ಬ್ರಿಸ್ಬೇನ್(ಅ.01): ಪಾಕಿಸ್ತಾನ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ಆಸ್ಟ್ರೇಲಿಯಾ ಸ್ಫೋಟಕ ಆರಂಭಿಕ ಡೇವಿಡ್ ವಾರ್ನರ್ ದಾಖಲೆ ಬರೆದಿದ್ದಾರೆ. ದಿಗ್ಗಜ ಕ್ರಿಕೆಟಿಗ ಡಾನ್ ಬ್ರಾಡ್ಮನ್ ಗರಿಷ್ಠ ಸ್ಕೋರ್ ದಾಖಲೆ(334) ಮರಿದ ಡೇವಿಡ್ ವಾರ್ನರ್, ಹೊಸ ಇತಿಹಾಸ ಬರೆದಿದ್ದಾರೆ. ಡೇವಿಡ್ ವಾರ್ನರ್ ದಾಖಲೆ ತ್ರಿಬಲ್ ಸೆಂಚುರಿ ಹಿಂದೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಾರಣ ಅನ್ನೋ ಸೀಕ್ರೆಟನ್ನು ಸ್ವತಃ ಡೇವಿಡ್ ವಾರ್ನರ್ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಡೇವಿಡ್ ವಾರ್ನರ್ ಎನ್ನುವ ಛಲದಂಕಮಲ್ಲ..! ಅವಮಾನ ಗೆದ್ದು ನಿಂತ Real Warrior

ಪಾಕ್ ವಿರುದ್ದ ತ್ರಿಬಲ್ ಸೆಂಚುರಿ ಸಿಡಿಸಿದ ಬಳಿಕ ಮಾತನಾಡಿದ ಡೇವಿಡ್ ವಾರ್ನರ್, ಸೆಹ್ವಾಗ್ ಮಾತುಗಳಿಂದಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು ಎಂದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡುವಾಗ ವಿರೇಂದ್ರ ಸೆಹ್ವಾಗ್‌ರನ್ನು ಭೇಟಿಯಾಗಿದ್ದೆ. ಈ ವೇಳೆ ನಾನು ಟಿ20ಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದೆ. ಆದರೆ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿರಲಿಲ್ಲ. ನನ್ನ ಬ್ಯಾಟಿಂಗ್ ಗಮನಿಸಿದ ಸೆಹ್ವಾಗ್, ನೀನು ಟಿ20ಗಿಂತ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗನಾಗುವ ಎಲ್ಲಾ ಗುಣಗಳಿವೆ ಎಂದಿದ್ದರು.

ಇದನ್ನೂ ಓದಿ: ಸೆಹ್ವಾಗ್ ಹೇಳಿದ ಭವಿಷ್ಯವೆಲ್ಲಾ ನಿಜವಾಗುತ್ತಾ..?

ಸೆಹ್ವಾಗ್ ಮಾತಿಗೆ ನಾನು ತಮಾಷೆ ಮಾಡಿದ್ದೆ. ಆದರೆ ವೀರೂ ಚುಟುಕು ಕ್ರಿಕೆಟ್‌ಗಿಂತ ಟೆಸ್ಟ್ ಮಾದರಿಯಲ್ಲಿ ಹೆಚ್ಚಿನ ಯಶಸ್ಸು ಕಾಣಬಲ್ಲ ಎಲ್ಲಾ ಸಾಧ್ಯತೆಗಳು ನಿನ್ನಲ್ಲಿವೆ ಎಂದಿದ್ದರು. ಸೆಹ್ವಾಗ್ ಮಾತು ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಇದೇ ಮಾತುಗಳು ನನ್ನ ಕರಿಯರ್‌ಗೂ ನೆರವಾಗುತ್ತಿದೆ ಎಂದಿದ್ದಾರೆ.

ಡಿಸೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: