'ನಮ್ಮನ್ನು ಗುರುತು ಹಿಡಿಯದ ಜಾಗದಲ್ಲಿದ್ದೆವು': 2 ತಿಂಗಳ ಬ್ರೇಕ್‌ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ವಿರಾಟ್ ಕೊಹ್ಲಿ..!

ಅನುಷ್ಕಾ ಶರ್ಮಾ ಅಕಾಯ್‌ಗೆ ಜನ್ಮನೀಡುವಾಗ ಇಬ್ಬರೂ ಇಂಗ್ಲೆಂಡ್‌ನಲ್ಲಿದ್ದರು ಎನ್ನುವ ಗಾಳಿಸುದ್ದಿಗಳು ಹರಿದಾಡಿತ್ತು. ಆದರೆ ಇದೀಗ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಆಕರ್ಷಕ 77 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಬಳಿಕ ವಿರಾಟ್ ಕೊಹ್ಲಿ ಆ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ. 

Virat Kohli Explains 2 Month Break Abroad As Wife Anushka Sharma Gave Birth To Their Son Akaay kvn

ಬೆಂಗಳೂರು(ಮಾ.26): ಬರೋಬ್ಬರಿ ಎರಡು ತಿಂಗಳ ಬಿಡುವಿನ ಬಳಿಕ ಮಾಜಿ ನಾಯಕ ವಿರಾಟ್ ಕೊಹ್ಲಿ  ಐಪಿಎಲ್‌ಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. ಕಳೆದ ಫೆಬ್ರವರಿ 15ರಂದು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅಕಾಯ್ ಎನ್ನುವ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿ ಜನವರಿಯಿಂದ ಮಾರ್ಚ್ ಮಧ್ಯದವರೆಗೂ ಕ್ರಿಕೆಟ್‌ನಿಂದ ಬಿಡುವು ಪಡೆದುಕೊಂಡು ಪತ್ನಿಯ ಜತೆ ಕ್ವಾಲಿಟಿ ಸಮಯವನ್ನು ಕಳೆದಿದ್ದರು. ಈ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿ, ತವರಿನಲ್ಲಿ ಇಂಗ್ಲೆಂಡ್ ವಿರುದ್ದ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದರು. 

ವೈಯುಕ್ತಿಕ ಕಾರಣಕ್ಕಾಗಿ ಇಂಗ್ಲೆಂಡ್ ಎದುರಿನ ಮಹತ್ವದ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದು, ಕೊಂಚ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಳ್ಳುವ ಮೂಲಕ ಮತ್ತೆ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ.

RCB ಗೆಲ್ಲಿಸಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಖುಷಿ ಹಂಚಿಕೊಂಡ ಕೊಹ್ಲಿ..! ಮುದ್ದಾದ ವಿಡಿಯೋ ವೈರಲ್

ಅನುಷ್ಕಾ ಶರ್ಮಾ ಅಕಾಯ್‌ಗೆ ಜನ್ಮನೀಡುವಾಗ ಇಬ್ಬರೂ ಇಂಗ್ಲೆಂಡ್‌ನಲ್ಲಿದ್ದರು ಎನ್ನುವ ಗಾಳಿಸುದ್ದಿಗಳು ಹರಿದಾಡಿತ್ತು. ಆದರೆ ಇದೀಗ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಆಕರ್ಷಕ 77 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಬಳಿಕ ವಿರಾಟ್ ಕೊಹ್ಲಿ ಆ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ. 

ಕ್ರಿಕೆಟ್ ವಿಶ್ಲೇಷಕ ಹರ್ಷಾ ಬೋಗ್ಲೆ, ವಿರಾಟ್ ಕೊಹ್ಲಿ ಬಳಿ ಆ ಎರಡು ತಿಂಗಳ ಬಗ್ಗೆ ಹೇಳುವಿರಾ ಎಂದಾಗ, "ನಾವು ಭಾರತದಲ್ಲಿ ಇರಲಿಲ್ಲ. ನಾವು ಎಲ್ಲಿದ್ದೆವು ಎಂದರೆ, ನಮ್ಮನ್ನು ಗುರುತುಹಿಡಿಯದ ಪ್ರದೇಶದಲ್ಲಿದ್ದೆವು. ಕಳೆದ ಎರಡು ತಿಂಗಳು ಸಾಮಾನ್ಯ ರೀತಿಯಲ್ಲಿ ಕುಟುಂಬದ ಜತೆಗಿದ್ದೆ. ನನಗೆ ನನ್ನ ಕುಟುಂಬ ತುಂಬಾ ಒಳ್ಳೆಯ ನೆನೆಪುಗಳನ್ನು ಕೊಟ್ಟಿದೆ. ಈಗ ಎರಡು ಮಕ್ಕಳಾದ ಬಳಿಕವಂತೂ, ಕುಟುಂಬವನ್ನು ನೋಡುವ ದೃಷ್ಠಿಕೋನವೇ ಬದಲಾಗಿದೆ" ಎಂದು ಹೇಳಿದ್ದಾರೆ.

IPL 2024 ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ..! ವಿಡಿಯೋ ವೈರಲ್

"ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ಮಾಡಿಕೊಟ್ಟ ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ರಸ್ತೆಯಲ್ಲಿ ಓಡಾಡುವಾಗ ಎಲ್ಲರಂತೆ ನಾನೂ ಸಾಮಾನ್ಯ ವ್ಯಕ್ತಿಯಾಗಿ ಓಡಾಡುವುದು ನಿಜಕ್ಕೂ ಅದ್ಭುತ ಅನುಭವ. ಈಗ ನಾನು ಒಂದು ಭರವಸೆಯನ್ನು ನೀಡಲು ಬಯಸುತ್ತೇನೆ. ಅದೇನೆಂದರೆ, ನಾನು ನನ್ನಿಂದ ಎಷ್ಟು ಒಳ್ಳೆಯದನ್ನು ಕೊಡಲು ಸಾಧ್ಯವೋ ಅದನ್ನು ಮಾಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಇನ್ನು ಆರ್‌ಸಿಬಿ ತಂಡವು ಮೊದಲ ಗೆಲುವು ದಾಖಲಿಸುತ್ತಿದ್ದಂತೆಯೇ ತಡ ಮಾಡದೇ ತಮ್ಮ ಪತ್ನಿ ವಿರಾಟ್ ಕೊಹ್ಲಿ, ಮಗಳು ವಮಿಕಾ ಜತೆ ವಿಡಿಯೋ ಕಾಲ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
 

Latest Videos
Follow Us:
Download App:
  • android
  • ios