Asianet Suvarna News Asianet Suvarna News

ಏಕದಿನ ವಿಶ್ವಕಪ್​ನಲ್ಲಿ 4ನೇ ಕ್ರಮಾಂಕದಲ್ಲಿ ಆಡ್ತಾರಾ ವಿರಾಟ್ ಕೊಹ್ಲಿ ..? ರವಿಶಾಸ್ತ್ರಿ ಹೇಳಿದ್ದೇನು?

ವಿರಾಟ್ ಕೊಹ್ಲಿ ಈ ಮೊದಲು 4ನೇ ಕ್ರಮಾಂಕದಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಈವರೆಗು 39 ಇನ್ನಿಂಗ್ಸ್​​ಗಳಿಂದ 55.21ರ ಸರಾಸರಿಯಲ್ಲಿ 1,767 ರನ್​ಗಳಿಸಿದ್ದಾರೆ. ಇದ್ರಲ್ಲಿ 7 ಶತಕ ಮತ್ತು ಅರ್ಧಶತಕ ಸೇರಿವೆ. ಈ ಅಂಕಿಆಂಶಗಳನ್ನ ನೋಡಿದ್ರೆ, ಕೊಹ್ಲಿ ಮಿಡಲ್ ಆರ್ಡರ್​ನಲ್ಲೂ ಮಿಂಚಬಲ್ಲರು ಅನ್ನೋದು ಕನ್ಫರ್ಮ್.

Virat Kohli is the solution to Team India No 4 concerns says Ravi Shastri kvn
Author
First Published Aug 18, 2023, 6:01 PM IST

ಬೆಂಗಳೂರು(ಆ.18) ಏಕದಿನ ವಿಶ್ವಕಪ್ ಮಹಾಯುದ್ಧ ಆರಂಭಕ್ಕಿನ್ನು 48 ದಿನ ಮಾತ್ರ ಬಾಕಿ ಇದೆ. 10 ವರ್ಷಗಳಿಂದ ಯಾವುದೇ ಐಸಿಸಿ ಕಪ್ ಗೆಲ್ಲದ ಟೀಂ ಇಂಡಿಯಾ, ಈ ಬಾರಿ ಅದನ್ನ ಸಾಧಿಸಲೇಬೇಕು ಅಂತ ಪಣ ತೊಟ್ಟಿದೆ. ಆದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್​ ರಾಹುಲ್​ ದ್ರಾವಿಡ್​ಗೆ ತಂಡದ ಬ್ಯಾಟಿಂಗ್ ವಿಭಾಗದಲ್ಲಿ 4ನೇ ಕ್ರಮಾಂಕದ್ದೇ ದೊಡ್ಡ ಚಿಂತೆಯಾಗಿದೆ. 

ಹೌದು, ಸದ್ಯ ತಂಡದಲ್ಲಿ 4ನೇ ಕ್ರಮಾಂಕದಲ್ಲಿ ಸಮರ್ಥವಾಗಿ ಬ್ಯಾಟ್ ಬೀಸುವ  ಬ್ಯಾಟ್ಸ್​​ಮನ್ ಕೊರತೆ ಕಾಡ್ತಿದೆ. ಶ್ರೇಯಸ್ ಅಯ್ಯರ್​ ಈ ಸ್ಲಾಟ್​ನಲ್ಲಿ ಸೆಟ್ ಆಗಿದ್ರು. ಆದ್ರೆ, ಇಂಜುರಿಯಿಂದಾಗಿ ಈ ಮುಂಬೈಕರ್ ತಂಡದಿಂದ ಹೊರಗುಳಿದಿದ್ದಾರೆ.  ವಿಶ್ವಕಪ್ ಟೂರ್ನಿ  ಆಡೋದು ಅನುಮಾನವಾಗಿದೆ.  ಶ್ರೇಯಸ್ ಮೆಗಾ ಟೂರ್ನಿಗೆ ಅಲಭ್ಯರಾದ್ರೆ, 4ನೇ ಕ್ರಮಾಂಕದಲ್ಲಿ ಯಾರನ್ನು ಆಡಿಸ್ಬೇಕು ಅನ್ನೊ ಚರ್ಚೆ ಶುರುವಾಗಿದೆ. ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ರೇಸ್​ನಲ್ಲಿದ್ದಾರೆ. ಆದ್ರೀಗ, ರನ್​ಮಷಿನ್ ವಿರಾಟ್​ ಕೊಹ್ಲಿ ಹೆಸರು ಕೂಡ ಕೇಳಿ ಬರ್ತಿದೆ. 

World Cup 2023: ವಿಶ್ವಕಪ್‌ ಟೂರ್ನಿಗೆ ಇಂಗ್ಲೆಂಡ್ ಸಂಭಾವ್ಯ ತಂಡ ಪ್ರಕಟ; 2 ಸ್ಟಾರ್ ಆಟಗಾರರಿಗಿಲ್ಲ ಸ್ಥಾನ..!

ಹೌದು, 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯನ್ನ ಅಖಾಡಿಕ್ಕಿಳಿಸಬೇಕು ಅಂತ ಟೀಂ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ. ವಿರಾಟ್​ ಕೊಹ್ಲಿಯನ್ನ ನಂಬರ್​ ಪೋರ್​ನಲ್ಲಿ ಆಡಿಸಬೇಕು. ಇದರಿಂದ ಟಾಪ್ ಆರ್ಡರ್​ನಂತೆ ಮಿಡಲ್ ಆರ್ಡರ್ ಕೂಡ ಸ್ಟ್ರಾಂಗ್ ಆಗಲಿದೆ ಅಂತ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. 

3ನೇ ಕ್ರಮಾಂಕದಲ್ಲಿ ವಿರಾಟ್ ಅದ್ಭುತ ಪ್ರದರ್ಶನ..! 

ಏಕದಿನ ಕ್ರಿಕೆಟ್​​ನಲ್ಲಿ ನಂ.3 ಸ್ಲಾಟ್​ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 210 ಪಂದ್ಯಗಳಲ್ಲಿ ಬ್ಯಾಟ್​ ಬೀಸಿರೋ ವಿರಾಟ್ ಕೊಹ್ಲಿ, 10,777 ರನ್​ ಗಳಿಸಿದ್ದಾರೆ. ಕೊಹ್ಲಿಗಿರೋಷ್ಟು ಸಕ್ಸಸ್​ ರೇಟ್ ಬೇರೆ ಯಾವ ಬ್ಯಾಟ್ಸ್​​ಮನ್​ಗು ಇಲ್ಲ. ಅಷ್ಟರ ಮಟ್ಟಿಗೆ ಕೊಹ್ಲಿ ಈ ಸ್ಲಾಟ್‌​ನಲ್ಲಿ ಸೆಟ್ ಆಗಿದ್ದಾರೆ. ಹೀಗಿರೋವಾಗ ಕೊಹ್ಲಿಯನ್ನ 4ನೇ ಕ್ರಮಾಂಕದಲ್ಲಿ ಆಡಿಸಿದ್ರೆ, ಟಾಪ್​ ಆರ್ಡರ್​ಗೆ ಪೆಟ್ಟು ಬೀಳಲ್ವಾ.? ಅನ್ನೋ ಪ್ರಶ್ನೆ ಮೂಡಿದೆ. ಒಂದು ವೇಳೆ ಮೂರನೇ ಕ್ರಮಾಂಕದಲ್ಲಿ ಆಡೋ ಆಟಗಾರ ಫೇಲ್ ಆದ್ರೆ, ಅದು ಕೊಹ್ಲಿಯ ಬ್ಯಾಟಿಂಗ್ ಮೇಲೂ ಪರಿಣಾಮ ಬೀರಲಿದೆ. ಕೊಹ್ಲಿ ಕೂಡ ವೈಫಲ್ಯ ಅನುಭವಿಸಿದ್ರೆ, ಒಟ್ಟಾರೆ ತಂಡದ ಬ್ಯಾಟಿಂಗ್​ ಕೊಲ್ಯಾಪ್ಸ್​​​ ಆಗಲಿದೆ.

ODI World Cup 2023: ವಿಶ್ವಕಪ್ ಟಿಕೆಟ್ ಖರೀದಿಸಲು ರಿಜಿಸ್ಟ್ರೇಷನ್ ಶುರು..! ನೋಂದಣಿಯಿಂದ ಏನು ಲಾಭ? 

ಈ ಹಿಂದೆ ಟೀಂ ಇಂಡಿಯಾ ಇಂತದ್ದೊಂದು ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿತ್ತು. 2007ರ ವಿಶ್ವಕಪ್​ ಟೂರ್ನಿಯಲ್ಲಿ ಸಚಿನ್​ ತೆಂಡುಲ್ಕರ್​ರನ್ನ 4ನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಆದ್ರೆ, ಸಚಿನ್​ ಟೂರ್ನಿಯಲ್ಲಿ ಫ್ಲಾಪ್ ಶೋ ನೀಡಿದ್ರು. 
 
ಮಿಡಲ್ ಆರ್ಡರ್​ನಲ್ಲೂ ಮಿಂಚಿರೋ ರನ್​ಮಷಿನ್..! 

ಯೆಸ್, ವಿರಾಟ್ ಕೊಹ್ಲಿ ಈ ಮೊದಲು 4ನೇ ಕ್ರಮಾಂಕದಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಈವರೆಗು 39 ಇನ್ನಿಂಗ್ಸ್​​ಗಳಿಂದ 55.21ರ ಸರಾಸರಿಯಲ್ಲಿ 1,767 ರನ್​ಗಳಿಸಿದ್ದಾರೆ. ಇದ್ರಲ್ಲಿ 7 ಶತಕ ಮತ್ತು ಅರ್ಧಶತಕ ಸೇರಿವೆ. ಈ ಅಂಕಿಆಂಶಗಳನ್ನ ನೋಡಿದ್ರೆ, ಕೊಹ್ಲಿ ಮಿಡಲ್ ಆರ್ಡರ್​ನಲ್ಲೂ ಮಿಂಚಬಲ್ಲರು ಅನ್ನೋದು ಕನ್ಫರ್ಮ್. 

ಅದೇನೆ ಇರಲಿ, ವಿಶ್ವಕಪ್​ನಲ್ಲಿ ವಿರಾಟ್​ ತಮ್ಮ ಸ್ಥಾನವನ್ನು ಬೇರೊಬ್ಬರಿಗೆ ಬಿಟ್ಟುಕೊಟ್ಟು, ನಾಲ್ಕನೇ ಕ್ರಮಾಂಕದಲ್ಲಿ ಆಡ್ತಾರಾ..? ರವಿ ಶಾಸ್ತ್ರಿಯ ಐಡಿಯಾ ವರ್ಕೌಟ್ ಆಗುತ್ತಾ..? ಅನ್ನೋದನ್ನ ಕಾದು ನೋಡಬೇಕಿದೆ.

Follow Us:
Download App:
  • android
  • ios