ಹೈದರಾಬಾದ್(ಡಿ.07): ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೋಟ್‌ಬುಕ್ ಸೆಲೆಬ್ರೇಷನ್ ಮಾಡಿ ಎಲ್ಲರ ಗಮನಸೆಳೆದಿದ್ದರು. ವೆಸ್ಟ್ ಇಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ ಅವರ ನೋಟ್‌ಬುಕ್ ಸಂಭ್ರಮಾಚರಣೆ  ಮಾಡೋ ಮೂಲಕ ಹಳೇ ಸೇಡು ತೀರಿಸಿಕೊಂಡಿದ್ದರು. ಕೊಹ್ಲಿ ಸೆಲೆಬ್ರೇಷನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡುತ್ತಿದೆ. 

ಇದನ್ನೂ ಓದಿ: ವಿಲಿಯಮ್ಸ್ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು; ಕೊಹ್ಲಿಗೆ ಭೇಷ್ ಎಂದ ಫ್ಯಾನ್ಸ್!

ಕಳೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ ಕೆಸ್ರಿಕ್ ವಿಲಿಯಮ್ಸ್ ತಮ್ಮ ನೋಟ್‌ಬುಕ್ ಸಂಭ್ರಮದ ಮೂಲಕ ಕೊಹ್ಲಿಯನ್ನು ಪೆಲಿಯನ್ ಕಳುಹಿಸಿದ್ದರು. ಇದೀಗ ಹೈದರಾಬಾದ್ ಟಿ20 ಪಂದ್ಯದಲ್ಲಿ ಕೊಹ್ಲಿ, ವಿಲಿಯಮ್ಸ್ ಎಸೆತಕ್ಕೆ ಭರ್ಜರಿ ಸಿಕ್ಸರ್ ಸಿಡಿಸಿ, ನೋಟ್‌ಬುಕ್ ಸಂಭ್ರಮ ಆಚರಿಸಿ, ಹಳೇ ಸೇಡು ತೀರಿಸಿಕೊಂಡರು. ಕೊಹ್ಲಿ ನೋಟ್‌ಬುಕ್ ಸಂಭ್ರಮಾಚರಣೆ ಭಾರಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಲ್ಲಿ ಕೊಹ್ಲಿ ನೋಟ್‌ಬುಕ್ ಮೆಮೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ರಾಹುಲ್, ಕೊಹ್ಲಿ ಅರ್ಧಶತಕ; ವಿಂಡೀಸ್ ವಿರುದ್ಧ ಗೆದ್ದು ಬೀಗಿದ ಭಾರತ

ಸಾಮಾಜಿಕ ಜಾಲತಾಣದಲ್ಲಿನ ಟಾಪ್ 10 ಮೆಮೆ ಇಲ್ಲಿದೆ

ಡಿಸೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ