ಕೋಲ್ಕತಾ(ನ.23): ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಬಾಂಗ್ಲಾದೇಶ ವಿರುದ್ದದ ಐತಿಹಾಸಿಕ ಪಂದ್ಯದಲ್ಲಿ ಕೊಹ್ಲಿ ಶತಕ ದಾಖಲಿಸೋ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸೆಂಚುರಿ ಮೂಲಕ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲಯನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್; ಶತಕ ಸಿಡಿಸಿ ದಾಖಲೆ ಬರೆದ ವಿರಾಟ್ ಕೊಹ್ಲಿ!.

ನಾಯಕನಾಗಿ ವಿರಾಟ್ ಕೊಹ್ಲಿ 41ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದರು. ಈ ಮೂಲಕ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದರು. ಆದರೆ ಕೊಹ್ಲಿ ಹಾಗೂ ಪಾಂಟಿಂಗ್ ಇನಿಂಗ್ಸ್‌ನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಪಾಂಟಿಂಗ್ 41 ಶತಕ ಸಿಡಿಸಲು 376 ಇನಿಂಗ್ಸ್ ತೆಗೆದುಕೊಂಡಿದ್ದರೆ, ಕೊಹ್ಲಿ ಕೇವಲ 188 ಇನಿಂಗ್ಸ್‌ಗಳಲ್ಲಿ ಪೂರೈಸಿದ್ದಾರೆ.

ಇದನ್ನೂ ಓದಿ: ಗಮನಿಸಿದ್ರಾ..? ಟೆಸ್ಟ್‌ನಲ್ಲಿ ಮೊದಲ ಬಾರಿ 2 ಬದಲಿ ಆಟಗಾರರು..!

ನಾಯಕನಾಗಿ ಗರಿಷ್ಠ ಅಂತಾರಾಷ್ಟ್ರೀಯ ಶತಕ:
41 -  ವಿರಾಟ್ ಕೊಹ್ಲಿ( 188 ಇನಿಂಗ್ಸ್)
41 - ರಿಕಿ ಪಾಂಟಿಂಗ್(376 ಇನಿಂಗ್ಸ್)
33- ಗ್ರೇಮ್ ಸ್ಮಿತ್ (368 ಇನಿಂಗ್ಸ್)

ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ. ಮೂರು ಮಾದರಿಯಲ್ಲಿ ಮೊದಲು ಶತಕ ಸಿಡಿಸಿದ ಕ್ರಿಕೆಟಿಗರ ವಿವರ ಇಲ್ಲಿದೆ.

ಟೆಸ್ಟ್: ಲಾಲಾ ಅಮರನಾಥ್(1933/34)
D/N ಟೆಸ್ಟ್: ವಿರಾಟ್ ಕೊಹ್ಲಿ (2019/20)

ಏಕದಿನ: ಕಪಿಲ್ ದೇವ್ (1983)
D/N ಏಕದಿನ: ಸಂಜಯ್ ಮಂಜ್ರೇಕರ್ (1991)

ಟಿ20: ಸುರೇಶ್ ರೈನಾ (2010)
D/N ಟಿ20: ರೋಹಿತ್ ಶರ್ಮಾ (2015)

ನವೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: