2ನೇ ಏಕದಿನ: ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ವೆಸ್ಟ್ ಇಂಡೀಸ್, ಇಲ್ಲಿದೆ ಕಾರಣ!

ಭಾರತ ವಿರುದ್ದದ  2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದೆ. ವಿಂಡೀಸ್ ಆಟಗಾರರು ಕಪ್ಪು ಪಟ್ಟಿ ಧರಿಸಲು ಕಾರಣವೇನು? ಇಲ್ಲಿದೆ.

West Indies players wearing black armbands against team india in 2nd odi

ವಿಶಾಖಪಟ್ಟಣಂ(ಡಿ.18): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ ಆರಂಭಗೊಂಡಿದ್ದು ತೀವ್ರ ಕುತೂಹಲ ಕೆರಳಿಸಿದೆ. ಟೀಂ ಇಂಡಿಯಾ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ವಿಶಾಖಪಟ್ಟಣಂ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಇಳಿದ ವೆಸ್ಟ್ ಇಂಡೀಸ್ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ಇದರ ಕಾರಣವೂ ಬಹಿರಂಗವಾಗಿದೆ.

ಇದನ್ನೂ ಓದಿ: ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ

ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟಿಗ ಬಸಿಲ್ ಬುಚರ್(86) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಸಿಲ್ ಡಿ.17ರ ಬೆಳಗ್ಗೆ ನಿಧನರಾಗಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಟ್ವಿಟರ್ ಮೂಲಕ ಬಿಸಿಲ್ ನಿಧನ ವಾರ್ತೆಯನ್ನು ಖಚಿತಪಡಿಸಿತ್ತು. ಬಸಿಲ್ ನಿಧನರಾದ ಕಾರಣಕ್ಕೆ ವಿಂಡೀಸ್ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದೆ.

 

ಇದನ್ನೂ ಓದಿ:  ವಿಂಡೀಸ್ ನಿದ್ದೆಗೆಡಿಸಿದ ಟೀಂ ಇಂಡಿಯಾದ ಈ ಬ್ಯಾಟ್ಸ್‌ಮನ್

ಭಾರತದ ವಿರುದ್ದ 1958ರಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಸಿಲ್, ಒಟ್ಟು 44 ಟೆಸ್ಟ್ ಪಂದ್ಯ ಆಡಿದ್ದಾರೆ. 1958ರಿಂ 1969ರ ವರೆಗೆ ಬಸಿಲ್ ಟೆಸ್ಟ್ ಕ್ರಿಕೆಟ್ ಆಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಬಸಿಲ್ 3104 ರನ್ ಸಿಡಿಸಿದ್ದಾರೆ. 7 ಶತಕ ಹಾಗೂ 16 ಅರ್ಧಶಕ ಸಿಡಿಸಿದ ಹೆಗ್ಗಳಿಕೆಗೆ ಬಸಿಲ್ ಬುಚರ್‌ಗಿದೆ. 

1963ರಲ್ಲಿ ಇಂಗ್ಲೆಂಡ್ ವಿರುದ್ದ ಲಾರ್ಡ್ಸ್ ಮೈದಾನದಲ್ಲಿ 133 ರನ್ ಸಿಡಿಸಿರುವುದು ಬಸಿಲ್ ಬೆಸ್ಟ್ ಸ್ಕೋರ್. ಲಾರ್ಡ್ಸ್ ಮೈದಾನದಲ್ಲಿ ಶ್ರೇಷ್ಠ ಇನಿಂಗ್ಸ್ ಆಡುತ್ತಿರುವ ವೇಳೆ, ಪತ್ನಿಯ ಗರ್ಭಪಾತವಾಗಿರುವ ಸುದ್ದಿ ತಿಳಿದು ಆಘಾತಕ್ಕೊಳಗಾಗಿದ್ದರು. ಆದರೆ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ  133 ರನ್ ಸಿಡಿಸಿದ್ದರು. 

ಡಿಸೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios