WI vs IND ಭಾರತಕ್ಕೆ ಸರಣಿ ವೈಟ್‌ವಾಶ್ ಗುರಿ, 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಗೆದ್ದ ಭಾರತಕ್ಕೆ ಇದೀಗ 2ನೇ ಸವಾಲು. ಇಂದು 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಭಾರತ ಹಾಗೂ ವೆಸ್ಟ್ ಇಂಡೀಸ್ ಸಜ್ಜಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ಭಾರತದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.
ಪೋರ್ಟ್ ಆಫ್ ಸ್ಪೇನ್(ಜು.20) ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಟೀಂ ಇಂಡಿಯಾ ಇದೀಗ 2ನೇ ಪಂದ್ಯ ಗೆದ್ದ ವೈಟ್ ವಾಶ್ ಗೆಲುವಿಗೆ ಹೊಂಚು ಹಾಕುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡಲಾಗಿದೆ. ಶಾರ್ದೂಲ್ ಠಾಕೂರ್ ಗಾಯಗೊಂಡಿದ್ದಾರೆ. ಹೀಗಾಗಿ ಮುಕೇಶ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮುಕೇಶ್ ಕುಮಾರ್ ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್, ಆರ್ ಅಶ್ವಿನ್, ಜಯದೇವ್ ಉನಾದ್ಕಟ್, ಮುಕೇಶ್ ಕುಮಾರ್, ಮೊಹಮ್ಮದ್ ಸಿರಾಜ್
Asia Cup 2023: 15 ದಿನಗಳ ಅಂತರದಲ್ಲಿ ಇಂಡೋ-ಪಾಕ್ 3 ಬಾರಿ ಮುಖಾಮುಖಿ? ಇಲ್ಲಿದೆ ಲೆಕ್ಕಾಚಾರ
2ನೇ ಟೆಸ್ಟ್, ಭಾರತ ಹಾಗೂ ವಿಂಡೀಸ್ ನಡುವಿನ 100ನೇ ಟೆಸ್ಟ್ ಪಂದ್ಯವಾಗಲಿದೆ. ಭಾರತ ತಂಡವು ಇಂಗ್ಲೆಂಡ್ ವಿರುದ್ಧ 131, ಆಸ್ಟ್ರೇಲಿಯಾ ವಿರುದ್ಧ 107 ಟೆಸ್ಟ್‌ಗಳನ್ನಾಡಿದ್ದು, 3ನೇ ರಾಷ್ಟ್ರದ ವಿರುದ್ಧ 100 ಟೆಸ್ಟ್‌ಗಳನ್ನು ಪೂರೈಸಲಿದೆ.ಭಾರತ ಹಾಗೂ ವಿಂಡೀಸ್ ಮೊದಲ ಬಾರಿಗೆ ಟೆಸ್ಟ್ ಸರಣಿಯಲ್ಲಿ ಎದುರಾಗಿದ್ದು 1948-49ರಲ್ಲಿ. ವಿಂಡೀಸ್ ಭಾರತ ಪ್ರವಾಸ ಕೈಗೊಂಡಿತ್ತು. ಉಭಯ ದೇಶಗಳ ನಡುವಿನ ಮೊದಲ ಟೆಸ್ಟ್‌ಗೆ ದೆಹಲಿ ಆತಿಥ್ಯ ವಹಿಸಿತ್ತು. ಭಾರತ ತಂಡವನ್ನು ಲಾಲಾ ಅಮರ್‌ನಾಥ್ ಮುನ್ನಡೆಸಿದರೆ, ವಿಂಡೀಸ್‌ಗೆ ಜಾನ್ ಗೊಡ್ಡಾರ್ಡ್ ನಾಯಕರಾಗಿದ್ದರು. 5 ಪಂದ್ಯಗಳ ಸರಣಿಯನ್ನು ವಿಂಡೀಸ್ 1-0 ಅಂತರದಲ್ಲಿ ಗೆದ್ದಿತ್ತು.
ಭಾರತ ತಂಡ ಮೊದಲ ಬಾರಿಗೆ ವಿಂಡೀಸ್ ಪ್ರವಾಸ ಕೈಗೊಂಡಿದ್ದು, 1952-53ರಲ್ಲಿ. 5 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ವಿಜಯ್ ಹಜಾರೆ ಮುನ್ನಡೆಸಿದರೆ, ಆತಿಥೇಯ ವಿಂಡೀಸ್‌ಗೆ ಜೆಫ್ರಿ ಸ್ಟೂಲ್‌ಮೇಯರ್ ನಾಯಕರಾಗಿದ್ದರು. ಸರಣಿ 1-0ಯಲ್ಲಿ ವಿಂಡೀಸ್ ಪಾಲಾಗಿತ್ತು.
ಮುಂಬೈ ಪ್ಲೇಯರ್ಸ್ ಬಳಿಯಿದೆ ಅದ್ಭುತ ಟಾಲೆಂಟ್, ಆದ್ರೆ ಮುಂಬೈಕರ್ಸ್ ಬಳಿಯಿಲ್ಲ ಉತ್ತಮ ಫಿಟ್ನೆಸ್..!
ಭಾರತ ವಿರುದ್ಧ ವಿಂಡೀಸ್ ಕೊನೆ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿದ್ದು 2002ರಲ್ಲಿ. ಭಾರತ ಕೈಗೊಂಡಿದ್ದ ಪ್ರವಾಸದಲ್ಲಿ ನಡೆದಿದ್ದ 5 ಪಂದ್ಯಗಳ ಪೈಕಿ ವಿಂಡೀಸ್ 2ರಲ್ಲಿ ಗೆದ್ದರೆ, ಭಾರತ 1 ಪಂದ್ಯ ಜಯಿಸಿತ್ತು. 2-1ರಲ್ಲಿ ವಿಂಡೀಸ್ ಸರಣಿ ತನ್ನದಾಗಿಸಿಕೊಂಡಿತ್ತು. ಆ ಬಳಿಕ ಉಭಯ ದೇಶಗಳ ನಡುವೆ 8 ಟೆಸ್ಟ್ ಸರಣಿಗಳು ನಡೆದಿದ್ದು, 8ರಲ್ಲೂ ಭಾರತವೇ ಗೆದ್ದಿದೆ. 8 ಸರಣಿಗಳಲ್ಲಿ ಒಟ್ಟು 23 ಪಂದ್ಯಗಳು ನಡೆದಿದ್ದು, ಭಾರತ 14ರಲ್ಲಿ ಗೆಲುವು ಸಾಧಿಸಿ ಇನ್ನುಳಿದ 7 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.