಳಿಗೆ ಶುಭ್‌ಮನ್‌ ಗಿಲ್‌ ಅವರು ಲಭ್ಯವಾಗಿರಲಿಲ್ಲ. ಆದರೆ, ಪಾಕಿಸ್ತಾನದ ಎದುರಿನ ಪಂದ್ಯಕ್ಕೆ ಫಿಟ್‌ ಆಗುವ ನಿಟ್ಟಿನಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಕಳೆದ ಕೆಲವು ದಿನಗಳಿಂದ ದೊಡ್ಡ ಮಟ್ಟದಲ್ಲಿ ಚೇತರಿಕೆ ಕಂಡಿದ್ದಾರೆ. ಹಾಗಾಗಿ ಟೀಂ ಇಂಡಿಯಾದ ಮೂರನೇ ಪಂದ್ಯಕ್ಕೆ ಅವರು ಲಭ್ಯರಾಗುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.

ಶನಿವಾರ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನ ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಗೆ ಈ ಕುರಿತಾದ ಪ್ರಶ್ನೆಗಳನ್ನೇ ಕೇಳಲಾಯಿತು. ಶುಭ್‌ಮನ್‌ ಗಿಲ್‌ ಫಿಟ್ನೆಸ್‌ ಹೇಗಿದೆ, ಅವರು ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆಯಲ್ಲಿದ್ದೀರಾ ಎನ್ನವ ಪ್ರಶ್ನೆಗೆ, 'ಶೇ. 99ರಷ್ಟು ಅವರು ಪಂದ್ಯಕ್ಕೆ ಲಭ್ಯರಿದ್ದಾರೆ. ಶನಿವಾರ ಈ ಬಗ್ಗೆ ಸ್ಪಷ್ಟವಾದ ನಿರ್ಧಾರವನ್ನು ಮಾಡಲಿದ್ದೇವೆ' ಎಂದು ರೋಹಿತ್‌ ಶರ್ಮ ಹೇಳಿದ್ದಾರೆ.

'ನಾನೀಗ ಬದಲಾಗಿದ್ದೇನೆ..' ಭಾರತೀಯರ ಕ್ಷಮೆ ಕೋರಿದ ಪಾಕಿಸ್ತಾನದ ನಿರೂಪಕಿ ಜೈನಾಬ್‌ ಅಬ್ಬಾಸ್‌!

World Cup 2023: ನಿರೂಪಣೆಗಾಗಿ ಬಂದಿದ್ದ ಪಾಕ್‌ ಸುಂದರಿ ಭಾರತದಿಂದ ಗಡಿಪಾರು!