Asianet Suvarna News Asianet Suvarna News

ODI World Cup 2023: ವಿಶ್ವಕಪ್ ಟಿಕೆಟ್ ಖರೀದಿಸಲು ರಿಜಿಸ್ಟ್ರೇಷನ್ ಶುರು..! ನೋಂದಣಿಯಿಂದ ಏನು ಲಾಭ?

ಟೂರ್ನಿಯ ಪಂದ್ಯಗಳ ಟಿಕೆಟ್‌ಗಳನ್ನು ಆಗಸ್ಟ್ 25ರಿಂದ ಮಾರಾಟಕ್ಕೆ ಇಡಲಾಗುವುದು ಎಂದು ಐಸಿಸಿ ತಿಳಿಸಿದೆ. ಆಗಸ್ಟ್ 15ರಿಂದಲೇ ಐಸಿಸಿ ವೆಬ್‌ಸೈಟ್‌ನಲ್ಲೇ ನೋಂದಣಿ ಆರಂಭಗೊಂಡಿದೆ. 

ICC begin registration for tickets for ODI World Cup 2023 kvn
Author
First Published Aug 16, 2023, 11:59 AM IST

ನವದೆಹಲಿ(ಆ.16): ಆ.5ರಿಂದ ಆರಂಭಗೊಳ್ಳಲಿರುವ ಏಕದಿನ ವಿಶ್ವಕಪ್‌ನ ಟಿಕೆಟ್‌ಗಾಗಿ ಐಸಿಸಿ ವೆಬ್‌ಸೈಟ್‌ https://www.cricketworldcup.com/register ನಲ್ಲಿ ನೋಂದಣಿ ಆರಂಭಗೊಂಡಿದೆ. ಟಿಕೆಟ್‌ಗಳು ಆಗಸ್ಟ್ 25ರಿಂದ ಮಾರಾಟಕ್ಕೆ ಲಭ್ಯವಿದ್ದರೂ ವೆಬ್‌ಸೈಟ್‌ನಲ್ಲಿ ಈಗಲೇ ಹೆಸರು ನೋಂದಾಯಿಸಿದವರಿಗೆ ಟಿಕೆಟ್ ಬುಕಿಂಗ್‌ ವೇಳೆ ಹೆಚ್ಚಿನ ಆದ್ಯತೆ ಸಿಗಲಿದೆ. ಅಲ್ಲದೇ ಅವರಿಗೆ ಟಿಕೆಟ್ ಬುಕಿಂಗ್‌ಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳು ಬೇಗನೇ ಸಿಗಲಿದೆ. 

ಆಗಸ್ಟ್ 25ರಿಂದ ಟಿಕೆಟ್ ಸೇಲ್‌

ಟೂರ್ನಿಯ ಪಂದ್ಯಗಳ ಟಿಕೆಟ್‌ಗಳನ್ನು ಆಗಸ್ಟ್ 25ರಿಂದ ಮಾರಾಟಕ್ಕೆ ಇಡಲಾಗುವುದು ಎಂದು ಐಸಿಸಿ ತಿಳಿಸಿದೆ. ಆಗಸ್ಟ್ 15ರಿಂದಲೇ ಐಸಿಸಿ ವೆಬ್‌ಸೈಟ್‌ನಲ್ಲೇ ನೋಂದಣಿ ಆರಂಭಗೊಂಡಿದೆ. ಹೀಗೆ ನೋಂದಾಯಿಸಿದವರಿಗೆ ಬೇಗನೇ ಟಿಕೆಟ್ ಮಾಹಿತಿ ಸಿಗಲಿದೆ. ಆಗಸ್ಟ್ 25ರಿಂದ ಭಾರತ ಹೊರತುಪಡಿಸಿ ಇತರ ಅಭ್ಯಾಸ ಪಂದ್ಯಗಳ, ಆಗಸ್ಟ್ 30ರಿಂದ ಭಾರತದ ಅಭ್ಯಾಸ ಪಂದ್ಯಗಳ ಟಿಕೆಟ್‌ ಮಾರಾಟಕ್ಕೆ ಲಭ್ಯವಿದೆ. ಭಾರತದ ಚೆನ್ನೈ, ಪುಣೆ, ಡೆಲ್ಲಿ ಪಂದ್ಯಗಳ ಟಿಕೆಟ್‌ ಆಗಸ್ಟ್ 31ರಿಂದ, ಧರ್ಮಶಾಲಾ, ಲಖನೌ, ಮುಂಬೈ ಪಂದ್ಯಗಳ ಟಿಕೆಟ್‌ ಸೆ.1ರಿಂದ, ಬೆಂಗಳೂರು ಹಾಗೂ ಕೋಲ್ಕತಾ ಪಂದ್ಯಗಳ ಟಿಕೆಟ್‌ ಸೆಪ್ಟೆಂಬರ್ 2ರಿಂದ, ಪಾಕ್‌ ವಿರುದ್ಧದ ಆಹಮದಾಬಾದ್‌ ಪಂದ್ಯದ ಟಿಕೆಟ್‌ ಸೆಪ್ಟೆಂಬರ್ 3ರಿಂದ ಹಾಗೂ ಸೆಮಿಫೈನಲ್‌, ಫೈನಲ್‌ ಪಂದ್ಯದ ಟಿಕೆಟ್‌ ಸೆಪ್ಟೆಂಬರ್ 15ರಿಂದ ಪ್ರಾರಂಭಿಸುವುದಾಗಿ ತಿಳಿಸಿದೆ.

India tour of Ireland ಟಿ20 ಸರಣಿಯನ್ನಾಡಲು ಐರ್ಲೆಂಡ್‌ಗೆ ಹಾರಿದ ಟೀಂ ಇಂಡಿಯಾ..!

ನಿವೃತ್ತಿ ತೊರೆದು ವಿಶ್ವಕಪ್ ಆಡಲು ಸ್ಟೋಕ್ಸ್‌ಗೆ ಮನವಿ!

ಲಂಡನ್‌: ಐಸಿಸಿ ಏಕದಿನ ವಿಶ್ವಕಪ್‌ಗೂ ಮುನ್ನ 2019ರ ವಿಶ್ವಕಪ್‌ ಹೀರೋ, ತಾರಾ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ರನ್ನು ತಂಡಕ್ಕೆ ಮರಳಿ ಕರೆತರಲು ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ ಪ್ರಯತ್ನಿಸುತ್ತಿದೆ. ಈ ಬಗ್ಗೆ ಇಂಗ್ಲೆಂಡ್‌ ಏಕದಿನ, ಟಿ20 ತಂಡದ ಕೋಚ್‌ ಮ್ಯಾಥ್ಯೂ ಮಾಟ್‌ ಮಾಹಿತಿ ನೀಡಿದ್ದಾರೆ. ಅಲ್ಲದೇ ಏಕದಿನಕ್ಕೆ ಘೋಷಿಸಿರುವ ನಿವೃತ್ತಿಯನ್ನು ಹಿಂಪಡೆಯುವಂತೆ ಸ್ಟೋಕ್ಸ್ ಅವರಲ್ಲಿ ಜೋಸ್‌ ಬಟ್ಲರ್‌ ಮಾತುಕತೆ ನಡೆಸಲಿದ್ದಾರೆ ಎಂದಿದ್ದಾರೆ. ಬಟ್ಲರ್‌ 2019ರಲ್ಲಿ ಇಂಗ್ಲೆಂಡ್‌ ತವರಿನಲ್ಲಿ ವಿಶ್ವಕಪ್‌ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕಳೆದ ವರ್ಷ ಟೆಸ್ಟ್‌ನತ್ತ ಗಮನ ಹರಿಸುವ ನಿಟ್ಟಿನಲ್ಲಿ ಏಕದಿನಕ್ಕೆ ನಿವೃತ್ತಿ ಘೋಷಿಸಿದ್ದರು.

ಕ್ರಿಕೆಟ್ ಲೆಜೆಂಡ್ ಧೋನಿ ಸಿನಿಮಾಗೆ ಎಂಟ್ರಿ; ದಕ್ಷಿಣ ಭಾರತದ ಈ ಸ್ಟಾರ್ ನಟನ ಜತೆ ತೆರೆ ಮೇಲೆ ಮಿಂಚಲು ರೆಡಿ

ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಸರಂಗ!

ಕೊಲಂಬೊ: ಟಿ20 ಹಾಗೂ ಏಕದಿನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಶ್ರೀಲಂಕಾದ ವಾನಿಂಡು ಹಸರಂಗ ಮಂಗಳವಾರ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಹಸರಂಗ 2020ರಲ್ಲಿ ದ.ಆಫ್ರಿಕಾ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು, ಈ ವರೆಗೆ ಕೇವಲ 4 ಪಂದ್ಯಗಳನ್ನಾಡಿದ್ದಾರೆ. 2021ರಲ್ಲಿ ಬಾಂಗ್ಲಾ ವಿರುದ್ಧ ಕೊನೆ ಬಾರಿ ಆಡಿದ್ದರು.

2 ದಶಕಗಳ ಬಳಿಕ ಮತ್ತೆ ಇಂಗ್ಲೆಂಡ್‌-ಜಿಂಬಾಬ್ವೆ ಟೆಸ್ಟ್‌

ಲಂಡನ್‌: 2003ರ ಬಳಿಕ ಮತ್ತೊಮ್ಮೆ ಜಿಂಬಾಬ್ವೆ ತಂಡ ಇಂಗ್ಲೆಂಡ್‌ ವಿರುದ್ಧ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಆಡಲಿದ್ದು, 2025ರ ಮೇ ತಿಂಗಳಲ್ಲಿ 4 ದಿನಗಳ ಏಕೈಕ ಟೆಸ್ಟ್‌ ಪಂದ್ಯ ನಡೆಯಲಿದೆ. ಈ ಬಗ್ಗೆ ಉಭಯ ದೇಶಗಳ ಕ್ರಿಕೆಟ್‌ ಮಂಡಳಿಗಳು ಮಾತುಕತೆ ನಡೆಸುತ್ತಿದ್ದು, ಪಂದ್ಯ ನಡೆಯುವ ಸ್ಥಳ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. 2000ರಲ್ಲಿ ಮೊದಲ ಬಾರಿ ಜಿಂಬಾಬ್ವೆ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಆಡಿತ್ತು. ಬಳಿಕ 2003ರಲ್ಲಿ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಂಡಿತ್ತು. ಇದೇ ಸರಣಿಯಲ್ಲಿ ದಿಗ್ಗಜ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.


 

Follow Us:
Download App:
  • android
  • ios