ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 16 ವರ್ಷ ಪೂರೈಸಿದ ಕಿಂಗ್ ಕೊಹ್ಲಿ: ವಿರಾಟ್ ಎಲ್ಲದ್ರಲ್ಲೂ ನಂ.1
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 16 ವರ್ಷ ತುಂಬಿವೆ. ಈ ಸಂದರ್ಭದಲ್ಲಿ ಕಿಂಗ್ ಕೊಹ್ಲಿ ಸಾಧನೆಯ ಝಲಕ್ ಮೆಲುಕು ಹಾಕೋಣ ಬನ್ನಿ
ಬೆಂಗಳೂರು: ಯಾವುದೇ ಒಬ್ಬ ಕ್ರಿಕೆಟರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 16 ವರ್ಷ ಆಡೋದು ಅಂದ್ರೆ ಸಾಮಾನ್ಯ ಅಲ್ಲ. ಅಂತದ್ರಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ 16ವರ್ಷ ಪೂರೈಸಿದ್ದಲ್ಲದೇ, 16ವರ್ಷದಿಂದಲೂ ಅದೇ ಕನ್ಸಿಸ್ಟೆನ್ಸಿ ಮೆಂಟೇನ್ ಮಾಡ್ತಿದ್ದಾರೆ. ರನ್ಸ್, ಸೆಂಚುರಿ, ಹಾಫ್ ಸೆಂಚುರಿ ಎಲ್ಲದರನ್ನೂ ಕಿಂಗ್ ಎನಿಸಿಕೊಂಡಿದ್ದಾರೆ..!
ರನ್, ಸೆಂಚುರಿ, ಆಫ್ ಸೆಂಚರಿ, ಎಲ್ಲದರಲ್ಲೂ ಕೊಹ್ಲಿಯೇ ಕಿಂಗ್..!
ಇಂಡಿಯನ್ ಕ್ರಿಕೆಟ್‌ನ ಪವರ್ ಸ್ಟಾರ್ ಯಾರು ಅಂದ್ರೆ, ಅದು ಒನ್ ಆ್ಯಂಡ್ ಓನ್ಲಿ ವಿರಾಟ್ ಕೊಹ್ಲಿ..! ಕೊಹ್ಲಿ ಅನ್ನೋ ಹೆಸರಿನಲ್ಲೇ ಒಂದು ಪವರ್ ಇದೆ. ಈ ಹೆಸರು ಕೇಳಿದ್ರೆ ಸಾಕು, ಕೋಟ್ಯಂತರ ಜನರ ಮೈ ಝುಂ ಅನ್ನುತ್ತೆ ಭಾರತೀಯ ಕ್ರಿಕೆಟ್ ಫ್ಯಾನ್ಸ್‌ಗೆ ಕೊಹ್ಲಿ ಅಂದ್ರೆ ಎಮೋಷನ್, ಆ್ಯಂಡ್ ಸೆಲೆಬ್ರೇಷನ್.
ಕೊಹ್ಲಿಯ ಕ್ಲಾಸ್ ಬ್ಯಾಟಿಂಗ್ ನೋಡೋದೆ ಒಂದು ಅದ್ಭುತ ಅನುಭವ. ಕ್ರಿಕೆಟ್ ದುನಿಯಾದ ಬಿಗ್ಗೆಸ್ಟ್ ಸೂಪರ್ ಸ್ಟಾರ್, ಕಿಂಗ್ ಆಫ್ ರೆಕಾರ್ಡ್ಸ್, ಇಂತಹ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 16 ವರ್ಷ ಪೂರೈಸಿದ್ದಾರೆ. 16ವರ್ಷ ಪೂರೈಸಿದ್ದು ಒಂದು ಸಾಧನೆಯಾದ್ರೆ, 16ವರ್ಷದಿಂದಲೂ ಅದೇ ಕನ್ಸಿಸ್ಟೆನ್ಸಿ, ಮಾಡ್ತಿರೋದು...ದಾಖಲೆಗಳ ಬೇಟೆಯಾಡ್ತಿರೋದು ಮತ್ತೊಂದು ಸಾಧನೆಯಾಗಿದೆ. ಕೊಹ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಎಂಟ್ರಿ ನೀಡಿದಾಗಿನಿಂದ, ರನ್ಸ್, ಸೆಂಚುರಿ, ಹಾಫ್ ಸೆಂಚುರಿ ಎಲ್ಲದರನ್ನೂ ಕೊಹ್ಲಿಯೇ ಮುಂದಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡ ಆಯ್ಕೆ ಮಾಡಿದ ಡಿಕೆ: ಅವಕಾಶ ಕೊಟ್ಟ ಧೋನಿ, ಗಂಗೂಲಿಗೆ ಇಲ್ಲ ಸ್ಥಾನ..!
ರನ್‌ಗಳ ಲೆಕ್ಕಾಚಾರದಲ್ಲಿ ರನ್‌ಮಷಿನ್ ಮುಂದೆ ಯಾರೂ ಇಲ್ಲ..!
ಯೆಸ್, ಸದ್ಯ ಕ್ರಿಕೆಟ್ ದುನಿಯಾದಲ್ಲಿ ಮೂರು ಫಾರ್ಮೆಟ್ ಸೇರಿ ಅತಿಹೆಚ್ಚು ರನ್ ಗಳಿಸಿರೋ ಆಟಗಾರ ಕೊಹ್ಲಿ. ಟೀಂ ಇಂಡಿಯಾಗೆ ಡೆಬ್ಯೂ ಮಾಡಿದಾಗಿನಿಂದ ಟೆಸ್ಟ್, ಒನ್ಡೇ ಮತ್ತು ಟಿ20 ಸೇರಿ ಈವರೆಗೂ ಕೊಹ್ಲಿ 26,942 ರನ್ ಗಳಿಸಿದ್ದಾರೆ. ಬೇರೆ ಯಾವ ಬ್ಯಾಟರ್ಸ್ ಕೂಡ ಕೊಹ್ಲಿ ಹತ್ತಿರಕ್ಕೂ ಇಲ್ಲ. ಟೆಸ್ಟ್ ದ್ವಿಶತಕಗಳ ಲೆಕ್ಕದಲ್ಲೂ ಕೊಹ್ಲಿ ಮುಂದಿದ್ದು, ಒಟ್ಟು 7 ಡಬಲ್ ಸೆಂಚುರಿ ಬಾರಿಸಿದ್ದಾರೆ.
ಶತಕಗಳ ಲೆಕ್ಕಾಚಾರದಲ್ಲೂ ಯಾರೂ ಟಚ್ ಮಾಡೋಕಾಗಲ್ಲ..!
ಶತಕಗಳ ವಿಷ್ಯದಲ್ಲೂ ವಿರಾಟ್‌ರನ್ನ ಯಾರೂ ಟಚ್ ಮಾಡೋಕಾಗಲ್ಲ. 16 ವರ್ಷಗಳಲ್ಲಿ ಕೊಹ್ಲಿ 3 ಫಾರ್ಮೆಟ್ ಸೇರಿ, 80 ಶತಕ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್ ಒಂದರಲ್ಲೇ 50 ಶತಕ ಬಾರಿಸಿದ್ದಾರೆ. ಆ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ.
ಅರ್ಧಶತಕಗಳ ಲೆಕ್ಕಚಾದಲ್ಲೂ ಕೊಹ್ಲಿಯೇ ಟಾಪರ್. ಮೂರು ಫಾರ್ಮೆಟ್ ಸೇರಿ ಈವರೆಗೂ 533 ಪಂದ್ಯಗಳನ್ನಾಡಿರೋ ಚೇಸ್ ಮಾಸ್ಟರ್, 140 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಫಿಫ್ಟಿ ಓವರ್ ಫಾರ್ಮೆಟ್ನಲ್ಲಿ 72, ಟೆಸ್ಟ್ನಲ್ಲಿ 30, T20ಯಲ್ಲಿ 38 ಬಾರಿ ಅರ್ಧಶತಕದ ಗಡಿ ತಲುಪಿದ್ದಾರೆ.
ಅವಾರ್ಡ್‌ಗಳ ವಿಷ್ಯದಲ್ಲೂ ಕೊಹ್ಲಿಯೇ ಎಲ್ಲರಿಗಿಂತ ಟಾಪರ್..!
ಇನ್ನು ಅವಾರ್ಡ್‌ಗಳ ವಿಷ್ಯದಲ್ಲೂ ವಿರಾಟ್ ಎಲ್ಲರಿಗಿಂತ ಮುಂದಿದ್ದಾರೆ. 67 ಪಂದ್ಯಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, 21 ಸಿರೀಸ್ಗಳಲ್ಲಿ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನ ವಿರಾಟ್ ಮುಡಿಗೇರಿಸಿಕೊಂಡಿದ್ದಾರೆ. 10 ಬಾರಿ ಐಸಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಅತಿಹೆಚ್ಚು ಬಾರಿ ಐಸಿಸಿ ಪ್ರಶಸ್ತಿ ಪಡೆದ ಆಟಗಾರ ಅನ್ನೊ ದಾಖಲೆ ಬರೆದಿದ್ದಾರೆ.
ಇವಿಷ್ಟೇ ಅಲ್ಲ, ನಾಯಕನಾಗಿ ಹೈಯೆಸ್ಟ್ ರನ್, ಹೈಯೆಸ್ಟ್ ಸೆಂಚುರಿ, ಹೈಯೆಸ್ಟ್ 150+ ರನ್, ಅತ್ಯಧಿಕ ದ್ವಿಶತಕ, ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸಿರೀಸ್ ಪಡೆದ ದಾಖಲೆಯೂ ಕೊಹ್ಲಿ ಹೆಸರಿನಲ್ಲಿದೆ. ಇವಷ್ಟೇ ಅಲ್ಲ. 15 ವರ್ಷಗಳ ಕಾಲ ಕೊಹ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನ ಬರೆದಿದ್ದಾರೆ.
ಇವಷ್ಟೇ ಅಲ್ಲ. 16 ವರ್ಷಗಳ ಕಾಲ ಕೊಹ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನ ಬರೆದಿದ್ದಾರೆ. ಮತ್ತಷ್ಟು ವರ್ಷ ಕೊಹ್ಲಿ ಕ್ರಿಕೆಟ್ ಆಡಲಿ, ಮತ್ತಷ್ಟು ರೆಕಾರ್ಡ್ಗಳನ್ನ ಬರೆಯಲಿ ಅನ್ನೋದೆ ಕೋಟ್ಯಂತರ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್