ವಿಶ್ವಕಪ್ ಟೂರ್ನಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸಂಭಾವ್ಯ ತಂಡ ಪ್ರಕಟಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ 15 ಸದಸ್ಯರ ತಾತ್ಕಾಲಿಕ ತಂಡದಲ್ಲಿ ಆರ್ಚರ್‌ಗಿಲ್ಲ ಸ್ಥಾನಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿರುವ ಜೋಸ್ ಬಟ್ಲರ್
ಲಂಡನ್(ಆ.17): ಮುಂಬರುವ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ 15 ಸದಸ್ಯರ ತಾತ್ಕಾಲಿಕ ತಂಡ ಪ್ರಕಟಗೊಳಿಸಿದ್ದು, ಗಾಯದಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಿರುವ ತಾರಾ ವೇಗಿ ಜೋಫ್ರಾ ಆರ್ಚರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಕೂಡಾ ತಂಡದಿಂದ ಹೊರಬಿದ್ದಿದ್ದಾರೆ. ಜೋಸ್ ಬಟ್ಲರ್ ನಾಯಕತ್ವ ವಹಿಸಲಿದ್ದು, ಬೆನ್ ಸ್ಟೋಕ್ಸ್ ತಂಡದಲ್ಲಿದ್ದಾರೆ.
2019ರಲ್ಲಿ ಇಂಗ್ಲೆಂಡ್‌ನಲ್ಲೇ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇಂಗ್ಲೆಂಡ್ ಗೆಲುವಿನಲ್ಲಿ ಮಾರಕ ವೇಗಿ ಜೋಫ್ರಾ ಆರ್ಚರ್ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಹ್ಯಾರಿ ಬ್ರೂಕ್ ಕೂಡಾ ಇತ್ತೀಚೆಗಿನ ವರ್ಷಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಪರ ಅದ್ಭುತ ಪ್ರದರ್ಶನ ತೋರುತ್ತಾ ಬಂದಿದ್ದರು. ಇದೀಗ ಈ ಇಬ್ಬರು ತಾರಾ ಆಟಗಾರರು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವುದು ಅನುಮಾನ ಎನಿಸಿದೆ.
ತಂಡ: ಜೋಸ್ ಬಟ್ಲರ್(ನಾಯಕ), ಮೊಯೀನ್ ಅಲಿ, ಗಸ್ ಆಟ್ಕಿನ್ಸನ್, ಜಾನಿ ಬೇರ್‌ಸ್ಟೋವ್, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ರಶೀದ್ ಖಾನ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.
ವಿಶ್ವಕಪ್‌ಗೂ ಮುನ್ನ ಏಕದಿನ ನಿವೃತ್ತಿ ಹಿಂಪಡೆದ ಸ್ಟೋಕ್ಸ್!
ಲಂಡನ್: 2019ರ ವಿಶ್ವಕಪ್ ಹೀರೋ, ಇಂಗ್ಲೆಂಡ್‌ನ ತಾರಾ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮಹತ್ವದ ಐಸಿಸಿ ಏಕದಿನ ವಿಶ್ವಕಪ್‌ಗೂ ಮುನ್ನ ನಿವೃತ್ತಿ ಹಿಂಪಡೆದು ಏಕದಿನ ಕ್ರಿಕೆಟ್‌ಗೆ ಮರಳಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿರುವ ಸ್ಟೋಕ್ಸ್ ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ 4 ಪಂದ್ಯಗಳ ಏಕದಿನ ಸರಣಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ.
ನಿವೃತ್ತಿ ವಾಪಾಸ್ ಪಡೆದ ವಿಶ್ವಕಪ್ ರಣಬೇಟೆಗಾರ..! ಮತ್ತೆ ವಿಶ್ವಕಪ್ ಗೆಲ್ಲಿಸಲು ಪಣತೊಟ್ಟ ಸ್ಟಾರ್ ಕ್ರಿಕೆಟಿಗ
ಅವರನ್ನು ತಂಡಕ್ಕೆ ಕರೆ ತರಲು ಪ್ರಯತ್ನಿಸುತ್ತಿರುವುದಾಗಿ ಇತ್ತೀಚೆಗಷ್ಟೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿತ್ತು. ಕಳೆದ ವರ್ಷ ಸ್ಟೋಕ್ಸ್ ಟೆಸ್ಟ್‌ನತ್ತ ಗಮನ ಹರಿಸುವ ನಿಟ್ಟಿನಲ್ಲಿ ಏಕದಿನಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಇಂಗ್ಲೆಂಡ್ ಪರ ಅವರು 105 ಏಕದಿನ ಪಂದ್ಯಗಳನ್ನಾಡಿದ್ದಾರೆ.
ತಾಜ್‌ಮಹಲ್‌ನಲ್ಲಿ ವಿಶ್ವಕಪ್
ಆಗ್ರಾ: ಅಕ್ಟೋಬರ್ 5ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಟ್ರೋಫಿ ಟೂರ್’ ವಿಶ್ವದ ವಿವಿಧೆಡೆ ಸುತ್ತಿ ಇದೀಗ ಆಗ್ರಾದಲ್ಲಿರುವ ವಿಶ್ವಪ್ರಸಿದ್ಧ ತಾಜ್‌ಮಹಲ್ ಮುಂದೆ ಬಂದು ನಿಂತಿದೆ. ತಾಜ್‌ಮಹಲ್ ಮುಂಭಾಗ ನಿಲ್ಲಿಸಿರುವ ಟ್ರೋಫಿಯ ಫೋಟೊ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಟಿ20 ರ್‍ಯಾಂಕಿಂಗ್: 43 ಸ್ಥಾನ ಜಿಗಿದ ಶುಭ್‌ಮನ್ ಗಿಲ್
ನವದೆಹಲಿ: ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಭಾರತದ ತಾರಾ ಬ್ಯಾಟರ್ ಶುಭ್‌ಮನ್ ಗಿಲ್ 43 ಸ್ಥಾನ ಜಿಗಿದು ಜೀವನಶ್ರೇಷ್ಠ 25ನೇ ಸ್ಥಾನ ಪಡೆದಿದ್ದಾರೆ. ಯಶಸ್ವಿ ಜೈಸ್ವಾಲ್ 88ನೇ ಸ್ಥಾನ ತಲುಪಿದ್ದಾರೆ. ಸೂರ್ಯಕುಮಾರ್ ಯಾದವ್ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಕುಲ್ದೀಪ್ ಯಾದವ್ 28ನೇ ಸ್ಥಾನಕ್ಕೇರಿದ್ದಾರೆ.
ಹುಬ್ಬಳ್ಳಿಗೆ ಹ್ಯಾಟ್ರಿಕ್ ಜಯ!
ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಬುಧವಾರ ಬೆಂಗಳೂರು ವಾರಿಯರ್ಸ್ ವಿರುದ್ಧ ತಂಡ 5 ವಿಕೆಟ್ ಜಯಗಳಿಸಿತು. ಬೆಂಗ್ಳೂರಿಗಿದು ಸತತ 3ನೇ ಸೋಲು.
ODI World Cup 2023: ವಿಶ್ವಕಪ್ ಟಿಕೆಟ್ ಖರೀದಿಸಲು ರಿಜಿಸ್ಟ್ರೇಷನ್ ಶುರು..! ನೋಂದಣಿಯಿಂದ ಏನು ಲಾಭ?
ಮೊದಲು ಬ್ಯಾಟ್ ಮಾಡಿದ ಬೆಂಗಳೂರು 18.4 ಓವರ್‌ಗಳಲ್ಲಿ 105ಕ್ಕೆ ಆಲೌಟಾಯಿತು. ಮಯಾಂಕ್ ಅಗರ್‌ವಾಲ್(50) ಏಕಾಂಗಿ ಹೋರಾಟ ನಡೆಸಿದರು. ಮನ್ವಂತ್ ಕುಮಾರ್ 15 ರನ್‌ಗೆ 4 ವಿಕೆಟ್ ಕಿತ್ತರ. ಸುಲಭ ಗುರಿಯನ್ನು ಹುಬ್ಬಳ್ಳಿ 13.3 ಓವರ್‌ಗಳಲ್ಲೇ ಬೆನ್ನತ್ತಿತು. ಲುವ್‌ನಿತ್ ಸಿಸೋಡಿಯಾ 33, ಮನ್ವಂತ್ 28, ಮನೀಶ್ ಪಾಂಡೆ ಔಟಾಗದೆ 23 ರನ್ ಗಳಿಸಿದರು.
ಮೈಸೂರಿಗೆ ಜಯ
ಮತ್ತೊಂದು ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 54 ರನ್ ಜಯಗಳಿಸಿ, ಮೈಸೂರು ವಾರಿಯರ್ಸ್ ತಂಡ ಗೆಲುವಿನ ಖಾತೆ ತೆರೆಯಿತು. ಗುಲ್ಬರ್ಗಕ್ಕೆ ಇದು 2ನೇ ಸೋಲು. ಮೊದಲು ಬ್ಯಾಟ್ ಮಾಡಿದ ಮೈಸೂರು 20 ಓವರಲ್ಲಿ 5 ವಿಕೆಟ್‌ಗೆ 198 ರನ್ ಗಳಿಸಿತು. ಕರುಣ್ ನಾಯರ್ 57, ಸಮರ್ಥ್ 48, ಮನೋಜ್ 15 ಎಸೆತದಲ್ಲಿ 32 ರನ್ ಗಳಿಸಿದರು. ಗುಲ್ಬರ್ಗ 19 ಓವರಲ್ಲಿ 144ಕ್ಕೆ ಆಲೌಟಾಯಿತು.
