Asianet Suvarna News Asianet Suvarna News

ಮುಂಬೈ ಪ್ಲೇಯರ್ಸ್ ಬಳಿಯಿದೆ ಅದ್ಭುತ ಟಾಲೆಂಟ್, ಆದ್ರೆ ಮುಂಬೈಕರ್ಸ್ ಬಳಿಯಿಲ್ಲ ಉತ್ತಮ ಫಿಟ್ನೆಸ್..!

ಟ್ಯಾಲೆಂಟ್‌ ಇರುವ ಮುಂಬೈ ಆಟಗಾರರಿಗೆ ಫಿಟ್ನೆಸ್‌ ಸಮಸ್ಯೆ
ಈಗಲೂ ಟೀಂ ಇಂಡಿಯಾದಲ್ಲಿ ನಾಲ್ಕೈದು ಆಟಗಾರರಿದ್ದಾರೆ
ಅಂಡರ್-19 ವಿಶ್ವಕಪ್ ಗೆಲ್ಲಿಸಿಕೊಟ್ಟವನಿಗಿಲ್ಲ ಫಿಟ್ನೆಸ್

Prithvi Shaw to Sarfaraz Khan Mumbai Cricketers And Fitness Issues all cricket fans need to know kvn
Author
First Published Jul 20, 2023, 5:21 PM IST

ಬೆಂಗಳೂರು(ಜು.20) ಮುಂಬೈ ತಂಡ. ದೇಶಿ ಕ್ರಿಕೆಟ್​ ರಾಜ. ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಮುಂಬೈ ಟೀಂ ಮಾಡಿದಷ್ಟು ದಾಖಲೆ, ಗೆದ್ದಷ್ಟು ಟ್ರೋಫಿಯನ್ನ ಮತ್ತೆ ಯಾವ ತಂಡವೂ ಗೆದ್ದಿಲ್ಲ. ಮುಂಬೈ ದಾಖಲೆಯ 41 ಬಾರಿ ರಣಜಿ ಟ್ರೋಫಿ ಗೆದ್ದಿದೆ. 14 ಇರಾನಿ ಟ್ರೋಫಿ, 4 ವಿಜಯ್ ಹಜಾರೆ, 1 ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನೂ ಗೆದ್ದುಕೊಂಡಿದೆ. ಭಾರತದಲ್ಲಿ ಕ್ರಿಕೆಟ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಭಾರತೀಯ ಕ್ರಿಕೆಟ್​ನಲ್ಲಿ ಮುಂಬೈ ಲಾಭಿ ಇದ್ದೇ ಇದೆ. ಒಬ್ಬಲ್ಲ ಒಬ್ಬ ಮುಂಬೈ ಆಟಗಾರ ಟೀಂ ಇಂಡಿಯಾದಲ್ಲಿ ಇದ್ದೇ ಇರ್ತಾನೆ. ಸದ್ಯ ಟೀಂ ಇಂಡಿಯಾದಲ್ಲಿ ನಾಲ್ಕೈದು ಆಟಗಾರರು ಮುಂಬೈನವರಿದ್ದಾರೆ.

ಮುಂಬೈ ಆಟಗಾರರ ಬಳಿ ಅದ್ಭುತ ಟಾಲೆಂಟ್ ಇದೆ. ಅವರ ಆಟವನ್ನೊಮ್ಮೆ ನೋಡಿದ್ರೆ ಕ್ರಿಕೆಟರ್ ಅಂದ್ರೆ ಹೀಗೆ ಇರ್ಬೇಕು ಅನಿಸುತ್ತೆ. ಭಾರತದ ಕ್ರಿಕೆಟ್ ತಂಡಕ್ಕೆ ಮುಂಬೈ ಸಾಕಷ್ಟು ಆಟಗಾರರನ್ನ ಕೊಡುಗೆಯಾಗಿ ನೀಡಿದೆ. ಸುನಿಲ್ ಗವಾಸ್ಕರ್​ನಿಂದ ಹಿಡಿದು, ಸಚಿನ್ ತೆಂಡುಲ್ಕರ್, ಈಗಿನ ಯಶಸ್ವಿ ಜೈಸ್ವಾಲ್​ವರೆಗೆ ಎಲ್ಲರೂ ಮುಂಬೈ ಕ್ರಿಕೆಟರ್​ಗಳೇ. ಆದ್ರೆ ಅದ್ಭುತ ಟಾಲೆಂಟ್ ಹೊಂದಿರುವ ಮುಂಬೈಕರ್​ಗೆ ಅದ್ಭುತ ಫಿಟ್ನೆಸ್ ಹೊಂದಿರಲ್ಲ. ಇದೇ ಅವರಿಗೆ ಮಾರಕವಾಗ್ತಿದೆ. ಸದ್ಯ ಟೀಂ ಇಂಡಿಯಾದಲ್ಲಿರುವ, ಆಯ್ಕೆಯಾಗಲು ರೇಸ್​ನಲ್ಲಿರುವ ಮಂಬೈ ಆಟಗಾರರೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.

'ಒಂದು ಶನಿವಾರ ನನಗೆ ಕೊಡ್ತಿಯಾ..?': ಪತ್ನಿ ಧನಶ್ರೀನ ಹೀಗೆ ಪ್ರಪೋಸ್ ಮಾಡಿ ಪಟಾಯಿಸಿದ ಚಹಲ್!

ಅಂಡರ್-19 ವಿಶ್ವಕಪ್ ಗೆಲ್ಲಿಸಿಕೊಟ್ಟವನಿಗಿಲ್ಲ ಫಿಟ್ನೆಸ್:

ಭಾರತಕ್ಕೆ ಅಂಡರ್-19 ವಿಶ್ವಕಪ್ ಗೆಲ್ಲಿಸಿಕೊಟ್ಟ ಪೃಥ್ವಿ ಶಾ, ಡೊಮೆಸ್ಟಿಕ್ ಕ್ರಿಕೆಟ್​​ನಲ್ಲೂ ಮುಂಬೈ ಪರ ರನ್ ಹೊಳೆ ಹರಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಐದು ಟೆಸ್ಟ್, 6 ಒನ್​ಡೇ ಮತ್ತು ಏಕೈಕ ಟಿ20 ಪಂದ್ಯವನ್ನೂ ಆಡಿದ್ದಾರೆ. ಆದ್ರೆ 2018ರಲ್ಲಿ ಟೀಂ ಇಂಡಿಯಾಗೆ ಎಂಟ್ರಿಯಾಗಿ 2021ರಲ್ಲಿ ಎಕ್ಸೀಟ್ ಆಗಿರುವ ಪೃಥ್ವಿ ಶಾ, ಮತ್ತೆ ಕಮ್​ಬ್ಯಾಕ್ ಮಾಡಲು ಪರದಾಡುತ್ತಿದ್ದಾರೆ. ದೇಶಿ ಕ್ರಿಕೆಟ್​ನಲ್ಲಿ ರನ್ ಹೊಡೆಯುತ್ತಿದ್ದರೂ ಟೀಂ ಇಂಡಿಯಾಗೆ ಸೆಲೆಕ್ಟ್ ಆಗ್ತಿಲ್ಲ. ಕಾರಣ ಫಿಟ್ನೆಸ್. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡುವಷ್ಟು ಫಿಟ್ನೆಸ್ ಇಲ್ಲ ಅನ್ನೋ ಕಾರಣಕ್ಕೆ ಶಾ ಅವರನ್ನ ಆಯ್ಕೆ ಮಾಡ್ತಿಲ್ಲ.

ತ್ರಿಶತಕ ವೀರನಿಗೆ ಫಿಟ್ನೆಸ್ ಪ್ರಾಬ್ಲಂ..!

ಎರಡು ಅಂಡರ್-19 ವಿಶ್ವಕಪ್ ಆಡಿದ ಏಕೈಕ ಆಟಗಾರ ಎನಿಸಿಕೊಂಡಿರುವ ಸರ್ಫರಾಜ್ ಖಾನ್, ಮುಂಬೈ ಪರ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ರನ್ ಶಿಖರವೇರಿದ್ದಾರೆ. ರಣಜಿ ಟ್ರೋಫಿಯಲ್ಲಿ ಅಜೇಯ ತ್ರಿಶತಕ ಸಿಡಿಸಿದ್ದಾರೆ. ಮೂರು ಮಾದರಿ ಕ್ರಿಕೆಟ್​ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದ್ರೂ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿಲ್ಲ. ಒನ್ಸ್ ಎಗೈನ್ ಇಂಟರ್ ನ್ಯಾಷನಲ್ ಲೆವೆಲ್​​​​​​​​​​​​​​​​​​​​​​​​​​​​​​​​​​​​​​​​​​ನಲ್ಲಿ ಫಿಟ್ನೆಸ್ ಇಲ್ಲ. ಇದೊಂದೇ ಕಾರಣಕ್ಕೆ ಸರ್ಫರಾಜ್ ಇದುವರೆಗೂ ಟೀಂ ಇಂಡಿಯಾಗೆ ಆಯ್ಕೆಯಾಗಿಲ್ಲ.

ಭಾರತದಲ್ಲಿ ಮಾತ್ರ ಶುಭ್‌ಮನ್‌ ಗಿಲ್ ಆರ್ಭಟನಾ..?

ಟೀಂ ಇಂಡಿಯಾಗೆ ಹೋದ ಪುಟ್ಟ ಬಂದ ಪುಟ್ಟ

ಇದು ಮುಂಬೈಕರ್ ಶ್ರೇಯಸ್ ಅಯ್ಯರ್ ಕಥೆ. ಮೂರು ಮಾದರಿ ಟೀಂ  ಇಂಡಿಯಾದಲ್ಲಿ ಸ್ಥಾನವಿದೆ. ಆದ್ರೂ ಸತತವಾಗಿ ಭಾರತದ ಪರ ಆಡಿದ ಉದಾಹರಣೆಯೇ ಇಲ್ಲ. ಒಂದೆರಡು ಸರಣಿ ಆಡ್ತಾರೆ. ಇಂಜುರಿಯಿಂದ ಹೊರಗುಳಿಯುತ್ತಾರೆ. ಅದ್ಭುತ ಬ್ಯಾಟರ್​. ನಾಯಕತ್ವದ ಗುಣಗಳೂ ಇವೆ. ಆದ್ರೆ ಫಿಟ್ನೆಸ್ ಮಾತ್ರ ಇಲ್ಲ. ಸದ್ಯ ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದಾರೆ. ಇಂಜುರಿಯಾಗಿ 2021, 2022ರ ಟಿ20 ವಿಶ್ವಕಪ್, 2023ರ ಟೆಸ್ಟ್ ವಿಶ್ವಕಪ್​ಗಳನ್ನ ಮಿಸ್ ಮಾಡಿಕೊಂಡಿದ್ದಾರೆ.

ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಸಹ ಮುಂಬೈನವರೇ. ಅವರ ಫಿಟ್ನೆಸ್ ಬಗ್ಗೆ ನಿಮಗೆ ಹೆಚ್ಚಾಗಿ ಹೇಳಬೇಕಿಲ್ಲ. ಫಿಟ್ನೆಸ್ ಸಮಸ್ಯೆಯಿಂದ ಸಾಕಷ್ಟು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈಗಲೂ ವಿಕೆಟ್ ಮಧ್ಯೆ ಓಡಲು ಪರದಾಡುತ್ತಾರೆ. ಒಟ್ನಲ್ಲಿ ಮುಂಬೈ ಪ್ಲೇಯರ್​​ಗೆ ಟಾಲೆಂಟ್ ಇದ್ರೂ ಫಿಟ್ನೆಸ್ ಸಮಸ್ಯೆ ಅವರಿಗೆ ಮಾರಕವಾಗ್ತಿದೆ. ಮುಂದಿನ ದಿನಗಳಲ್ಲಿ ಆಟದ ಜೊತೆ ಫಿಟ್ನೆಸ್ ಕಡೆಯೂ ಗಮನ ಹರಿಸಿದ್ರೆ ಒಳಿತು.

Follow Us:
Download App:
  • android
  • ios