ಕೋಲ್ಕತಾ(ನ.  23): ಬಾಂಗ್ಲಾದೇಶ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಸೆಂಚುರಿ ಸಿಡಿಸೋ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಭಾರತ ಆಯೋಜಿಸಿದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊದಲ ಸೆಂಚುರಿ ಸಿಡಿಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. 

ಇದನ್ನೂ ಓದಿ: ಅಬ್ಬಾ, ಅದೇನ್ ಕ್ಯಾಚ್ ಗುರು..! ರೋಹಿತ್-ಸಾಹ ಇಬ್ಬರಲ್ಲಿ ಯಾರ ಕ್ಯಾಚ್ ಬೆಸ್ಟ್..?.

ಬಾಂಗ್ಲಾ ವಿರುದ್ದ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ 27 ನೇ ಶತಕ ಪೂರೈಸಿದರು. ಚೇತೇಶ್ವರ ಪೂಜಾರಾ ಹಾಗೂ ಅಂಜಿಕ್ಯ ರಹಾನೆ ಜೊತೆ ಇನಿಂಗ್ಸ್ ಕಟ್ಟಿದ ಕೊಹ್ಲಿ ಇದೀಗ ಸೆಂಚುರಿ ಸಾಧನೆ ಮಾಡಿದ್ದಾರೆ. ಈ ಮೂಲಕ ಟೀಂ ಇಂಡಿಯಾಗೆ ಉತ್ತಮ ಲೀಡ್ ತಂದುಕೊಟ್ಟಿದ್ದಾರೆ.

ವಿರಾಟ್ ಕೊಹ್ಲಿ ಸೆಂಚುರಿ ವಿಶೇಷತೆ:

  • ಟೆಸ್ಟ್ ಕ್ರಿಕೆಟ್‌ನಲ್ಲಿ 27ನೇ ಶತಕ
  • ನಾಯಕನಾಗಿ 20ನೇ ಟೆಸ್ಟ್ ಶತಕ
  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70ನೇ ಶತಕ
  • ನಾಯಕನಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 41ನೇ ಶತಕ
  • ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ

ಭಾರತ ಮೊದಲ ಇನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡುತ್ತಿದೆ. ಆರಂಭಿಕರಾದ ಮಯಾಂಕ್ ಅಗರ್ವಾಲ್ ಹಾಗೂ ರೋಹಿತ್ ಶರ್ಮಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಮಯಾಂಕ್ 14 ರನ್ ಸಿಡಿಸಿ ಔಟಾದರೆ, 21 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರಾ ಜೊತೆಯಾಟ ತಂಡದ ಆತಂಕ ದೂರ ಮಾಡಿತು. ಪೂಜಾರಾ 55 ರನ್ ಕಾಣಿಕೆ ನೀಡಿದರು. ಇನ್ನು ಅಜಿಂತ್ಯ ರಹಾನೆ 51 ರನ್ ಸಿಡಿಸಿ ಔಟಾದರು.

ರವೀಂದ್ರ ಜಡೇಜಾ ಜೊತೆ ಸೇರಿದ ವಿರಾಟ್ ಕೊಹ್ಲಿ ಇನಿಂಗ್ಸ್ ಮುಂದುವರಿಸಿದರು, ಇಷ್ಟೇ ಅಲ್ಲ ಆಕರ್ಷಕ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಭಾರತ ಮೊದಲ ಇನಿಂಗ್ಸ್‌ನಲ್ಲಿ 281 ರನ್ ಗಡಿ ದಾಟಿದ್ದು 175 ರನ್ ಮುನ್ನಡೆ ಪಡೆದುಕೊಂಡಿದೆ.