ಫಡ್ನವಿಸ್‌ಗೆ ಮಹಾ ಸಿಎಂ ಪಟ್ಟ, ಶತಕ ಸಿಡಿಸಿ ದಾಖಲೆ ಬರೆದ ವಿರಾಟ; ನ.23ರ ಟಾಪ್ 10 ಸುದ್ದಿ

ಮಹಾರಾಷ್ಟ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಸರ್ಕಾರ ರಚಿಸೋ ಹುಮ್ಮಸ್ಸಿನಲ್ಲಿದ್ದ ಶಿವಸೇನೆ ಇಂಗು ತಿಂಗ ಮಂಗನಂತಾಗಿದ್ದು, 2ನೇ ಬಾರಿಗೆ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿದ್ದಾರೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಬಾರ್ ಲೈಸೆನ್ಸ್ ರದ್ದಗೊಳಿಸಲು ಸರ್ಕಾರ ಆದೇಶ, ಬಿಗ್‌ಬಾಸ್ ಲೈಟ್ ಆಫ್ ಆದಮೇಲೆ ಪ್ರಿಯಾಂಕ ತಬ್ಬಿಕೊಂಡ ವಾಸುಕಿ ಸೇರಿದಂತೆ ನವೆಂಬರ್ 23ರ ಟಾಪ್ 10 ಸುದ್ದಿ ಇಲ್ಲಿವೆ.
 
CM Devendra fadnavis to virat kohli century top 10 news of november 23

1) 'ಮಹಾ' ರಾಜಕೀಯದಲ್ಲಿ ರೋಚಕ ತಿರುವು: 'ಸೇನೆ'ಗೆ ಶಾಕ್, ಫಡ್ನವೀಸ್ ಮತ್ತೆ ಸಿಎಂ!

CM Devendra fadnavis to virat kohli century top 10 news of november 23

ಮಹಾರಾಷ್ಟ್ರ ರಾಜಕೀಯ ರೋಚಕ ತಿರುವು ಪಡೆದಿದೆ. ರಾತ್ರೋ ರಾತ್ರಿ ಶಿವಸೇನೆಗೆ ಬಿಜೆಪಿ ಶಾಕ್ ನೀಡಿದ್ದು, ದೇವೇಂದ್ರ ಫಡ್ನವೀಸ್ ಸಿಎಂ, ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದ ಶಿವಸೇನೆ ಹಾಗೂ ಕಾಂಗ್ರೆಸ್‌ಗೆ, ಬಿಜೆಪಿ ಬಹುದೊಡ್ಡ ಹೊಡೆತ ನೀಡಿದೆ.

2) ಎಲ್ಲಾ ಬಾರ್‌ ಲೈಸನ್ಸ್‌ ರದ್ದುಗೊಳಿಸಿದ ರಾಜ್ಯ ಸರ್ಕಾರ!

CM Devendra fadnavis to virat kohli century top 10 news of november 23

 ಮುಂದಿನ ಎರಡು ವರ್ಷಗಳಲ್ಲಿ ಬಾರ್‌ಗಳ ಸ್ಥಾಪನೆಗಾಗಿ ನೂತನ ಬಾರ್‌ ನಿಯಮಾವಳಿ ಜಾರಿಗೆ ತರಲಾಗುತ್ತದೆ ಎಂಬ ಘೋಷಣೆ ಬೆನ್ನಲ್ಲೇ, ಸದ್ಯ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಬಾರ್‌ಗಳ ಪರವಾನಗಿಯನ್ನು ತತ್‌ಕ್ಷಣವೇ ಜಾರಿಗೆ ಬರುವಂತೆ ಸರ್ಕಾರ ಶುಕ್ರವಾರ ರದ್ದುಗೊಳಿಸಿದೆ.

3) ಜಾರಕಿಹೊಳಿ ಸಹೋದರರ ಸ್ಪರ್ಧೆ: ಯಾರಿಗೆ ಸಪೋರ್ಟ್ ಮಾಡೋಣ ಅಂತಿದ್ದಾರೆ ಬೆಂಬಲಿಗರು

CM Devendra fadnavis to virat kohli century top 10 news of november 23

ಗೋಕಾಕ್‌ ಉಪಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಸ್ಪರ್ಧೆಯಿಂದ ಬೆಂಬಲಿಗರಲ್ಲಿ ಗೊಂದಲ ಉಂಟಾಗಿದೆ. ಡಿಸೆಂಬರ್ 5ಕ್ಕೆ ಉಪಚುನಾವಣೆ ನಡೆಯುತ್ತಿದೆಯಾದರೂ ಜಾರಕಿಹೊಳಿ ಬೆಂಬಲಿಗರು ಮಾತ್ರ ಇನ್ನೂ ತಟಸ್ಥರಾಗಿ ಉಳಿದಿದ್ದಾರೆ. 

4) ರಾತ್ರಿ 11.45ಕ್ಕೆ ಶುರುವಾಗಿತ್ತು ಬಿಜೆಪಿ ಸರ್ಜಿಕಲ್ ಸ್ಟ್ರೈಕ್: 8 ತಾಸು ನಡೆದದ್ದೇನು?

CM Devendra fadnavis to virat kohli century top 10 news of november 23

ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಹಾಗೂ NCP ನೇತೃತ್ವದ ಸರ್ಕಾರ ರಚಿಸಲು ಎಲ್ಲಾ ಸಿದ್ಧತೆಗಳು ನಡೆದಿದ್ದವು. ಶನಿವಾರದಂದು ಮೂರು ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿಯಾಗುವುದೊಂದೇ ಬಾಕಿ ಇತ್ತು. ಉದ್ಧವ್ ಠಾಕ್ರೆ ಸಿಎಂ ಆಧರೆ ಇನ್ನುಳಿದವರಿಗೆ ಯಾವ ಖಾತೆ ನೀಡುವುದು ಎಂಬುವುದೂ ಫೈನಲ್ ಆಗಿತ್ತು. ಆದರೆ ರಾತ್ರೋ ರಾತ್ರಿ ನಡೆದ ಕ್ಷಿಪ್ರ ಕ್ರಾಂತಿಯಿಂದ NCP ನಾಯಕ ಬಿಜೆಪಿ ಜೊತೆ ಕೈ ಜೋಡಿಸಿ, ಶನಿವಾರ ಬೆಳಗ್ಗೆ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

5) ಸ್ಟಾರ್ ಹೋಟೆಲ್ ರೂಂನಲ್ಲಿ ಕಡತಕ್ಕೆ ಸಹಿ ಪಡೆಯುತ್ತಿದ್ಳು ನಟಿ! ಸೋಮಶೇಖರ್ ಹಚ್ಚಿದ್ರು ಕಿಡಿ

CM Devendra fadnavis to virat kohli century top 10 news of november 23

ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಆರೋಪಗಳ ತೀವ್ರತೆಯೂ ಹೆಚ್ಚಾಗಿದೆ. ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಾಂಬ್ ಸಿಡಿಸಿದ್ದಾರೆ. ಚಲನಚಿತ್ರ ನಟಿಯೊಬ್ಬರು 5-ಸ್ಟಾರ್ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿ, ಕಡತಗಳಿಗೆ ಸಹಿ ಹಾಕಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. 

6) ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

CM Devendra fadnavis to virat kohli century top 10 news of november 23

ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದಿಂದ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಪಾಂಟಿಂಗ್ ಈ ಸಾಧನೆ ಮಾಡಲು ಬರೋಬ್ಬರಿ 376 ಇನಿಂಗ್ಸ್ ತೆಗೆದುಕೊಂಡಿದ್ದರೆ, ಕೊಹ್ಲಿ ಕೇವಲ 188 ಇನಿಂಗ್ಸ್‌ಗಳಲ್ಲಿ ದಾಖಲೆ ಬರದಿದ್ದಾರೆ.

7) ಬಿಗ್‌ಬಾಸ್ ಲೈಟ್‌ ಆಫ್‌ ಆದಮೇಲೆ ಪ್ರಿಯಾಂಕರನ್ನು ಹಗ್ ಮಾಡಿದ ವಾಸುಕಿ!

CM Devendra fadnavis to virat kohli century top 10 news of november 23

ಬಿಗ್‌ಬಾಸ್ ಮನೆಯ ಸೈಲೆಂಟ್ ಹುಡುಗ ಎನಿಸಿಕೊಂಡಿದ್ದ ವಾಸುಕಿ ವೈಭವ್ ಬಗ್ಗೆ ಈಗೀಗ ದೂರುಗಳು ಬರುತ್ತಿವೆ. ಟಾಸ್ಕ್‌ವೊಂದರಲ್ಲಿ ವಾಸುಕಿ ಪ್ರಿಯಾಂಕರನ್ನು ಹಗ್ ಮಾಡಿದ್ದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. 

8) ಗೂಗಲ್‌ನ ಸಣ್ಣ ಕೆಲಸವೊಂದು ಮಾಡಿಕೊಡಿ; ಬರೋಬ್ಬರಿ 10 ಕೋಟಿ ರೂ. ಪಡೆಯಿರಿ!

CM Devendra fadnavis to virat kohli century top 10 news of november 23

ಸಾಫ್ಟ್‌ವೇರ್ ದೈತ್ಯ ಗೂಗಲ್ ಹೊಸದೊಂದು ಪ್ರಕಟಣೆಯನ್ನು ಮಾಡಿದೆ.  ಅದು ಒಂದು ಸಣ್ಣ ಸವಾಲೇ ಸರಿ, ನೀವು 1.5 ಮಿಲಿಯನ್ ಡಾಲರ್ ಹಣವನ್ನು (ಸುಮಾರು 10.76 ಕೋಟಿ ರೂಪಾಯಿ) ನಿಮ್ಮದಾಗಿಸಬಹುದು.

9) ಜನವರಿಯಿಂದ ಫ್ರಿಜ್‌ ಬೆಲೆ 6000 ರು.ವರೆಗೆ ಏರಿಕೆಯಾಗುವ ಸಂಭವ

CM Devendra fadnavis to virat kohli century top 10 news of november 23

ಮುಂದಿನ ವರ್ಷದ ಜನವರಿಯಿಂದ ಜಾರಿಗೆ ಬರಲಿರುವ ನೂತನ ಇಂಧನ ಕ್ಷಮತೆಯ ನಿಯಮಗಳ ಪರಿಣಾಮ ಫೈ-ಸ್ಟಾರ್‌ ರೆಫ್ರಿಜರೇಟರ್‌ಗಳ ಉತ್ಪಾದನಾ ವೆಚ್ಚವು 6000 ರು.ವರೆಗೂ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಗ್ರಾಹಕ ಎಲೆಕ್ಟ್ರಾನಿಕ್ಸ್‌ ಮತ್ತು ಉಪಕರಣಗಳ ತಯಾರಿಕರ ಸಂಘಟನೆ(ಸೀಮಾ) ತಿಳಿಸಿದೆ.

10) ‘ಜೇಮ್ಸ್‌ ಬಾಂಡ್‌’ ಕಾರು ಉದ್ಘಾಟನೆ ದಿನವೇ ಫ್ಲಾಪ್!

CM Devendra fadnavis to virat kohli century top 10 news of november 23

ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿಯಾದ ಟೆಸ್ಲಾ ಸಿದ್ಧಪಡಿಸಿದ ನೂತನ ಮಾದರಿಯ ಎಲೆಕ್ಟ್ರಿಕ್‌ ಕಾರಿನ ಉದ್ಘಾಟನೆ ಸಮಾರಂಭವು ಫ್ಲಾಪ್‌ ಶೋ ಆದ ಘಟನೆ ಲಾಸ್‌ ಏಂಜೆಲೀಸ್‌ನಲ್ಲಿ ನಡೆದಿದೆ.

Latest Videos
Follow Us:
Download App:
  • android
  • ios